ಅಜ್ಜನ ಪ್ರೀತಿ
ಬಿಗಿ ಅಪ್ಪುಗೆಯ ಜೊತೆಗೆ ಸಿಹಿ ಮುತ್ತ ನೀಡುವರು ಮೆಲ್ಲಗೆ ಬಿದ್ದರೆ ಸಮಾಧಾನಿಸಿ ಉಪದ್ರವನು ಕ್ಷಮಿಸಿ ಕಥೆಗಳನೇಳುತಾ ನಗಿಸುವರು ಆಟವಾಡಿ ಸಂಭ್ರಮಿಸುವರು ಕೊನೆಯಿಲ್ಲದ ಪ್ರೀತಿ ಅಜ್ಜನದು ಜೊತೆಗಿದ್ದರೆ ಅಜ್ಜ ಬೇರೇನು ಬೇಕೆನಿಸದು.
– ರಮ್ಮತ್ ನಂದರಬೆಟ್ಟು °°°°°°°°°°°°°°°°°°°°°°°°°°°°°° ಅಜ್ಜನ ಪ್ರೀತಿ
ಅಂಬೆಗಾಲಿಗೆ ಹೆಜ್ಜೆಯಾಗಿ ತುಂಟಾಟಕೆ ತಲೆದೂಗಿ ಕುಣಿತದಲ್ಲಿ ಭಾಗಿಯಾಗಿ ನಗುವಿನಲ್ಲಿ ನಗುವಾಗಿ ಬೊಚ್ಚು ಬಾಯಿಗೆ ಜೊತೆಯಾಗಿ ಚೊಚ್ಚಲು ನುಡಿಗೆ ಸಾಕ್ಷಿಯಾಗಿ ಮತ್ತೆ ಮಗುವಿನೊಂದಿಗೆ ಮಗುವಾಗಿ ನಲಿಡಾಡಿದ ಮುಗ್ಧ ಜೀವಿ.
– ಆಯಿಷಾ ಪೆರ್ನೆ °°°°°°°°°°°°°°°°°°°°°°°°°°°°°°°°°°°
ತಂದೆಯ ಪ್ರತಿರೂಪವಾಗಿ ಪ್ರೀತಿಯ ಮರವಾಗಿ ಅವ್ವನ ಹಾಗೆ ಕಾಳಜಿ ನೀಡಿ ಆಟ ಪಾಠದಲ್ಲಿ ಜೊತೆಗೂಡಿ ಸಣ್ಣ ಸಣ್ಣ ಕಥೆಗಳ ಹೇಳಿ ಮುದ್ದಾಡಿಸುವ ಜೀವ ನನ್ನ ಅಜ್ಜ
– ಶಾರಿಕ ಸಾಲೆತ್ತೂರು °°°°°°°°°°°°°°°°°°°°°°°°°°°°°°°°° ನನ್ನಜ್ಜ
ಬಿಳಿ ಶರ್ಟು ಲುಂಗಿ , ಮುಂಡಾಸು ತಲೆಯಲಿ ಅವರ ಮಂದಹಾಸದ ಮುಖವೇ ನನ್ನ ಕಣ್ಣಂಚಲಿ ತಿಂಗಳಿಗೊಮ್ಮೆ ನೋಡಲು ಬರುತ್ತಿದ್ದರು ಮೊಮ್ಮಗಳನ್ನು ಲಕೋಟೆಗಳಲಿ ತುಂಬಿ ತರುತ್ತಿದ್ದರು ಸಿಹಿ ತಿನಿಸುಗಳನ್ನು ಮೊದಲ ಹೆಜ್ಜೆಯಲ್ಲಿ ಕೈಯ್ಯನಿಡಿದು ನಡೆಸಿದ್ದರು ನನ್ನಂದು ನನ್ನ ಜೀವನದ ಅತ್ಯಮೂಲ್ಯ-ಘಟ್ಟ ನೋಡಲು ಅವರಿಲ್ಲ ಇಂದು !
– ಜುವೈರಿಯ ಮುಫೀದ °°°°°°°°°°°°°°°°°°°°°°°°°°°°°°°°°° ಅಜ್ಜನ ಪ್ರೀತಿ
ಅಂಬೆಗಾಲಿಡುತ್ತಿರುವಾಗ ಕೈ ಹಿಡಿದು ಮೇಲಕ್ಕಿತ್ತಿ ನಡೆದಾಡಿಸಿದ್ದರು ಅಜ್ಜ..
ನಡೆದಾಡಿ ಕುಳಿತಲ್ಲಿಂದ ಮೇಲೇಲಲು ಕೈ ತೋರಿಸಿ ಎತ್ತು ಅನ್ನುತ್ತಿದ್ದಾರೆ ಇದೀಗ ಅಜ್ಜ.
ಬಾಲ್ಯ ಮುಪ್ಪು ಎರಡೂ ಪ್ರಪಂಚದ ಮುಗ್ಧ ಬುದ್ದಿ ಜೀವಿಗಳು..
– ಉಮ್ಮು ಜಿಕೆ °°°°°°°°°°°°°°°°°°°°°°°°°°°°°°°°°°°
” ಅಜ್ಜನ ಪ್ರೀತಿ “
ನಾ ಅತ್ತಾಗ ನನ್ನ ಸಂತ್ತೈಸುವ ನಾ ನಕ್ಕಾಗ ತಾನೂ ಕುಣಿದಾಡುವ ನನ್ನ ಗೆಲುವಿನಲ್ಲಿ ತನ್ನ ನೋವ ಮರೆಯುವ ನಿಷ್ಕಲ್ಮಶ ಪ್ರೀತಿಯನ್ನ ತೋರಿಸುವ ಆತ ನನ್ನ ತಾತ !
– ರಫೀನ °°°°°°°°°°°°°°°°°°°°°°°°°°°°°°°°°°°
“ಕನ್ನಡ- ಬ್ಯಾರಿ ಲೇಖಕಿಯರ ಸಾಹಿತ್ಯ ಕೂಟ” ಈ ನಮ್ಮ ವಾಟ್ಸಪ್ ಬಳಗದ ಉದಯೋನ್ಮುಖ ಕವಯತ್ರಿಯರು “ಅಜ್ಜನ ಪ್ರೀತಿ” ಯ ಕುರಿತು ರಚಿಸಿದ ಸುಂದರ ಹನಿಗವನಗಳು.
– ಹಫ್ಸಾ ಬಾನು ಬೆಂಗಳೂರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.