(ವಿಶ್ವ ಕನ್ನಡಿಗ ನ್ಯೂಸ್) : ರೋಹಿಣಿ ಸಿಂಧೂರಿ.. ಎಷ್ಟು ಚಂದ ಹೆಸರು, ಅದಕ್ಕೆ ಸರಿಯಾಗಿ ಸುಂದರಿ ಕೂಡಾ, ಅದರ ಮೇಲೆ ಖಡಕ್ ಅಧಿಕಾರಿಯ ಲೇಪ ಬೇರೆ.. ಒಂದಿಷ್ಟು ಅಭಿಮಾನಿ ಪೇಜ್ಗಳು…. ಹೀಗಾಗಿ ನಾಯಕಿಯಂತೆ ಮಿಂಚುತಿದ್ದವರು… ಆದರೆ ಈಗ ಖಳನಾಯಕಿಯಾಗುವತ್ತ ದಾಪುಗಾಲಿಡುತ್ತಿರುವುದನ್ನು ನೋಡಿದರೆ… ಮೊದಲ ಸಂಶಯ ಬಂದದ್ದು ಡಿ.ಕೆ. ರವಿ ಸಾವಿನ ಬಳಿಕ ಇವರಿಬ್ಬರ ಸಂದೇಶ ವಿನಿಮಯಗಳ ಕುರಿತು. ಖ್ಯಾತ ಪತ್ರಕರ್ತರೊಬ್ಬರು ದಾಖಲೆ ಸಹಿತ ಶಾಕಿಂಗ್ ವಿಚಾರ ಬಹಿರಂಗ ಪಡಿಸಿದಾಗ. ಸಾವಿಗೆ ನೇರ ಕಾರಣ ಕಾಂಗ್ರೆಸ್ ಸರಕಾರ ಎಂದು ಹಿಡಿಶಾಪ ಹಾಕಿದ ನನ್ನಂತಹ ಸಾವಿರಾರು ಮಂದಿಗೆ ಆ ವಿಚಾರ ಶಾಕಿಂಗ್ ಆಗಿತ್ತು. ಒಳ ಮನಸ್ಸು ಒಪ್ಪು ಒಪ್ಪು ಎಂದು ಹೇಳುತ್ತಿದ್ದರೂ ಬಹಿರಂಗವಾಗಿ ಒಪ್ಪಿಕೊಳ್ಳುವ ಪರಿಸ್ಥಿತಿ ನನ್ನಲ್ಲೂ ಸಮಾಜದಲ್ಲೂ ಇರಲಿಲ್ಲ.
ಕೊರೋನ ಸಂದರ್ಭದಲ್ಲಿ ಆಕ್ಸಿಜನ್ ಇಲ್ಲದೆ ಸರಣಿ ಸಾವುಗಳು ಸಂಭವಿಸಿದಾಗ ರೋಹಿಣಿ ಸಿಂಧೂರಿ ಎಂಬ ಅಧಿಕಾರಿಣಿಯ ಕುರಿತು ಸಂಶಯ ಬಲವಾಯಿತು. ಎಲ್ಲೋ ಏನೋ ಎಡವಟ್ಟಾಗಿದೆ, ತಪ್ಪು ಮರೆಮಾಚಿಕೊಳ್ಳಲು ಅವರು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ನನಗನಿಸಿತ್ತು. ಹಗಲೂ ರಾತ್ರಿ ಆಕ್ಸಿಜನ್ ಮತ್ತು ರೆಮ್ಡಿಸಿವರ್ ಸರಬರಾಜಿಗಾಗಿ ಒದ್ದಾಡುತ್ತಿದ್ದ ಸಂಸದ ಪ್ರತಾಪ್ ಸಿಂಹ ಅವರನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದ ರೋಹಿಣಿ ಆಗ ಬಚಾವ್ ಆಗಿದ್ದರು.
