(www.vknews.com) : ಅದೊಂದು ಕಾಲವಂತೆ, ಮನೆಯ ಹೊಕ್ಕಬೇಕಾದರೆ ತಲೆ ಬಗ್ಗಿಸಿ,ಚಿಮಿಣಿ ದೀಪದ ಬೆಳಕಿನಿಂದ ಕಣ್ಣು ಮಿಟುಕಿಸುತ್ತಾ ತೆರಳಬೇಕು. ವರ್ಷಕ್ಕೊಂದು ಉಡುಪು ಪೈಸೆ ಕೊಟ್ಟು ಖರೀದಿಸುವ ಕಾಲ. ಮದುಮಗ-ಮಗಳು ನಡೆದೇ ಪ್ರಯಾಣ ಬೆಳೆಸುತ್ತದ್ದ ಸಮಯ, ನಮ್ಮಂತಹ ಜನರೇಷನ್ಗೆ ಊಹಿಸಲೂ ಸಾಧ್ಯವಿಲ್ಲ. ಜಾತಿ-ವರ್ಣ-ಪಂಗಡಗಳ ವ್ಯತ್ಯಾಸವಿಲ್ಲದೇ ಒಟ್ಟಾಗಿ ಗದ್ದೆ ತೋಟಗಳಲ್ಲಿ ದುಡಿಯುತ್ತಿದ್ದರು. ಸಂಬಳ ಅನ್ನುವ ಪದವೇ ಕೇಳಿರಳು ಸಾಧ್ಯವಿಲ್ಲ. ಇಂದು ರಾಮನ ಮನೆಯಲ್ಲಿ ಉಳುಮೆಯಾದರೆ ಅಲ್ಲಿ ರಹೀಮ ಜೋಸೆಫ ಎಲ್ಲರು ಜೊತೆಯಲ್ಲಿ ಉಳುಮೆ ಮಾಡುವುದು,ಮರು ದಿನ ರಹೀಮನ ಮನೆಯಲ್ಲಿ ಉಳುಮೆ ಆದರೆ ನಿನ್ನೆಯ ರಾಮ ಜೋಸೇಫ ಎಲ್ಲರೂ ಉಳುವುದು, ಇದೇ ಅಂದಿನ ವ್ಯವಸಾಯದ ನಿಯಮ. ಇದೇ ರೀತಿಯಲ್ಲಿ ಸಾಗುತ್ತಿತ್ತು ಹಳ್ಳಿ ಪ್ರದೇಶವಾದ ಕೆಮ್ಮಾರ ಎಂಬ ಸಣ್ಣ ಊರಿನ ದಿನಗಳು.
ಜುಳು-ಜುಳು ಶಬ್ದದಲ್ಲಿ ಸಣ್ಣದಾದ ತೋಡು ಕುಮಾರ ಪರ್ವತದಿಂದ ಇಳಿದು ಬಂದು ಈ ಸಣ್ಣ ಊರಿನ ಒಡಲಲ್ಲಿ ಹರಿದು ಜನರ ದೈನಂದಿನ ಜೀವನದಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಿತ್ತು. ಮಳೆಗಾಲದಲ್ಲಿ ಪ್ರಕೃತಿ ಸೌಂದರ್ಯವನ್ನು ಹಚ್ಚ ಹಸುರುಗೊಳಿಸಿ ದಡಗಳಲ್ಲಿರುವ ಗದ್ದೆ ತೋಟಗಳನ್ನು ಕರುಣಿಸುತ್ತಿತ್ತು. ಅಲ್ಪ ಮನರಂಜನೆ, ಅವಘಡಗಳು ಎಲ್ಲವನ್ನೂ ಒಡಲಲ್ಲಿ ಇರಿಸಿ ಒಂದು ಚರಿತ್ರೆಗಳನ್ನೇ ಹೊತ್ತುಕೊಂಡು ಈಗ ಮಳೆಗಾಲದಲ್ಲಿ ಮಾತ್ರ ಹರಿದು ಕಣ್ಮರೆಯಾಗುತ್ತದೆ.
