ಲಖನೌ (ವಿಶ್ವ ಕನ್ನಡಿಗ ನ್ಯೂಸ್) : ದೆಹಲಿಯಲ್ಲಿ ಕಾರು ಡಿಕ್ಕಿ ಹೊಡೆದು ಮಹಿಳೆಯೊಬ್ಬರನ್ನು ಕಿಲೋಮೀಟರ್ ಗಟ್ಟಲೆ ಎಳೆದೊಯ್ದ ಘಟನೆ ಇತ್ತೀಚಿಗೆ ನಡೆದಿದೆ. ಹರ್ದೋಯ್ ಜಿಲ್ಲೆಯ 9 ನೇ ತರಗತಿ ವಿದ್ಯಾರ್ಥಿಯನ್ನು ಕಾರಿಗೆ ಡಿಕ್ಕಿ ಹೊಡೆದ ನಂತರ ಒಂದು ಕಿಲೋಮೀಟರ್ ಎಳೆಯಲಾಗಿದೆ. ಘಟನೆಯ ಸಿಸಿಟಿವಿ ದೃಶ್ಯಾವಳಿ ಬಿಡುಗಡೆಯಾಗಿದೆ.
ಶುಕ್ರವಾರ ಸಂಜೆ ನಡೆದ ಘಟನೆಯಲ್ಲಿ 9ನೇ ತರಗತಿಯ ವಿದ್ಯಾರ್ಥಿ ಕೇತನ್ ಕುಮಾರ್ ಕೋಚಿಂಗ್ ಕ್ಲಾಸ್ಗೆ ತೆರಳುತ್ತಿದ್ದ ವೇಳೆ ಬೈಕ್ಗೆ ಕಾರು ಡಿಕ್ಕಿ ಹೊಡೆದಿದೆ. ಬೈಕ್ಗೆ ಕಾರು ಡಿಕ್ಕಿ ಹೊಡೆದ ಬಳಿಕ ಬಾಲಕನ ಕಾಲು ಕಾರಿನ ಹಿಂದೆ ಸಿಲುಕಿಕೊಂಡಿತ್ತು. ಕಾರು ಡಿಕ್ಕಿ ಹೊಡೆದ ನಂತರವೂ ಚಾಲಕ ನಿಲ್ಲಿಸಲಿಲ್ಲ.
ಬಾಲಕನನ್ನು ಎಳೆದುಕೊಂಡು ಹೋಗುತ್ತಿರುವುದನ್ನು ಕಂಡ ಸ್ಥಳೀಯರು ಕಾರು ನಿಲ್ಲಿಸುವಂತೆ ಚಾಲಕನಿಗೆ ಮನವಿ ಮಾಡಿದರೂ ಚಾಲಕ ನಿರಾಕರಿಸಿದ್ದಾನೆ. ಆಗ ಸ್ಥಳೀಯರು ಕಾರನ್ನು ಹಿಂಬಾಲಿಸಿ ಜನನಿಬಿಡ ಮಾರುಕಟ್ಟೆಯಲ್ಲಿ ವಾಹನ ನಿಲ್ಲಿಸಿ ಮಗುವನ್ನು ರಕ್ಷಿಸಿದ್ದಾರೆ.
#Hardoi में सड़क पर साइकिल सवार छात्र को घसीटते हुए ले गई कार @Manchh_Official pic.twitter.com/6jkBTuGkOS — पत्रकार Rishabh Kant (@KantChhabra) January 7, 2023
#Hardoi में सड़क पर साइकिल सवार छात्र को घसीटते हुए ले गई कार @Manchh_Official pic.twitter.com/6jkBTuGkOS
— पत्रकार Rishabh Kant (@KantChhabra) January 7, 2023
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.