ಬಹುಷಃ Pratap Simha ಅವರು ತಮ್ಮ ಫೇಸ್ ಬುಕ್ ನಲ್ಲಿ ಕಮೆಂಟ್ ವಿಭಾಗವನ್ನೇ ಮುಚ್ಚಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಂದೇ ನಾನು ಕೂಡಾ ರೋಹಿಣಿ ಅವರ ನಡೆಯ ಕುರಿತು ಅನುಮಾನ ವ್ಯಕ್ತಪಡಿಸಿ ಸಂಸದರ ಪೇಜ್ ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದೆ. ನನ್ನ ಮೇಲೇ ಬೆಂಬಲಿಗರು ಕಟುವಾದ ಕಮೆಂಟ್ಗಳ ಮೂಲಕ ದಾಳಿ ನಡೆಸಿದ್ದರು. ಅಂದು ರೋಹಿಣಿಗೆ ಪ್ರವಾಹದ ರೀತಿ ಬೆಂಬಲ ಬಂದಿತ್ತು. ಸಮಾಜ ಬಹುತೇಕ ಮಹಿಳೆಯರ ಪರ.. ಇರಬೇಕು ಖಂಡಿತಾ… ಸರಿ ತಪ್ಪು ವಿವೇಚಿಸದೆ ಯಾವತ್ತೂ ಮಹಿಳೆಯರದೇ ಪರವಾಗಿದ್ದರೆ ನ್ಯಾಯ ಸಾಯುವ ಸಾದ್ಯತೆ ಅಧಿಕ.
ಇರಲಿ ಈ ವಿಚಾರದಲ್ಲಿ ಖಾಸಗಿ ಫೋಟೊಗಳನ್ನು ಹಾಕಿರುವುದು ಸರಿಯಾದ ನಡೆ ಅಲ್ಲ. ಇನ್ನೂ ಕೆಟ್ಟ ಕೆಟ್ಟ ಫೋಟೊಗಳು ಇದ್ದರೆ ಈ ರೀತಿಯ ಫೋಟೊಗಳು ಹಾಕಿರುವುದು ಸರಿ ಎನ್ನುವ ಭಾವನೆ ಬರಬಹುದು. ಆದರೂ ಸಮರ್ಥನೀಯವಲ್ಲ. ಈಗ ಸ್ವಲ್ಪ ಹೊತ್ತಿನ ಹಿಂದೆ ರೂಪ ಮೌದ್ಗಿಲ್ ಅವರು ಹಾಕಿರುವ ದಿಸ್ ಮೆಸೇಜ್ ವಾಸ್ ಡಿಲೀಟೆಡ್ ರೀತಿಯ ದಾಖಲೆಗಳನ್ನು ಹಾಕಿದ್ದರೆ ಎಲ್ಲವನ್ನು ಆ ಒಂದು ಸ್ಕ್ರೀನ್ ಶಾಟ್ ಹೇಳಿಬಿಡುವಂತಹುದು.. ಒಂದು ರೀತಿಯಲ್ಲಿ ವಾದ-ವಿವಾದಕ್ಕೆ ಸುಶೀಲ, ಸಜ್ಜನಿಕೆಯ ಲೇಪ ಬರುತ್ತಿತ್ತೋ ಏನೋ ? ರೂಪಾ ಅವರು ಈ ರೀತಿ ಬಹಿರಂಗವಾಗಿ ಹೇಳಿಕೆ, ದಾಖಲೆ ಬಿಡುಗಡೆ ಮಾಡಬೇಕಾದರೆ ಅವರಿಗೂ ತೀರಾ ವೈಯಕ್ತಿಕವಾಗಿ ನೋವುಗಳಾಗಿರುವದನ್ನು ಅಲ್ಲಗಳೆಯಲಾಗುವುದಿಲ್ಲ. ಇಬ್ಬರೂ ಸಶಕ್ತ ಹೆಣ್ಣು ಮಕ್ಕಳು.. ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ. ರೂಪಾ ಅವರ ಹೋರಾಟದಲ್ಲಿ ಕ್ರಮೇಣ ತಿರುಳು ಇದೆ ಎನ್ನುವ ಭಾವನೆ ನನಗೆ ಬರುತ್ತಿದೆ.
