(www.vknews.com) : ನಮ್ಮ ದೇಶದಲ್ಲಿ ಕೊರೋನ ವೈರಸ್ ದಾಳಿಗಿಂತ ಇಸ್ಲಾಮೋಫೋಬಿಯಾ ವೈರಸ್ ಹೆಚ್ಚು ಶಕ್ತಿಶಾಲಿಯಾಗಿ ಲಾಕ್ ಡೌನ್ ಘೋಷಿಸುವ ಮೊದಲಿದ್ದ 300 ಚಿಲ್ಲರೆ +ve ರೋಗಿಗಳಿಂದ 40 ದಿವಸದೊಳಗೆ 39ಸಾವಿರಕ್ಕಿಂತಲೂ ಅಧಿಕ ರೋಗಿಗಳು ಸೋಂಕಿತರಾದರು!?
ಮುಸ್ಲಿಮರ ತಬ್ಲೀಗ್ ಜಮಾಅತಿನ ಸಭೆಯೊಂದು ಸೇರಿದ ಮಾತ್ರಕ್ಕೆ ಮಾಧ್ಯಮಗಳು ಸಿಖ್ಖರ, ಹಿಂದೂಗಳ ಸಭೆ ಜಾತ್ರೆಗಳನ್ನು ಕಂಡೂ ಕುರುಡರಂತೆ ನಟಿಸಿ, ಮುಸ್ಲಿಮರ ಸಭೆಯನ್ನು ಸುದೀರ್ಘವಾಗಿ ಚರ್ಚಿಸಿ, ಕೊರೋನ ವಾಹಕರು ತಬ್ಲೀಗ್ ಗರೆಂದು ಚಿತ್ರಿಸುವಲ್ಲಿ ಯಶಸ್ವಿಯಾದರು! ದೇಶವಾಸಿಗಳ ಮುಂದೆ ಮುಸ್ಲಿಮರು ತಲೆತಗ್ಗಿಸುವಂತೆ ಮಾಡಿ ಹಾಲು ಕುಡಿದರು. ಇದಕ್ಕೆ ಪೂರಕವೆಂಬಂತೆ ಹಳೆಯ ವಿಡಿಯೋಗಳೆಂಬ ಮದ್ದನ್ನು ಹೊಸ ಬಾಟಲಿಯಲ್ಲಿ ಹಾಕಿ ಜನರ ಮುಂದಿಟ್ಟು ಸತ್ಯವಾದ ಘಟನೆಯೆಂದು ನಂಬಿಸಿದ್ದರು! ಮುಸ್ಲಿಂ ಸಮುದಾಯ ಅವಮಾನಗೊಂಡು, ಮೌನಕ್ಕೆ ಶರಣಾಗಿ ತಬ್ಲೀಗ್ ಸಂಘಟನೆಯನ್ನು ಶಪಿಸ ತೊಡಗಿದರು
ಖಂಡಿತ ಮೇಲಿನ ಘಟನೆ ಮುಸ್ಲಿಂ ಸಮುದಾಯಕ್ಕೆ ಒಂದು ಪಾಠವಾಗಿದೆ! ಒಟ್ಟಾರೆಯಾಗಿ ಕೊರೋನ ಸೋಂಕಿತರ ಪೈಕಿ ಶೇ 10-20% ಸೋಂಕಿತರು ತಬ್ಲೀಗ್ ಗಳಿಂದ ಹರಡಿದ್ದು ಆಗಿದ್ದು, ಮಿಕ್ಕ ಸೋಂಕಿತರು ಯಾರಿಂದ ಎಂದು ಮಾಧ್ಯಮಗಳು ವಿವರಿಸಲು ವಿಫಲರಾದರು. ಕಾರಣ ಅವರ ಹೃದಯ, ಮನಸ್ಸುಗಳು ಇಸ್ಲಾಮೋಪೋಬಿಯಾ ಆವರಿಸಿದೆ.
– ಖಾದರ್ ಕೆನರಾ
ಸದ್ಯ ಈಗ ಕೋರಂಟೈನ್ ಸಡಿಲುಗೊಳ್ಳುತ್ತಿದೆ. ಸಾಮೂಹಿಕ ನಮಾಜು, ತರಾಬೀಹ್, ಮಸೀದಿಯಲ್ಲಿ ಇಫ್ತಾರ್ ಸಡಿಲುಗೊಳ್ಳದೆ, ಈದ್ ಶಾಪಿಂಗ್ ಸಡಿಲುಗೊಂಡಿದೆ. ಮಾಧ್ಯಮ ಮತ್ತು ಕೆಲ ಪೀತ ಮನಸ್ಸುಗಳಿಗೆ ವೈರಸ್ ಇನ್ನೊ ಹೆಚ್ಚಳವಾಗಿ ಮುಸ್ಲಿಮರನ್ನು ಇನ್ನೊಮ್ಮೆ ಅಪಹಾಸ್ಯ ಮಾಡಬೇಕಾಗಿದೆ. ಈ ಸಮುದಾಯವನ್ನು ಮೂರನೇ ದರ್ಜೆಗೆ ಕುಳ್ಳಿರಿಸ ಬೇಕಾಗಿದೆ! ತಬ್ಲೀಗ್ ಘಟನೆಯಂತೆ ಈದ್ ಶಾಪಿಂಗ್ ಕಾರಣ ನೀಡಿ TRP ಹೆಚ್ಚಿಸಬೇಕಾಗಿದೆ.
ಆದ್ದರಿಂದ ಮುಸ್ಲಿಮರು ಕೊರೋನ ವೈರಸ್ ನಿರ್ಣಾಮಕ್ಕಾಗಿ ಮಸೀದಿ ಪ್ರವೇಶವನ್ನು ತ್ಯಾಗ ಮಾಡಿದಂತೆ ಈದ್ ಶಾಪಿಂಗ್ ತ್ಯಾಗ ಮಾಡಿ ಸಮುದಾಯದ ಮಾನ ಕಾಪಾಡಲಿ!
ಲೇಖನ : ಖಾದರ್ ಕೆನರಾ, ಪುತ್ತೂರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.