ಮಂಗಳೂರು (www.vknews. in) : ಉತ್ತರ ಕರ್ನಾಟಕದಲ್ಲಿ ಶೈಕ್ಷಣಿಕ ಸೇವೆಗಾಗಿ ಕಾರ್ಯನಿರತವಾಗಿರುವ ಮುಈನುಸುನ್ನಾ ಅಕಾಡೆಮಿ ಹಾವೇರಿ ಇದರ ಸಂಸ್ಥಾಪಕರಾದ ಸಯ್ಯಿದ್ ಪೊಸೋಟ್ ತಂಙಳ್ ಅವರ ಅನುಸ್ಮರಣೆ ಸಮಾವೇಶವು ಜೂನ್ 21 ಶುಕ್ರವಾರ ಸಂಜೆ 7 ಗಂಟೆಗೆ ಬಜ್ಪೆ ಎಂಜೆಎಂ ಸಭಾಂಗಣದಲ್ಲಿ ನಡೆಯಲಿದೆ.
ಮಳ್ಹರ್ ವಿದ್ಯಾಸಂಸ್ಥೆ ಹೊಸಂಗಡಿ ಇದರ ಪ್ರಿನ್ಸಿಪಾಲ್ ಸಯ್ಯಿದ್ ಜಲಾಲುದ್ದೀನ್ ಅಲ್ ಬುಖಾರಿ ತಂಙಳ್ ಪೊಸೋಟ್ ನೇತೃತ್ವ ವಹಿಸಲಿದ್ದಾರೆ. ಮುಈನುಸುನ್ನಾ ಅಕಾಡೆಮಿಯ ಉಪಾಧ್ಯಕ್ಷ ಸಯ್ಯಿದ್ ಮುನೀರುಲ್ ಅಹ್ದಲ್ ತಂಙಳ್, ಎಸ್ ವೈ ಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆಎಂ ಅಬೂಬಕರ್ ಸಿದ್ದೀಖ್ ಮೊಂಟುಗೋಳಿ, ಜಿಲ್ಲಾ ಉಪಾಧ್ಯಕ್ಷ ಬಶೀರ್ ಮದನಿ ಕೂಳೂರು, ಎಸ್ಸೆಸ್ಸೆಫ್ ರಾಜ್ಯ ಕೋಶಾಧಿಕಾರಿ ಮುಸ್ತಫಾ ನಈಮಿ ಹಾವೇರಿ, ಕರ್ನಾಟಕ ಮುಸ್ಲಿಂ ಜಮಾಅತ್ ವಲಯಾಧ್ಯಕ್ಷ ಬದ್ರುದ್ದೀನ್ ಹಾಜಿ ಬಜ್ಪೆ, ಮೇಕ್ ಫೌಂಡೇಶನ್ ಡೈರೆಕ್ಟರ್ ಶೈಖ್ ಬಾವ ಹಾಜಿ ಮಂಗಳೂರು, ಬಜ್ಪೆ ಜಮಾಅತ್ ಅಧ್ಯಕ್ಷ ಹಾಜಿ ಅಬ್ದುಲ್ ಖಾದಿರ್ ಭಾಗವಹಿಸಲಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.