ಕೊಚ್ಚಿ (ವಿಶ್ವ ಕನ್ನಡಿಗ ನ್ಯೂಸ್) : ಖಾಸಗಿ ಬಸ್ ಉದ್ಯೋಗಿಗಳು ತನ್ನ ಮಗನ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ನೋಡಿದ ತಂದೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಕೊಚ್ಚಿಯ ಕಿಜಕ್ಕೆಪರಂಬಿಲ್ ನಿವಾಸಿ ಫಜಲುದ್ದೀನ್ (54) ಮೃತಪಟ್ಟವರು. ಪರವೂರಿನ ಕಣ್ಣನ್ಕುಲಂಗರಾ ಪ್ರದೇಶದಲ್ಲಿ ನಿನ್ನೆ ರಾತ್ರಿ 7.45 ಕ್ಕೆ ಈ ಘಟನೆ ನಡೆದಿದ್ದು,
ಖಾಸಗಿ ಬಸ್ ಉದ್ಯೋಗಿಗಳು ಹಾಗು ಫಸಲುದ್ದೀನ್ ಅವರ ಪುತ್ರ ಫರ್ಹಾನ್ ಜೊತೆ ವಾಗ್ವಾದ ನಡೆದಿದೆ. ಫರ್ಹಾನ್ (20) ಕಾರನ್ನು ಚಲಾಯಿಸುತ್ತಿದ್ದ ಕಾರಿನಲ್ಲಿ ತಂದೆ ಫಝಲುದ್ದೀನ್ ಕೂಡ ಜೊತೆಗಿದ್ದರು. ಕೋಯಿಕ್ಕೋಡ್ ನ ವೈಟ್ಟಿಲಾ ಮಾರ್ಗದಲ್ಲಿ ಚಲಿಸುತ್ತಿದ್ದ ಬಸ್ ಓವರ್ ಟೇಕ್ ಮಾಡಿದಾಗ, ಅದು ಕಾರಿನ ಕನ್ನಡಿಗೆ ತಟ್ಟಿತು. ಬಸ್ ನಿಲ್ಲದಿದ್ದಾಗ, ಫರ್ಹಾನ್ ಕಾರನ್ನು ಬಸ್ಸಿನ ಮುಂದೆ ತಂದು ಬಸ್ಸನ್ನು ನಿಲ್ಲಿಸಿ ಅದನ್ನು ಪ್ರಶ್ನಿಸಿದನು. ವಾಗ್ವಾದದ ಸಮಯದಲ್ಲಿ, ಖಾಸಗಿ ಬಸ್ ಉದ್ಯೋಗಿಯೊಬ್ಬರು ವಾಹನದಿಂದ ಚಾಕುವನ್ನು ಹೊರತೆಗೆದು ಫರ್ಹಾನ್ ಗೆ ಇರಿದಿದ್ದಾರೆ.
ಇದನ್ನು ನೋಡಿದ ಕಾರಿನಲ್ಲಿದ್ದ ಫಜಲುದ್ದೀನ್ ಕುಸಿದುಬಿದ್ದರು. ಕೂಡಲೇ ಫಜಲುದ್ದೀನ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವರು ಕೊನೆಯುಸಿರೆಳೆದರು. ಈ ಘಟನೆಯ ನಂತರ, ಖಾಸಗಿ ಬಸ್ ಉದ್ಯೋಗಿಗಳು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ, ಬಸ್ ನೌಕರರನ್ನು ಗುರುತಿಸಲಾಗಿದೆ ಮತ್ತು ಅವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.