ಕಾಸರಗೋಡು (www.vknews.in) : ಜ್ವರಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದ ಆರು ವರ್ಷದ ಬಾಲಕಿ ಮೃತಪಟ್ಟಿದ್ದಾಳೆ. ಶಿರಿಯಾ ಬತ್ತೇರಿಯ ಖಲೀಲ್-ಹಫ್ಸಾ ದಂಪತಿಯ ಪುತ್ರಿ ಫಾತಿಮಾ(6) ಮೃತಪಟ್ಟ ಬಾಲಕಿ. ಈಕೆ ಉಪ್ಪಳ ಎಜೆಐ ಶಾಲೆಯ ವಿದ್ಯಾರ್ಥಿನಿ.
ಜ್ವರ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಆಕೆಗೆ ವಾರದ ಹಿಂದೆ ಕುಂಪಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ನಂತರ ಜ್ವರ ಕಾಣಿಸಿಕೊಂಡು ಮಾತನಾಡಲು ಸಾಧ್ಯವಾಗದೇ ಇದ್ದಾಗ ಅವರನ್ನು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಚಿಂತಾಜನಕ ಸ್ಥಿತಿಯಲ್ಲಿದ್ದ ಮಗು ಬುಧವಾರ ಮಧ್ಯಾಹ್ನ ಮೃತಪಟ್ಟಿದ್ದಾಳೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.