(www.vknews.in) ; ಅಮೇರಿಕಾದಲ್ಲಿ ವಿದ್ಯಾರ್ಥಿಯೊರ್ವನಿಗೆ ಸ್ಪೆಷಲ್ ಕ್ಲಾಸ್ ತೆಗೆಯುವಾಗ ಶಿಕ್ಷಕಿಯ ಅನುಚಿತ ವರ್ತನೆಯಿಂದ ಮಾನಸಿಕವಾಗಿ ಬೇಸತ್ತು ಹೋಗಿದ್ದ ವಿದ್ಯಾರ್ಥಿ ಮುಂದಿನ ಕಲಿಕೆಯಲ್ಲಿ ಹಿಂದುಳಿದನಂತೆ ಇದನ್ನರಿತ ಅಲ್ಲಿನ ಮ್ಯಾನೆಜ್ ಮೆಂಟ್ ಆಕೆಯನ್ನು ಕಾಲಕಾಲಕ್ಕೆ ಸಂಸ್ಪೆಡ್ ಮಾಡಿದರು. ಅದೇ ರೀತಿಯ, ಕೆಲವೊಮ್ಮೆ ಅದಕ್ಕಿಂತಲೂ ಕ್ರೂರ ಘಟನೆಯೊಂದು ನನ್ನ ಭಾರತದಲ್ಲಿ ನಡೆದಿದೆ ಶಿಕ್ಷಕಿಯೋರ್ವಳು ದ್ವೇಷವೇನೆಂದರಿಯದ ಮುಗ್ದ ಮನಸ್ಸುಗಳ ಕೈಗಳಲ್ಲಿ ಇನ್ನೊಂದು ಮಗುವಿಗೆ ಹೊಡೆಸಿದ್ದಾಳೆ!!!
ಆಕೆಯನ್ನು ಏನು ಮಾಡಿದರೋ ನಾನರಿಯೇ ಬುಲ್ಡೂಜರ್ ಬಂದು ಕೆಡವಿತೋ ಏನೋ… ಒಟ್ಟಾರೆಯಾಗಿ ಆಕೆ ಕ್ಷಮೆ ಯಾಚಿಸಿದ್ದಾಳೆ ಎನ್ನುವುದೇ ಆಶಾದಾಯಕ ಸಂಗತಿ. ಅದೇ ಭಾರತದಲ್ಲಿ ಕೈ ಮೂಳೆ ಮುರಿದ ವಿದ್ಯಾರ್ಥಿಗೆ ತನ್ನ ಕೈಯ್ಯಾರೆ ತುತ್ತು ನೀಡುತಿದ್ದ ಇನ್ನೊಂದು ಶಿಕ್ಷಕಿ!.
ಈಕೆಗೆ ಪ್ರಶಸ್ತಿ ಸಿಗದಿದ್ದರು ನೂರಕ್ಕೆ ನೂರಹತ್ತು ಪ್ರಶಂಸೆಯ ಮಹಾಪೂರವೆ ಹರಿದು ಬಂದಿದೆ. ಇದರಲ್ಲಿ ಯಾರು ನೈಜ ಶಿಕ್ಷಕಿ ಎನ್ನುವುದು ಪ್ರತೇಕ ವಿವರಸಬೇಡಲ್ಲವೇ…. ಪ್ರತಿಯೊಂದು ಶಿಕ್ಷಕಿ/ಕ ರ ತರಗತಿಯ ವಿಷಯಗಳು, ಶೈಲಿಗಳು ವಿವಿಧ ರೀತಿಯಲ್ಲಿರುತ್ತದೆ. ಅದೇ ಶೈಲಿಗಳು ವಿಷಯಗಳು ವಿದ್ಯಾರ್ಥಿಗಳಿಗೆ ಭಾರತದ ಮುಂದಿನ ಪೀಳಿಗೆಗೆ ವಿಷವಾದರೆ!!!
