(www.vknews.in) ; 185 ವರ್ಷಗಳ ಇತಿಹಾಸ ಇರುವಂತಹ ಉಪ್ಪಿನಂಗಡಿ ಮಾದರಿ ಶಾಲೆಯಲ್ಲಿ 1 ರಿಂದ 8ನೇ ತರಗತಿವರೆಗೆ 500 ಮಕ್ಕಳಿದ್ದು ಮುಖ್ಯೋಪಾಧ್ಯಾಯರು ಮತ್ತು ದೈಹಿಕ ಶಿಕ್ಷಕರನ್ನು ಸೇರಿಸಿ 17 ಇಲಾಖಾ ಶಿಕ್ಷಕರು ಹಾಗೂ ಎಸ್ಡಿಎಂಸಿ ಹಾಗೂ ಪೋಷಕರ ಸಹಕಾರದಲ್ಲಿ 2 ಶಿಕ್ಷಕರನ್ನು ನೇಮಕ ಮಾಡಿ ಮಕ್ಕಳಿಗೆ ಯಾವುದೇ ರೀತಿಯಲ್ಲಿ ಶೈಕ್ಷಣಿಕವಾಗಿ ಕೊರತೆ ಉಂಟಾಗದ ರೀತಿಯಲ್ಲಿ ನಡೆಯುತ್ತಾ ಇತ್ತು.
ಆದರೆ ಈಗ ಅಲ್ಲಿರುವ ಶಿಕ್ಷಕರಲ್ಲಿ 3 ಜನರು ನಿಯೋಜನೆಗೆ ಅದೇಶವನ್ನು ತಂದಿದ್ದು,ಅಲ್ಲದೆ ಒಬ್ಬರನ್ನು ಶಾಲಾ ಎಸ್ಡಿಎಂಸಿ ಅಥವಾ ಶಿಕ್ಷಕರ ಗಮನಕ್ಕೂ ತಾರದೇ ಮುಖ್ಯೋಪಾಧ್ಯಾಯರು ಬಿಡುಗಡೆ ಗೊಳಿಸಿರುತ್ತಾರೆ, ಆಂಗ್ಲ ಮಾಧ್ಯಮ ಶಾಲೆಯಾಗಿರುವಾಗ ಆಂಗ್ಲ ಮಾಧ್ಯಮ ಬೋಧಿಸಲು ಇರುವಂತಹ ಶಿಕ್ಷಕರನ್ನು ಯಾವುದೇ ರೀತಿಯ ಮಾತುಕತೆ ನಡೆಸದೆ ಬಿಡುಗಡೆ ಗೊಳಿಸಿರುವ ಬಗ್ಗೆ ಪೋಷಕರು ಆಕ್ರೋಶವನ್ನು ವ್ಯಕ್ತಪಡಿಸಿರುತ್ತಾರೆ.
ಮಕ್ಕಳ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯ ಪ್ರಕಾರ 1 ರಿಂದ 8 ನೇ ತರಗತಿ ಆಂಗ್ಲ ಮತ್ತು ಕನ್ನಡ ಮಾಧ್ಯಮ ತರಗತಿಗಳು ಇರುವಾಗ 500 ಮಕ್ಕಳಿಗೆ ಮುಖ್ಯ ಶಿಕ್ಷಕರು ಹಾಗೂ ದೈಹಿಕ ಶಿಕ್ಷಕರನ್ನು ಹೊರತು ಪಡಿಸಿ 18 ಶಿಕ್ಷಕರ ಅವಶ್ಯಕತೆ ಇದ್ದಲ್ಲಿಂದ ಒಬ್ಬರನ್ನು ನಿಯೋಜನೆ ಮಾಡಿರುವುದು ಖಂಡನೀಯ ಹಾಗೂ ಇಲಾಖೆಯು ತಳಮಟ್ಟದಲ್ಲಿ ಶಾಲೆಯನ್ನು ಮುನ್ನಡೆಸುವ ಎಸ್ಡಿಎಂಸಿ ಗಳ ಗಮನಕ್ಕೂ ತಾರದೇ ನಿಯೋಜನೆಗೆ ಆದೇಶವನ್ನು ಹೊರಡಿಸಿ ಶಿಕ್ಷಕರನ್ನು ಬಿಡುಗಡೆ ಗೊಳಿಸಿದ ಬಗ್ಗೆ ಪ್ರತಿಭಟನೆ ನಡೆಸಲು ತೀರ್ಮಾನಿಸಿರುತ್ತಾರೆ.
ನಿನ್ನೆ ನಡೆದ ಪೋಷಕರ ಸಭೆಯಲ್ಲಿ ಬಂದಂತಹ ಶಿಕ್ಷಣಾಧಿಕಾರಿಗಳು ಶಿಕ್ಷಕರ ಸಂಖ್ಯೆ ಸರಿ ಇದೆ ಎನ್ನುವ ಲೆಕ್ಕವನ್ನು ಹೇಳಿ ,ಪೋಷಕರ ಯಾವುದೇ ಪ್ರಶ್ನೆಗಳನ್ನು ಕೇಳದೆ ಸಭೆಯಿಂದ ನಿರ್ಗಮಿಸಿ ಪೋಷಕರನ್ನು ಅವಮಾನಿಸಿದ್ದಾರೆ ಎನ್ನುವ ಮಾತುಗಳು ಕೂಡ ಕೇಳಿ ಬಂದಿರುತ್ತದೆ.
ಆದರಿಂದ 9 ತಾರೀಕು ಸೋಮವಾರದ ಒಳಗೆ ಶಾಲೆಯಿಂದ ನಿಯೋಜನೆ ಮಾಡಿರುವ ಶಿಕ್ಷಕರನ್ನು ಶಾಲೆಗೆ ಬರುವಂತೆ ಮಾಡಬೇಕು, ಹಾಗೂ ಆರ್ ಟಿ ಈ ನಿಯಮದ ಪ್ರಕಾರ ದೈಹಿಕ ಶಿಕ್ಷಕರು ಹಾಗೂ ಮುಖ್ಯ ಶಿಕ್ಷಕರನ್ನು ಹೊರತು ಪಡಿಸಿ 18 ಶಿಕ್ಷಕರನ್ನು ಕೊಡಬೇಕು ಎನ್ನುವ ಬೇಡಿಕೆಯನ್ನು ಇಟ್ಟುಕೊಂಡು ದಿನಾಂಕ 10 ಮಂಗಳವಾರದಿಂದ ಮಕ್ಕಳನ್ನು ಶಾಲೆಗೆ ಕಳುಹಿಸದೆ ಪೋಷಕರು ಪ್ರತಿಭಟನೆ ಮಾಡಲು ನಿರ್ಧರಿಸಿರುತ್ತಾರೆ
ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸಲು ಎಸ್ಡಿಎಂಸಿ ಹಾಗೂ ಪೋಷಕರ ಪ್ರಯತ್ನ ಒಂದೆಡೆ ಆದರೆ ಆ ಶಾಲೆಗಳನ್ನು ಹೇಗಾದರೂ ಮಾಡಿ ಮುಚ್ಚಬೇಕು ಎನ್ನುವ ಇಲಾಖೆ ಹಾಗೂ ಮುಖ್ಯ ಶಿಕ್ಷಕರ ನಡೆಯು ಎಲ್ಲರ ಸಂಶಯಕ್ಕೆ ಎಡೆ ಮಾಡಿ ಕೊಟ್ಟಿರುವುದು ಮಾತ್ರ ಸುಳ್ಳಲ್ಲ..
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.