ಮುರ್ಶಿದ್ ಕೆಮ್ಮಾರ
ಹೇಗೆ ಕಿರುನದಿಯೊಂದು ಜಾತಿ ಮತ ಪಂಗಡ ವರ್ಣಗಳ ವ್ಯತ್ಯಾಸವಿಲ್ಲದೇ ಅತ್ತ ತಂಬಿಯಣ್ಣರ ತೋಟದ ಬದಿಯಲ್ಲಿ ಹರಿದು, ಅಬ್ಬಾಸ್ಹಾಜಿಯವರ ತೋಟದ ಬಳಿಯಿಂದ ಹರಿದು ಬರುವಾಗ ಮರುಭಾಗದಿಂದ ಕೆಮ್ಮಾರ ದೇವಸ್ಥಾನದ ಬಳಿಯ ಕಣಿಯಿಂದ ಇಸ್ಮಾಯಿಲ್ ಹಾಜಿಯವರ ತೋಟದ ಮೂಲಕ ಕೆಮ್ಮಾರ ಮಸೀದಿ ಬಳಿ ಸಂಗಮಗೊಂಡು, ಮುಂದೆ ಹರಿದದ್ದು ಕರಿಯಪ್ಪಣ್ಣರ ತೋಟದ ಬದಿಯಿಂದ. ಆಹಾ ಅಲ್ಲಿ ಇಲ್ಲಿಂದ ಜೊತೆ ಜೊತೆಯಾಗಿ ಸೇರಿ ಎದೆ ತುಂಬಿ ಹರಿಯುವ ರಭಸಕ್ಕೆ ತಂಬಿಯಣ್ಣರ ತೋಟದ,ಅಬ್ಬಾಸ್ಹಾಜಿಯವರ ತೋಟದ,ಕರಿಯಪ್ಪಣ್ಣರ ತೋಟದ ತೆಂಗಿನಕಾಯಿ ಎಲ್ಲವನ್ನೂ ಹೊತ್ತು ಮೊದಲೆಗುಂಡಿ ತಲುಪುತ್ತದೆ. ತೋಡೇಕೆ ಇಲ್ಲಿನ ಜನಮನಸ್ಸುಗಳು ಹಾಗೆಯೇ ಇದೆ ಎಂಬೂದನ್ನು ಮೇಲೊಮ್ಮೆ ವಿವರಿಸಿದೆ. ಅನ್ಯರು ಎಂಬ ಭಾವನೆಗಳನ್ನು ಕೆಮ್ಮಾರ ಮರೆತು ಬಿಟ್ಟಿದೆ. ಆ ಭಾವನೆ ಬಾರದಿರಲಿ, ಇಲ್ಲಿ ಜಾತಿ ಮತ ಪಂಗಡಗಳನ್ನು ಮರೆತು ಇರುವಷ್ಟು ಕಾಲ ಜೊತೆಜೊತೆಯಾಗಿ, ಪರಸ್ಪರ ಬೆರೆತು,ಸಹಕರಿಸಿ ಬಾಳೋಣ. ಜಾತಿಗಳ ಮಧ್ಯೆ ಬಿರುಕುಗಳು ಹುಟ್ಟಿಸುವ ಯಾವುದೇ ದುಷ್ಟಶಕ್ತಿಗಳು ನಮ್ಮೂರಿನ ಸುಂದರವಾದ ವಾತಾವರಣವನ್ನು ಕೆಡದಿರಲಿ ಎಂದು ಪ್ರಾರ್ಥಿಸುತ್ತಾ…..
ಸಕಲ ಕಾಲ ಇಂತೆಯೆ ಇರಲಿ, ದುಷ್ಟಶಕ್ತಿ ಊರ ಮುಟ್ಟದಿರಲಿ, ಜಾತಿ ಮತಗಳು ಮನೆಯೊಳಗಿರಲಿ ಕುಲವೆಂದೊಂದೆ ಮರೆಯದಿರಲಿ||
✒ ಮುರ್ಶಿದ್ ಕೆಮ್ಮಾರ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.