ವಿದ್ಯಾರ್ಥಿಯ ಉನ್ನತಿಗೆ ಕೆಲವು ನಿಯಮ, ನೀತಿ, ರೀತಿ ಅನಿವಾರ್ಯ ಅದನ್ನು ಅಲ್ಲಗಳೆಯುವಂತಿಲ್ಲ ಅದೇ ನೀತಿ ಹಾಗೂ ನಿಯಮಗಳು ಕಠಿಣ ಕಠೋರವಾದರೆ ಎಳೆ ಹೃದಯಗಳಿಗೆ ಆಳವಾದ ಗಾಯ ಮಾಡುತ್ತದೆ, ಎಷ್ಟು ನೋಯಿಸುತ್ತೆ ಎನ್ನುವುದು ಪ್ರತೀ ಶಿಕ್ಷಕ/ಕಿ ಅರಿಯುವುದು ಉಚಿತ.
ಖೇದಕರ ಸಂಗತಿ ಏನೂ ಗೊತ್ತೇ ? ಮೊನ್ನೆ ಹಲ್ಲೆಗೊಳಗಾದ ಆ ಮಗು ರಾತ್ರಿ ಇಡೀ ಮಲಗೂವುದೇ ಇಲ್ವಂತೆ!.. ಹಾಗದ್ರೆ ಆ ಹೃದಯಕ್ಕೆ ಬಿದ್ದ ಪೆಟ್ಟಿನ ಆಳ ಎಷ್ಟಿರಬಹುದು ಎನ್ನುವುದು ಊಹಿಸಿನೋಡಿ!
ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಶಿಕ್ಷಕ/ಕಿ ತೆಗೆದುಕೊಳ್ಳುವ ನಿರ್ಧಾರಗಳು ತಳ್ಳಲಾಗು ವುದಿಲ್ಲ ಅದೇ ಒಂದು ಸಮುದಾಯ, ಒಂದು ಪಂಗಡ, ಜಾತಿ ಮಾತ್ರಕ್ಕೆ ಸೀಮಿತಗೊಳಿಸಿದರೆ ಅದು ಎಷ್ಟೆ ದೊಡ್ಡ ದೊಣ್ಣೆನಾಯಕನಾದರೂ ಸರಿ ಅದು ಅಕ್ಷಮ್ಯವೇ…
*ಆಂದ್ರೆ ಆಗಸ್ಸೆ* ಎಂಬ ಪ್ರಸಿದ್ಧ ಟೆನಿಸ್ ಪಟು ತನ್ನ ಆತ್ಮಕಥನ ವಾದ *open*ನಲ್ಲಿ ಹೇಳುತ್ತಾನೆ ” ನನಗೆ ಟೆನಿಸ್ ಆಟದಲ್ಲಿ ಆಸಕ್ತಿಯಿರಲ್ಲಿಲ್ಲ ಆದರೆ ನನನ್ನು ಬದಲಾಯಿಸಿದ್ದು ನನ್ನ ಶಿಕ್ಷಕ (ಕೋಚ್) ಮಾತ್ರವಲ್ಲ ಅವರಿಂದ ನಾನು 6 ರಾಷ್ಟೀಯ ಪ್ರಶಸ್ತಿಗಳು ನನ್ನದಾಗಿಸಿದ್ದೇನೆ. ನನ್ನ ಕೋಚ್ ಒಮ್ಮೆ ನನಗೆ ಒಂದು ಮಾತು ಹೇಳುತ್ತಾರೆ ” ಡಿಯರ್ ಅಂದ್ರೆ : ನಿನ್ನ ಸ್ವಭಾವವೇನು ನನಗೆ ಚೆನ್ನಾಗಿ ಗೊತ್ತು ನನಗೆ ನಿನ್ನ ಸ್ವಭಾವವನ್ನು ತಿದ್ದಲು ಬರುವುದಿಲ್ಲ ಸ್ವಭಾವವನ್ನು ತಿದ್ದುವ ಅರಿವು ನನಗಿದ್ದಿದ್ದರೆ ಮೊದಲು ನನ್ನ ಸ್ವಭಾವವನ್ನು ನಾನೇ ತಿದ್ದುತ್ತಿದ್ದೆ. ಆದರೆ ನಿನ್ನ ವಿಷಯ ದಲ್ಲಿ ನನಗೆ ಕೆಲವು ಕಠಿಣ ನಿರ್ಧಾರಗಳನ್ನು ತೆಗೆದಿದ್ದೇನೆ ಅದು ನಿನ್ನ ಒಳಿತಿಗಾಗಿ ಮಾತ್ರ.
