ಇಂದು ಕೇವಲ ಸ್ಟೇಟಸ್ ಅಲ್ಲಿ ಮಾತ್ರ ತಂದೆ ತಾಯಿಯನ್ನು ಪ್ರೀತಿಸುವಂತೆ ಆಗಿದೆ..
ಬಂಟ್ವಾಳ (ವಿಶ್ವ ಕನ್ನಡಿಗ ನ್ಯೂಸ್) : ಮಕ್ಕಳು ಕೇಳಿದ್ದನ್ನೆಲ್ಲಾ ತೆಗೆದುಕೊಟ್ಟು ಜಂಬ ಕೊಚ್ಚಿಕೊಳ್ಳುವುದು ಹೆತ್ತವರ ಲಕ್ಷಣವಲ್ಲ, ಸಣ್ಣಪ್ರಾಯದಲ್ಲೇ ಮಕ್ಕಳಿಗೆ ಅಲ್ಲಾಹುವಿನ ಬಗ್ಗೆ ಅರಿವು ಮೂಡಿಸಬೇಕು. ಇಂದು ಕೇವಲ ಸ್ಟೇಟಸ್ ಅಲ್ಲಿ ಮಾತ್ರ ತಂದೆತಾಯಿಯನ್ನು ಪ್ರೀತಿಸುವಂತೆ ಆಗಿದೆಯೇ ಹೊರತು ನಿಜಜೀವನದಲ್ಲಿ ನೋಡಿದರೆ ಹೆತ್ತವರನ್ನು ಸರಿಯಾಗಿ ನೋಡುವ ಮಕ್ಕಳಿಲ್ಲ ಎಂದು ಮುಹಿಯುದ್ದೀನ್ ಜುಮಾ ಮಸೀದಿ ಮಿತ್ತಬೈಲ್ ಖತೀಬರಾದ ಹಾಜಿ ಅಶ್ರಫ್ ಫೈಝಿ ಇಂದು ಜುಮಾ ನಮಾಜ್ ನಂತರ ಮಾತನಾಡುತ್ತಾ ಹೇಳಿದರು.
ಮಾತು ಮುಂದುವರೆಸಿದ ಖತೀಬರು, ಪೋಷಕರು ಮಕ್ಕಳೊಂದಿಗೆ ಉತ್ತಮ ಸ್ನೇಹಿತರಂತೆ ವರ್ತಿಸಿ, ಅವರ ಮನಸ್ಸಿನ ನೋವು, ನಲಿವು, ಸಂತೋಷಗಳನ್ನು ಮನಗೊಂಡು ಅದಕ್ಕಾನುಸಾರವಾಗಿ ಅವರೊಂದಿಗೆ ಬೆರೆತು ಒಳಿತನ್ನು ಭೋಧನೆ ಮಾಡುವ ಪ್ರಕ್ರಿಯೆ ಪೋಷಕರ ಭಾಗದಿಂದ ನಡೆಯಬೇಕು. ಎಷ್ಟೇ ಉನ್ನತ ವಾದ ಲೌಕಿಕ ವಿದ್ಯಾಭ್ಯಾಸವನ್ನು ನೀಡಿದರೂ ಅಲ್ಲಾಹುವಿನ ಬಗ್ಗೆ ಅರಿವು ಮೂಡಿಸದಿದ್ದಲ್ಲಿ ಎಲ್ಲಾ ವಿದ್ಯಾಭ್ಯಾಸ ವ್ಯರ್ಥವಾಗಲಿದೆ ಎಂದರು.
ಮಕ್ಕಳು ಕೇಳಿದಷ್ಟು ಹಣವನ್ನು ಕೊಡುವುದಲ್ಲ. ಅದು ಯಾವುದಕ್ಕೆ ಖರ್ಚು ಮಾಡುತ್ತಿಯ ಎಂಬುದು ತಿಳಿಯಬೇಕು. ದುಂದು ವೆಚ್ಚ ಮಾಡುವುದು ತಡೆಯಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇದುವೇ ನಮಗೆ ಮಾರಕವಾಗುತ್ತದೆ. ಮಕ್ಕಳು ಸಜ್ಜನರಾಗುವುದುದಕ್ಕಿಂತ ದೊಡ್ಡ ಆಸ್ತಿ ಹೆತ್ತವರರಿಗೆ ಬೇರೊಂದಿಲ್ಲ ಎಂದು ಅವರು ಹೇಳಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.