ತಿರುವನಂತಪುರಂ (ವಿಶ್ವ ಕನ್ನಡಿಗ ನ್ಯೂಸ್) : ತುಂಬುಗರ್ಭಿಣಿಯಾಗಿದ್ದ ಆನೆಯೊಂದು ರಸ್ತೆ ಮಧ್ಯದಲ್ಲೇ ಮರಿಗೆ ಜನ್ಮವಿತ್ತಿರುವ ಘಟನೆ ಕೇರಳದಲ್ಲಿ ನಡೆದಿದೆ.
ಇದರಿಂದಾಗಿ ಕೇರಳ ಮತ್ತು ತಮಿಳುನಾಡನ್ನು ಸಂಪರ್ಕಿಸುವ ರಸ್ತೆಯಲ್ಲಿ ಸುಮಾರು ಒಂದು ಗಂಟೆಗಳ ಕಾಲ ವಾಹನ ದಟ್ಟಣೆ ಉಂಟಾಗಿತ್ತು. ಹಿಂಡಿನೊಂದಿಗೆ ಬರುತ್ತಿದ್ದ ಆನೆಗೆ ರಸ್ತೆಯ ಮಧ್ಯಕ್ಕೆ ಬರುವಷ್ಟರಲ್ಲೇ ಹೆರಿಗೆಯಾಗಿದೆ. ಕೂಡಲೇ ಆ ಆನೆಗೆ ಆನೆಯ ಹಿಂಡು ರಕ್ಷಣೆ ನೀಡುತ್ತಾ ನಿಂತಿವೆ.
ಒಂದು ಗಂಟೆಯ ನಂತರ ತಾಯಿ ಆನೆಯು ಮರಿಯಾನೆಯನ್ನು ಕರೆದುಕೊಂಡು ಕಾಡೊಳಗೆ ಹೋದ ನಂತರವೇ ಆನೆ ಹಿಂಡು ಕಾಡೊಳಗೆ ನಡೆದಿದ್ದು, ಬಳಿಕ ವಾಹನ ಸಂಚಾರಕ್ಕೆ ಅವಕಾಶ ಸಿಕ್ಕಿದೆ. ಇದರ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.