(www.vknews.in) : ಅಂದು ನಾಥೂ ರಾಮ್ ಗೋಡ್ಸೆ ಗಾಂಧಿ ಕಾಲಿಗೆ ನಮಸ್ಕರಿಸಿ ಗುಂಡು ಹಾರಿಸಿ ಕೊಂದ ರೀತಿಯಲ್ಲಿಯೇ ಮೋದಿ ಸಂಸತ್ ಗೆ ನಮಸ್ಕರಿಸಿ ಸಂವಿಧಾನವನ್ನ ಕೊಲ್ಲುವ ಕೆಲಸಕ್ಕೆ ಕೈಹಾಕಿದ್ದಾರೆ’ ಎಂದು ಕಾಂಗ್ರೆಸ್ ಮುಖಂಡ ಜೀಷಾನ್ ಗಂಭೀರ ಆರೋಪ ಮಾಡಿದ್ದಾರೆ.
‘ನೇರವಾಗಿ ಸಂವಿಧಾನ ಮುಟ್ಟುವ ಧೈರ್ಯ ಬಿಜೆಪಿಗರಿಗೆ ಇಲ್ಲ. ಹಾಗಾಗಿ ಬೇರೆ ಬೇರೆ ಮಾರ್ಗದಲ್ಲಿ ಅದರ ಶಕ್ತಿ ಕುಂದಿಸುವ ಕೆಲಸ ಮಾಡ್ತಿದ್ದಾರೆ. ಗಾಂಧಿಯನ್ನು ಕೊಂದಿದ್ದು ಯಾರು..? ನಾಥ್ ರಾಮ್ ಗೂಡ್ಸೆ ಕೊಂದ. ಗಾಂಧಿಯನ್ನು ಕೊಲ್ಲುವ ದಿನ ನಾಥ್ ರಾಮ್ ಗೂಡ್ಸೆ ಕಾಲಿಗೆ ನಮಸ್ಕರಿಸಿ ಗುಂಡು ಹಾರಿಸುತ್ತಾನೆ. ಈ ಮಣ್ಣಿನಲ್ಲಿ ಕುವೆಂಪು ಟಿಪ್ಪು ಜನ್ಮ ತಾಳಿದರು. ಕಡಿದಾಳು ಮಂಜಪ್ಪ, ಶಾಂತವೇರಿ ಗೋಪಾಲಗೌಡರು ಜನಿಸಿದ ರಾಜ್ಯ ಇದು. ಇಂದು ಅವರ ಹೆಸರು ಹೇಳಲು ಸಹ ನಾವು ಅರ್ಹತೆ ಕಳೆದುಕೊಳ್ಳುತ್ತಿದ್ದೇವೆ.ನಾಡಿನ ಹಲವು ಮೇಧಾವಿಗಳಿಗೆ ಅವಮಾನ ಮಾಡಲಾಗಿದೆ.ಸಂವಿಧಾನ ರಚನೆ ಮಾಡಲು ಈ ದೇಶದಲ್ಲಿ ಬಹಳ ಜನರಿದ್ದರು.ಆವಾಗ ಮೀಸಲಾತಿ ಇರಲಿಲ್ಲ. ಆದರೂ ಅಂಬೇಡ್ಕರ್ ಅವರನ್ನು ಕರಡು ಸಮಿತಿಗೆ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.ಮಕ್ಕಳ ಮನಸ್ಸಿನಲ್ಲಿ ಹೆಡಗೆವಾರ್ ವಿಚಾರ ತುಂಬಿ ಏನು ಸಾಧಿಸಲು ಹೊರಟ್ಟಿದ್ದೀರಿ .
– ಜೀಷಾನ್, ಅರಕಲಗೂಡು ಯುವ ಕಾಂಗ್ರೆಸ್ ಮುಖಂಡರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.