ಕೊನೆಯದಾಗಿ.. ಕಟೀಲು ದೇಗುಲ ವಿಚಾರದ ಪೂಜೆ ವಿಚಾರದಲ್ಲಿ ಮೂಗು ತೂರಿಸಿ ಗರ್ಭಗುಡಿಯ ಮಂಟಪದೊಳಕ್ಕೆ ನುಗ್ಗಲು ಯತ್ನಿಸ ರಂಪಾಟ ಮಾಡಿದವರು. ಮೇಳದ ಕುರಿತಾಗಿ ಪದೇ ಪದೇ ಉಪದ್ರವ ನೀಡಿದರು, ಕುಕ್ಕೆ ಸುಬ್ರಹಮಣ್ಯ ದೇವಸ್ಥಾನಕ್ಕೆ ಬಂದಿರುವ ಇನ್ನೋವ ಕ್ರೆಸ್ಟಾ ವಾಹನವನ್ನು ಬೆಂಗಳೂರಿನ ದತ್ತಿ ಇಲಾಖೆಗೆ ಎಳೆದೊಯ್ದಿರುವ ಆರೋಪಗಳಿವೆ. ಪಾಪ ಅನಿಸೋದು ರೋಹಿಣಿಯ ಪತಿಯ ಹೇಳಿಕೆ ನೋಡುವಾಗ. ಆದ್ರೆ ಅವರು ಹೇಳಿದಂತೆ ಬಹಿರಂಗವಾಗಿರೋದು ಸ್ಟೇಟಸ್ ಅಲ್ಲವೇ ಅಲ್ಲ. ಏಕೆಂದರೆ ಅದು ವೈಯಕ್ತಿಕವಾಗಿ ಕಳುಹಿಸಲಾದ ಸಂದೇಶ. ಆ ಮೆಸೇಜನ್ನು ಇನ್ನೊಂದು ಮೊಬೈಲ್ ನಿಂದ ಫೋಟೊ ಹೊಡೆದು ತೆಗೆಯಲಾಗಿದೆ. ಅಂದರೆ… ಆ ಮೆಸೇಜ್ ಕಳುಹಿಸಿದ ಪುರುಷ ಐಎಎಸ್ ಅಧಿಕಾರಿ ಯಾರು? ರೂಪಕ್ಕನಿಗೇ ತೀರಾ ಆತ್ಮೀಯರೇ ಆಗಿರಬೇಕು. ಇಲ್ಲಾಂದ್ರೆ ಮೊಬೈಲ್ ನಿಂದ ಫೋಟೊ ತೆಗೆಯಲು ಏಕೆ ಕೊಡ್ತಾರೆ? ರೋಹಿಣಿಗೂ ಗೊತ್ತಿರಬೇಕು? ಹಾಗಾದರೆ ಅವರ್ಯಾರು?
ವಿಚಿತ್ರ ಎಂದರೆ ಸಿಸಿಪಾಟೀಲರು ವಿಧಾನಸೌಧದ ಬಳಿ ಮಾಧ್ಯಮದವರ ಜತೆ ಮಾತನಾಡುತ್ತಿದ್ದ ರೋಹಿಣಿ ಅವರಿಗೆ ದಬಾಯಿಸಿರೋದು… ಇವರು ಫೇಮಸ್ ಆಗಿರೋದು ಏಕೆ ಅಂಥ ನೆನಪಿನ ಬ್ಲೂ ಪ್ರಿಂಟ್ ತೆಗೆದು ನೋಡಿದ್ರೆ… ಅಯ್ಯೋ ಬಿಡಿ ಆ ವಿಚಾರ. ಇತ್ತೀಚೆಗೆ ತುಳುನಾಡಿನ ದೇವಸ್ಥಾನಗಳಲ್ಲಿ ಮಾಧ್ವ ಬ್ರಾಹ್ಮಣರು ಮಧ್ವಜಯಂತಿ ಆಚರಣೆ ವಿರುದ್ಧ ನೂರಾರು ವರ್ಷಗಳಿಂದ ತಪ್ತ ಮುದ್ರಾಧಾರಣೆ ನಡೆಸದಂತೆ ಆದೇಶ ಹೊರಡಿಸಿದ್ದರು ರೋಹಿಣಿ ಮೇಡಂ. ಅದೂ ಬಿಜೆಪಿ ಸರಕಾರ ಇರುವಾಗ..!
ಕಟೀಲು ದುರ್ಗೆ ಮುನಿದಳೋ?, ಸುಬ್ರಹ್ಮಣ್ಯ ಮುನಿದನೋ ?, ಪ್ರತಾಪ ಸಿಂಹನ ನೋವೋ, ಅಕ್ಸಿಜನ್ ದುರಂತದ ಪರೋಕ್ಷ ಪರಿಣಾಮವೋ.. ಧಾರ್ಮಿಕ ದತ್ತಿ ಇಲಾಖೆಯ ಅಡ್ಡಪರಿಣಾಮವೋ..? ಬ್ರಾಹ್ಮಣರ ಶಾಪವೋ?….. ಇದನ್ನು ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯ ದೇವಸ್ಥಾನಗಳ ಗರ್ಭಗುಡಿಯೊಳಗಿರುವ ದೇವರುಗಳೇ ಹೇಳಬೇಕು…
– ಜಿತೇಂದ್ರ ಕುಂದೇಶ್ವರ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.