ಡಿಯರ್ ಅಂದ್ರೆ : ಕುದರೆಯಲ್ಲಿ ಎರಡು ರೀತಿಯ ಕುದುರೆಯಿವೆ ಒಂದು ರೇಸ್ ಕುದುರೆ ಇನ್ನೊಂದು ಸಾಮಾನ್ಯ ಊರಲ್ಲಿರುವ ಕುದುರೆ ಈ ಎರಡು ಕುದುರೆಯನ್ನು ಉಪಚರಿಸುವುದು ಒಂದೇ ರೀತಿಯಲ್ಲ ! ರೇಸ್ ಕುದುರೆಯನ್ನು ಕಷ್ಟ ಪಡಿಸಬೇಕು ಏಕೆಂದ್ರೆ ಅದು ಸಮೂಹದಲ್ಲಿ ಮಿಂಚಬೇಕು. ಅದೇ ರೀತಿಯಾಗಿದೆ ನಿನ್ನನ್ನು ನಾನು ನೋಡಿದ್ದು ನೀನು ಕೂಡ ಮಿಂಚಬೇಕು ಆ ಮಿಂಚು ನೀನಾಗಬೇಕು ನೀನು ಮಿಂಚುವವರೆಗೂ ನನ್ನ ಹೆಗಲು ನಾ ನಿನಗೆ ನೀಡುವೇ ನೀನು ಅದರಲ್ಲಿ ಏರಿ ಆಡಬಹುದು ಆ ಮಿಂಚು ನೀನಾಗುವರೆಗೂ ” ಈ ಮಾತಿನ ಸ್ಪೂರ್ತಿಯಿಂದಲೇ ಇಂದು ಆಂದ್ರೆ ಎಲ್ಲೆಡೆ ಮಿನುಗಿದ್ದು ! ಆದರಿಂದ ಪ್ರೀತಿಯ ಶಿಕ್ಷಕ/ಕಿ ಯರೊಂದಿಗೆ ಪ್ರಾರ್ಥಿಸಲಿರುವುದು ಒಂದೇ ನಿಮ್ಮ ಮಕ್ಕಳ್ಳನ್ನು ನೀವು ಬೆಳಸಬೇಕು ಹೇಗೆ ಗೊತ್ತೇನು.
, ಒಂದು 20 ಮಕ್ಕಳು ನಿಮ್ಮಲ್ಲಿ ಕಲಿತರೆ ಅದರಲ್ಲಿ 10 ಮಕ್ಕಳು ಆತ್ಮಕಥೆಯನ್ನು ಬರೆಯುವಾಗ ಒಂದು ಪ್ಯಾರಗ್ರಾಫ್ ನಲ್ಲಿ ತಮ್ಮ ಯ ಹೆಸರೆತ್ತಿ ಅದರಲ್ಲಿ ಬರೆಯುವ ಹಾಗೆ ಉತ್ತಮ ವಾಗ್ಮಿಯಾದರೆ ವೇದಿಕೆಯಲ್ಲಿ ನಿಮ್ಮನ್ನು ಗುರುತಿಸುವ ಒಂದು ಕೂಟವನ್ನು ನೀವು ಬೆಳಸಬೇಕು ಮುಂದಿನ ಭಾರತದ ಸ್ವಾಸ್ಥವನ್ನು ಕಾಪಡುವ ಕೀಲಿ ಕೈ ನಿಮ್ಮಲ್ಲಿದೆ ಮಾತ್ರವಲ್ಲ ಅದನ್ನು ಹೇಗೆ ಉಪಯೋಗಿಸಬೇಕು ಎನ್ನುವ ಅರಿವು ನಿಮಗಿದೆ ಎನ್ನುವ ಅಪಾರ ನಂಬಿಕೆ ಎಲ್ಲಾ ಪೋಷಕ ಹಾಗೂ ಸಮೂಹ ನಿಮ್ಮ ಮೇಲೆ ನಂಬಿಕೆ ಇಟ್ಟಿದೆ. ಅದನ್ನು ಹುಸಿಗೊಳಿಸಿ ಕಸ ವಾಗಿಸದಿರಿ ಎನ್ನುತ್ತಾ…
✒️ ಹಿಸಾನ್ ಇಹ್ಸಾನಿ ಕಡಬಗೆರೆ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.