(www.vknews.com) : ಪ್ರತಿವಾರ ಸಾವಿರಾರು ಜನರು ಬೆಂಗಳೂರಿನಿಂದ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಅವರ ಮುಖದಲ್ಲಿ ಏನೋ ಒಂದು ಸಂತೋಷದ ಕಳೆ. ತನ್ನ ಪ್ರೀತಿಪಾತ್ರರನ್ನು ನೋಡುವ ಹಂಬಲ. ತಮ್ಮ ಊರುಗಳಿಗೆ ತಲುಪುವುದರಿಂದ ಕರೋನ ಮಹಾಮಾರಿ ಮಾಯವೇನೂ ಆಗುವುದಿಲ್ಲ. ಆದರೆ ಜನರ ಗುರಿ ಕೆಲವು ತಿಂಗಳುಗಳ ಕಾಲವಾದರೂ ತಮ್ಮ ಕುಟುಂಬಸ್ಥರೊಂದಿಗೆ ಇರುವ ಬಯಕೆ.
ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಸಾವಿರಾರು ಜನರು ತಮ್ಮ ಊರುಗಳಿಗೆ ತೆರಳಲು ಕಾದು ನಿಂತಿದ್ದರು. ಬೆಂಗಳೂರಿನ ಅನೇಕ ಸಮಾಜ ಸೇವಕರು, ವಿಶೇಷವಾಗಿ ಮುಸ್ಲಿಂ ಸಮಾಜ ಸೇವಕಿಯರು ಅಲ್ಲಿಗೆ ತೆರಳಿ ಊಟದ ವ್ಯವಸ್ಥೆ ಮಾಡಿದರು. ಸಾವಿರಾರು ಫುಡ್ ಪ್ಯಾಕೇಟುಗಳನ್ನು ಮತ್ತು ನೀರಿನ ಬಾಟಲಿಗಳನ್ನು ಹಂಚಿ ತಮ್ಮ ನಿಸ್ವಾರ್ಥ ಅಳಿಲು ಸೇವೆಯನ್ನು ಸಲ್ಲಿಸಿದರು. ಈ ಸೇವೆಯಲ್ಲಿ ಕಂಡು ಬಂದ ವಿಷಯವೆಂದರೆ, ಎಲ್ಲರಲ್ಲು ಸಾಮರಸ್ಯ ಎದ್ದು ಕಾಣುತ್ತಿತ್ತು, ಅಲ್ಲಿ ಎಲ್ಲರು ಒಂದಾಗಿದ್ದರು. ನನಗೆ ತಿಳಿದ ಪ್ರಕಾರ ಪ್ರಯಾಣಿಕರ ಮೂಲಕ ದೇಶದ ಮೂಲೆ ಮೂಲೆಗೆ ಒಂದು ಒಳ್ಳೆಯ ಸಂದೇಶ ರವಾನೆಯಾಯಿತು. ನಾವೆಲ್ಲ ಭಾರತೀಯರು ಒಂದೆ, ಜಾತಿಧರ್ಮಗಳ ಜಗಳಗಳು ಬೇಡ, ಒಬ್ಬರನ್ನೊಬ್ಬರು ಕಷ್ಟ ಕಾಲದಲ್ಲಿ ಆದಷ್ಟು ಸಹಾಯ ಮಾಡುತ್ತ ಸಾಗೋಣ ಎಂಬ ಸಂದೇಶದ ಕಿರಣ ಎಲ್ಲರ ಮುಖದಲ್ಲಿ ಎದ್ದು ಕಾಣುತ್ತಿತ್ತು. ಕಣ್ಣುಗಳಲ್ಲಿ ಸಹಾಯ ಮಾಡುವ ಮನಸ್ಥಿತಿ, ಕರುಣೆಯ ಹೊನಲು ಹೊಕ್ಕಿ ಹರಿಯುತ್ತಿತ್ತು.
ಬೆಂಗಳೂರಿನ ಎಲ್ಲ ಸಮಾಜ ಸೇವಕರಿಗೆ, ಸಂಘಟಿತ ಮತ್ತು ಅಸಂಘಟಿತ ಸೇವಾ ಸಂಸ್ಥೆಗಳಿಗೆ ಹಿಂದೂಸ್ತಾನ್ ಸೂಫಿ ಮೂವ್ ಮೆಂಟ್ ತನ್ನ ಹೃತ್ಪೂರ್ವಕ ವಂದನೆಗಳನ್ನು ಸಲ್ಲಿಸುತ್ತದೆ.
– ಜಬೀವುಲ್ಲಾ ಖಾನ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.