(www.vkmews.in) ; ಮುಖ್ಯವಾಗಿ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕಳೆದ ಒಂಬತ್ತು ವರ್ಷಗಳ ಹಿಂದೆ ಸಮಾನ ಮನಸ್ಕ ಯುವ ಸಮೂಹದಿಂದ ಕೊಡಗು ಹಳೆ ವಿದ್ಯಾಥಿಗಳ ಸಂಘವು ದುಬೈ ಕೇಂದ್ರೀಕರಿಸಿ ಸಂಯುಕ್ತ ಅರಬ್ ಸಂಸ್ಥಾನದಲ್ಲಿರುವ ಕೊಡಗಿನ ಹಳೆ ವಿದ್ಯಾರ್ಥಿಗಳನ್ನು ಒಳಗೊಂಡು ರೂಪುಗೊಂಡಿತು,ಇದರ 2024-25ನೇ ಸಾಲಿನ ಕಾರ್ಯಕಾರಿ ಮಂಡಳಿಯ ಆಯ್ಕೆ ನಡೆದಿದ್ದು ಅಸೋಸಿಯೇಷನ್ ಛೇರ್ಮನ್ ಆಗಿ ಅಬ್ದುಲ್ಲಾ ಕೊಂಡಂಗೇರಿ ಅವರು ನೇಮಕಗೊಂಡರು ಮತ್ತು ಉಪ ಛೇರ್ಮನ್ ಆಗಿ ಸೌರಭ್ ಗೋಣಿಕೊಪ್ಪ ಅವರು ಆಯ್ಕೆಯಾದರು.
ಮುಖ್ಯ ಕಾರ್ಯದರ್ಶಿಗಳಾಗಿ ರಫೀಕಲಿ ಕುಂಜಿಲ ಮತ್ತು ಶಾಫಿ ಕೊಟ್ಟಮುಡಿ ಅವರು ಆಯ್ಕೆಯಾದರು, ಅಡ್ವಿಸರಿ ಬೋರ್ಡಿಗೆ ಅಶ್ರಫ್ ಮಡಿಕೇರಿ, ಹಮೀದ್ ವಿರಾಜಪೇಟೆ, ಸಲೀಂ ಮೂರ್ನಾಡು ಆಯ್ಕೆಯಾದರು, ಟ್ರೆಶರರ್ ಆಗಿ ಸಾದಿಕ್ ಕೊಳಕೇರಿ ಅವರು ಆಯ್ಕೆಯಾದರು ಹಾಗೂ ಸಮಿತಿಯ ಬೋರ್ಡ್ ಮೆಂಬರ್ ಆಗಿ ಇರ್ಫಾನ್ ಮೂರ್ನಾಡು, ಕವನ್ ಗೋಣಿಕೊಪ್ಪ, ಮುಜೀಬ್ ಕೊಂಡಂಗೇರಿ, ಪ್ರತಾಪ್ ಮಡಿಕೇರಿ, ಝಿಯಾ ಚೋಕಂಡಳ್ಳಿ, ಅಕ್ರಮ್ ಸೋಮವಾರಪೇಟೆ, ಶರತ್ ಮಡಿಕೇರಿ ಮತ್ತು ಗೌತಮ್ ವಿರಾಜಪೇಟೆ ಅವರು ಆಯ್ಕೆಯಾದರು.
ಕೊಡಗು ಹಳೆ ವಿಧ್ಯಾರ್ಥಿಗಳ ಸಂಘವು ಕಳೆದ ಹಲವು ವರ್ಷಗಳಿಂದ ಹಲವು ಮಾನವೀಯ ಮತ್ತು ಶೆಕ್ಷಣಿಕ ಸಾಮಾಜಿಕಪರ ಕೆಲಸ ಕಾರ್ಯಗಳನ್ನು ಮಾಡುತ್ತಿದೆ, ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಸಿದ್ಧರಾಗಲು ಕಾರ್ಯಗಾರ ಮತ್ತು ವೃತ್ತಿ ಮಾರ್ಗದರ್ಶನ ಕಾರ್ಯಗಾರವನ್ನು ಹಮ್ಮಿಕೊಂಡು ಓದುವ ವಿದ್ಯಾರ್ಥಿಗಳಲ್ಲಿ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ, ಹಾಗೆ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡ ಕೊಡಗಿನ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಿ ವಿದ್ಯಾಭ್ಯಾಸ ಮುಂದುವರೆಸಲು ಆರ್ಥಿಕ ಸಹಾಯ ಮಾಡಿದ್ದಾರೆ.
ಹಾಗೆ ಕೊಡಗಿನ ಬಡ ಹೆಣ್ಣು ಮಕ್ಕಳ ಮದುವೆಗೆ ಮತ್ತು ಬಡ ರೋಗಿಗಳಿಗೆ ಆರ್ಥಿಕ ಸಹಾಯ ಮಾಡಿದ್ದಾರೆ, ಕೊಡಗಿನಲ್ಲಿ ಪ್ರಕೃತಿ ವಿಕೋಪ ಮತ್ತು ಕೋವಿಡ್ ಮುಂತಾದ ಸಂಕಷ್ಟ ಸಮಯದಲ್ಲಿ ಆರ್ಥಿಕ ಸಹಾಯ ಮಾಡಿದ್ದು ಮತ್ತು ಫುಡ್ ಕಿಟ್ ವಿತರಿಸಿದ್ದಾರೆ.
ಕೊಡಗಿನಿಂದ ಸಂಯುಕ್ತ ಅರಬ್ ಸಂಸ್ಥಾನಕ್ಕೆ ಕೆಲಸ ಹುಡುಕಿ ಬಂದ ಜನರಿಗೆ ಉದ್ಯೋಗ ಮಾಹಿತಿ ನೀಡುವುದರೊಂದಿಗೆ ಎಲ್ಲಾ ವರ್ಷವು ಉದ್ಯೋಗ ಮಾರ್ಗದರ್ಶ ಕಾರ್ಯಗಾರ ಮತ್ತು ಯುಎಇ ವ್ಯಾಪಾರಸ್ಥರನ್ನು, ಕಂಪನಿಗಳ ಎಚ್ ಆರ್ ರನ್ನು ಮುಂತಾದ ಕೆಲಸ ಲಭ್ಯವಿರುವವರನ್ನು ಕರೆಸಿ ಉದ್ಯೋಗ ಮೇಳವನ್ನು ನಡೆಸಿ ಹಲವು ಕೊಡಗಿನವರಿಗೆ ಉದ್ಯೋಗ ಪಡೆದುಕೊಡುವಲ್ಲಿ ತಮ್ಮದೇ ಆದ ಕಾಣಿಕೆಯನ್ನು ಈ ಸಂಘಟನೆಯು ಮಾಡುತ್ತಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.