ಕಾಸರಗೋಡು (www.vknews.in) : ಕಾಸರಗೋಡಿನಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 3000 ಇ-ಸಿಗರೇಟ್ ವಶಪಡಿಸಿಕೊಳ್ಳಲಾಗಿದೆ. ಮಂಜೇಶ್ವರಂ ನಿವಾಸಿಗಳಾದ ಮುಹಮ್ಮದ್ ಶರೀಫ್ ಮತ್ತು ಮುಹಮ್ಮದ್ ಬಶೀರ್ ಅವರನ್ನು ಕಾಸರಗೋಡು ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಂದ್ರಗಿರಿ ರಸ್ತೆ ಜಂಕ್ಷನ್ನಲ್ಲಿ ಗುರುವಾರ ಬೆಳಗ್ಗೆ ಈ ಘಟನೆ ನಡೆದಿದೆ.
ಪೊಲೀಸರು ಗಸ್ತು ತಿರುಗುತ್ತಿದ್ದಾಗ ರಸ್ತೆಬದಿಯಲ್ಲಿ ಕಾರು ನಿಲ್ಲಿಸಿ ಟೈರ್ ಬದಲಾಯಿಸುತ್ತಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಇದರಿಂದ ಅನುಮಾನಗೊಂಡು ಯುವಕರ ಬಳಿ ಹೋಗಿದ್ದಾರೆ. ಇಬ್ಬರ ಮುಖದಲ್ಲೂ ಗಾಬರಿ ಕಂಡು ಕಾರಿನೊಳಗೆ ಪರಿಶೀಲಿಸಿದಾಗ ಇ-ಸಿಗರೇಟ್ ಪತ್ತೆಯಾಗಿದೆ.
ನಂತರ ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇ-ಸಿಗರೇಟ್ಗಳನ್ನು ಮಲಪ್ಪುರಂನಿಂದ ತರಲಾಗಿತ್ತು ಎಂದು ಇಬ್ಬರೂ ಹೇಳಿದ್ದಾರೆ. ಚಂದ್ರಗಿರಿ ಜಂಕ್ಷನ್ ಬಳಿ ಕಾರಿನ ಟೈರ್ ಒಡೆದ ಕಾರಣ ಇ-ಸಿಗರೇಟ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.