(www.vknews. in) ; ಮಿತ್ತ ಬೈಲ್ ಮಸೀದಿಯಲ್ಲಿ ಸುದೀರ್ಘ 42 ವರ್ಷಗಳಿಂದ ಖತೀಬರಾಗಿ ಸೇವೆ ಸಲ್ಲಿಸಿದ ಮಿತ್ತಬೈಲ್ ಅಬ್ದುಲ್ಲ ಹಾಜಿ ಅರ್ಧ ಶತಮಾನಕ್ಕಿಂತ ಹೆಚ್ಚು ಕಾಲ ಉಲಮಾ ಲೋಕದಲ್ಲಿ ಉಜ್ವಲ ತಾರೆಯಾಗಿ ಮರೆದ ಮಹಾನರ ಸ್ವಂತ ಊರು ಸಾಲೆತ್ತೂರ್ ಸಮೀಪದ ಕಟ್ಟತ್ತಿಲವಾಗಿದೆ.
ಪ್ರಾಥಮಿಕ ವಿದ್ಯಾಬ್ಯಾಸವನ್ನು ತನ್ನ ಊರಲ್ಲೇ ಮುಗಿಸಿ ಉನ್ನತ ವ್ಯಾಸಂಗವನ್ನು ಪೊನ್ನಾಣಿಯಲ್ಲಿಯಲ್ಲಿ ಮುಗಿಸಿದರು. ಆಯುರ್ವೇದ ವೈದ್ಯ ಶಾಸ್ತ್ರದಲ್ಲಿ ಉನ್ನತ ಪಾಂಡಿತ್ಯವನ್ನು ಹೊಂದಿದ್ದರು.
1961 ರಲ್ಲಿ ಬಂಟ್ವಾಳ ತಾಲೂಕಿನ ಮಿತ್ತಬೈಲ್ ಮಸೀದಿ ಯಲ್ಲಿ ಖತೀಬರಾಗಿ ಸೇವೆಯನ್ನು ಪ್ರಾರಂಬಿಸಿದ ಅಬ್ದುಲ್ಲ ಹಾಜಿಯವರ ಸೇವೆಯಿಂದ ಮಿತ್ತಬೈಲಲ್ಲಿ ಉಂಟಾದ ದೀನೀ ಕ್ರಾಂತಿ,ಸಪ್ಪೆ ಮೋರೆ ಹೊತ್ತು ಬರುವ ಜನರ ದುಃಖ ದಮ್ಮಾನಗಳು,,ವ್ಯಾಪಾರ ಹಾಗೂ ತಮ್ಮ ರೋಗದ ಸಂಕಷ್ಟಗಳಿಂದ ಬರುವ ಜನರಿಗೆ ತನ್ನ ಆಧ್ಯಾತ್ಮಿಕ ಹಾಗು ಯುನಾನಿ ಚಿಕಿತ್ಸೆ ಫಲ ಕಾಣಲು ಪ್ರಾರಂಭವಾದಾಗ ಜನರ ಪ್ರೀತಿಯ ಮಿತ್ತಬೈಲ್ ಹಾಜಾರ್ ಎಂದು ಪ್ರಖ್ಯಾತರಾದರು.
ತನ್ನ ವಿಶೇಷವಾದ ಆಧ್ಯಾತ್ಮಿಕ ಚಿಕಿತ್ಸೆ ಆಯುರ್ವೇದಿಕ್ ಔಷಧದಿಂದ ನಾಡಿನ ಉದ್ದಗಲದಿಂದ ದೇಶದ ನಾನಾ ರಾಜ್ಯಗಳಿಂದ ಮುಸ್ಲಿಮರು ಹಾಗೂ ಮುಸ್ಲಿಮೇತರ ಜನರು ಕೂಡ ಅವರ ಬಳಿಗೆ ಚಿಕಿತ್ಸೆಗೆ ಬರುತ್ತಿದ್ದರು
2003ಜೂನ್ 15 ರಂದು ಇಹಲೋಕ ತ್ಯಜಿಸಿದ ಅಬ್ದುಲ್ಲ ಹಾಜಿಯವರಿಗೆ 8 ಮಕ್ಕಳಲ್ಲಿ 5 ಹೆಣ್ಣುಮಕ್ಕಳು 3 ಗಂಡು ಮಕ್ಕಳಲ್ಲಿ ಒಬ್ಬರು ಭಾರತ ದೇಶದಲ್ಲಿ ಮುಸ್ಲಿಮ್ ಸಮುದಾಯದ ಸಾಮಾಜಿಕ ಚಳುವಳಿಯನ್ನು ರಾಷ್ಟ ಮಟ್ಟದಲ್ಲಿ ಕಟ್ಟಿ ಬೆಳೆಸಲು ಶ್ರಮ ಪಟ್ಟು ಅದರ ನಾಯಕತ್ವವನ್ನು ವಹಿಸಿದವರುಮಾತ್ರವಲ್ಲ . ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಾಸು ಹೊಕ್ಕಾಗಿದ್ದ ವರದಕ್ಷಿಣೆ ಪಿಡುಗು ವಿರುದ್ಧ ವರದಕ್ಷಿಣೆಯಲ್ಲಿ ಸಹೋದರಿಯರ ಕಣ್ಣೀರ ಹನಿಗಳಿವೆ ಎಂಬ ಘೋಷಣೆಯೊಂದಿಗೆ ಜಾಗೃತಿ ಮೂಡಿಸಿ ಅನೈಕ್ಯತೆ ತುಂಬಿ ತುಳುಕುತ್ತಿದ್ದ ಸಮಯದಲ್ಲಿ ಮುಸ್ಲಿಂ ಐಕ್ಯತೆ ಕಾಲದ ಬೇಡಿಕೆ ಎಂಬ ಘೋಷಣೆಯೊಂದಿಗೆ ಭಿನ್ನತೆಯನ್ನು ಹೋಗಲಾಡಿಸುವಲ್ಲಿ ಶ್ರಮಿಸಿ ಸಹೋದರತೆಯ ಕಂಪನ್ನು ಪಸರಿಸಿ ಇತ್ತೀಚಿಗೆ ನಮ್ಮನ್ನು ಅಗಲಿದ ಮರ್ಹೂಮ್ ಕೆ. ಎಮ್. ಶರೀಫ್ ಅಬ್ದುಲ್ಲ ಹಾಜಿಯವರ ಮಗ ಎಂದು ಹೇಳಲು ಹೆಮ್ಮೆ ಎನಿಸುತ್ತದೆ.
ಜೀವಿತಕಾಲದಲ್ಲಿ ಅಪಾರವಾಗಿ ಗೌರವಿಸುತ್ತಿದ್ದ ಮಿತ್ತಬೈಲ್ ದರ್ಸ್ ಸ್ಥಾಪಕರೂ ಅಬ್ದುಲ್ಲ ಹಾಜಿಯವರ ಪತ್ನಿಯ ತಂದೆಯವರಾದ ಅಡ್ಯಾರ್ ಕಣ್ಣೂರು ಮುಹಮ್ಮದ್ ಹಾಜಿ(ನ. ಮ.)ಯವರ ಕಬರ್ ಸಮೀಪ ಅಂತ್ಯ ವಿಶ್ರಮ ಹೊಂದಿದ್ದಾರೆ.
ಮಿತ್ತಬೈನಲ್ಲಿ ಅಬ್ದುಲ್ಲ ಹಾಜಿ ಹಾಗೂ ಜಬ್ಬಾರ್ ಉಸ್ತಾದರು ಅಣ್ಣ ತಮ್ಮಂದಿರ ಹಾಗೆ ಕಾರ್ಯನಿರ್ವಹಿಸಿ ಮಿತ್ತಬೈಲಿನ ಕೀರ್ತಿಯನ್ನು ದೇಶದ ಉದ್ದಗಲಕ್ಕೆ ತಮ್ಮ ಧಾರ್ಮಿಕ ಸೇವೆಯಿಂದ ಉನ್ನತಿಗೇರಿಸಿದರು ಇಂದು ಮಿತ್ತಬೈಲ್ ಮಸೀದಿಯ ವಠಾರದಲ್ಲಿ ಅಡ್ಯಾರ್ ಕಣ್ಣೂರು ಮಹಮ್ಮದ್ ಹಾಜಿ (ನ. ಮ )ಅಬ್ದುಲ್ಲ ಹಾಜಿ ಹಾಗೂ ಜಬ್ಬಾರ್ ಉಸ್ತಾದ್ (ನ. ಮ.)ಅವರು ಒಂದೇ ಕಡೆ ಅಂತ್ಯ ವಿಶ್ರಾಂತಿ ಹೊಂದುತ್ತಿದ್ದಾರೆ ಈ ಮೂರು ಮಹಾನರು ಉಲಮಾಗಳು ಅಂಬಿಯಾಗಳ ವಾರಿಸುದಾರರು ಎಂಬ ಮಾತಿಗೆ ಚ್ಯುತಿ ಬಾರದ ರೀತಿಯಲ್ಲಿ ಕಾರ್ಯವೆಸಗಿದರು. ಅಲ್ಲಾಹನು ನಮ್ಮನ್ನ ಅವರೊಂದಿಗೆ ಜನ್ನತಲ್ಲಿ ಒಟ್ಟು ಸೇರಿಸಲಿ.
ಅಕ್ಬರ್ ಅಲಿ, ಪೊನ್ನೋಡಿ..
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.