(www.vknews. in) ; SKSSF ದಕ್ಷಿಣ ಕನ್ನಡ ಈಸ್ಟ್ ಜಿಲ್ಲೆಯ ಅದೀನದಲ್ಲಿರುವ SKSSF ಕಡಬ ವಲಯದ ವತಿಯಿಂದ ವಲಯ ಮಟ್ಟದಲ್ಲಿ ಜರಗಲಿರುವ ಹುಬ್ಬುಲ್ಲಾಹ್ ಆಧ್ಯಾತ್ಮಿಕ ಮಜ್ಲಿಸ್ ಕಾರ್ಯಕ್ರಮದ ಜಿಲ್ಲಾಮಟ್ಟದ ಉದ್ಘಾಟನಾ ಸಮಾರಂಭವು ದಿನಾಂಕ 2024ಆಗಸ್ಟ್ 18 ಆದಿತ್ಯವಾರ ಇಶಾ ನಮಾಝಿನ ಬಳಿಕ ಮಸ್ಜಿದುಲ್ ಬಾರಿ ಜುಮಾ ಮಸೀದಿ ಅಲಂಕಾರು ನೆಕ್ಕರೆಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ವಿಷಯ ಮಂಡನೆ ಉಸ್ತಾದ್ ಬಹು/ ಮುಹಮ್ಮದ್ ರಫೀಕ್ ಫಾಝಿಲ್ ಬಾಖವಿ ಪಯ್ಯಕ್ಕಿ ನಡೆಸಲಿದ್ದಾರೆ.
ಮುಂದಿನ ಏಳು ತಿಂಗಳ ಕಾಲಾವಧಿಯ ಜಿಲ್ಲೆಯ ಏಳು ವಲಯ ಕೇಂದ್ರಗಳಲ್ಲಿ ಹುಬ್ಬುಲ್ಲಾ ಎಂಬ ಹೆಸರಿನೊಂದಿಗೆ ಆಧ್ಯಾತ್ಮಿಕ ಮಜ್ಲಿಷ್ ನಡೆಯಲಿದೆ. ಇದು ಆತ್ಮೀಯ ವಿಶುದ್ಧಿ ಬಯಸುವವರಿಗೆ ಕಾರ್ಯಕ್ರಮವು ಬಹಳಷ್ಟು ಉಪಯುಕ್ತವಾಗಲಿದೆ ಎಂದು ಮೊಹಮ್ಮದ್ ಹಾರಿಸ್ ಕೌಸರಿ ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.