ಮಟ್ಟನ್ನೂರು (www.vknews.in) : ಮೇಲ್ನೋಟಕ್ಕೆ ಒರಿಜಿನಲ್ ಪಾಸ್ ಪೋರ್ಟ್ ಎಲ್ಲವನ್ನೂ ಮಡಚಿ ಸೀಲ್ ಮಾಡಲಾಗಿದೆ. ಆದರೆ, ಅದನ್ನು ನೋಡಿದರೆ ಬೆಚ್ಚಿ ಬೀಳುತ್ತೀರಿ. 1.22 ಕೆ.ಜಿ ತೂಕದ ಚಿನ್ನದಿಂದ ತಯಾರಿಸಿದ ‘ಗೋಲ್ಡನ್ ಪಾಸ್ ಪೋರ್ಟ್’ ಇದಾಗಿದೆ. ಕಳೆದ ದಿನ ಮಟ್ಟನ್ನೂರಿನ ಕಣ್ಣೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊಸ ರೂಪದ ಚಿನ್ನ ಕಳ್ಳಸಾಗಣೆ ಕಂಡು ಅಧಿಕಾರಿಗಳು ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದರು.
ಶನಿವಾರ ಶಾರ್ಜಾದಿಂದ ಬಂದಿದ್ದ ಪ್ರಯಾಣಿಕರೊಬ್ಬರಿಂದ ಪಾಸ್ಪೋರ್ಟ್ ರೂಪದಲ್ಲಿ 87,32,220 ರೂಪಾಯಿ ಮೌಲ್ಯದ 1223 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಕಾಸರಗೋಡು ಪಟ್ನ ನಿವಾಸಿ ಕೊವ್ವಲವೀಟಿಲ್ ಪ್ರತೀಸನ್ ಬಂಧಿತ ಆರೋಪಿ. ಅವರು ಧರಿಸಿದ್ದ ಪ್ಯಾಂಟ್ನ ಜೇಬಿನಲ್ಲಿ ಪಾಸ್ಪೋರ್ಟ್ನ ಆಕಾರದಲ್ಲಿ ಪಾಲಿಥಿನ್ ಕವರ್ನಲ್ಲಿ ಬಚ್ಚಿಟ್ಟಿದ್ದ ಚಿನ್ನದ ಪಾಸ್ಪೋರ್ಟ್ ಅನ್ನು ವಶಪಡಿಸಿಕೊಂಡು ಕಸ್ಟಮ್ಸ್ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.