(www.vknews.in) ; ಜ್ಞಾನ ಭಾರತಿ ಆಂಗ್ಲ ಮಾಧ್ಯಮ ಶಾಲೆ , ಇಳಂತಿಲ (ಉಪ್ಪಿನಂಗಡಿ) ಇಲ್ಲಿ ಡಾಕ್ಟರ್ ಹಬೀಬುರ್ರಹ್ಮಾನ್ ಅವರಿಂದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ know thyself ವಿಶೇಷ ತರಬೇತಿ ಕಾರ್ಯಗಾರ
ಎಸ್ ಎಸ್ಎಲ್ ಸಿ ಪರೀಕ್ಷೆ ಪ್ರಾಮುಖ್ಯತೆ ಮತ್ತು ಜೀವನದ ಗುರಿ ಮತ್ತು ತಮ್ಮ ಶಕ್ತಿಯ ಅರಿವು ಇದರ ಬಗ್ಗೆ ವಿಶೇಷ ಕಾರ್ಯಗಾರ ಹಮ್ಮಿಕೊಂಡು ವಿದ್ಯಾರ್ಥಿಗಳು ಭವಿಷ್ಯದಲ್ಲಿ ಏನಾಗಬೇಕು ಎಂಬುದರ ಬಗ್ಗೆ ಅಂತರಾಷ್ಟ್ರೀಯ ಸಂಪನ್ಮೂಲ ವ್ಯಕ್ತಿ ಬಹ್ರೇನ್ ಕಿಂಗ್’ಡಮ್ ವಿಶ್ವ ವಿದ್ಯಾನಿಲಯದ ಪ್ರಾಧ್ಯಾಪಕರಾದ ಡಾಕ್ಟರ್ ಹಬೀಬುರ್ರಹ್ಮಾನ್ ಅವರಿಂದ ಉತ್ತಮ ಕಾರ್ಯಕ್ರಮ ನಡೆಯಿತು.
ವಿದ್ಯಾರ್ಥಿಗಳು ನಮ್ಮ ಭವಿಷ್ಯದ ನಾಯಕರು , ಅವರು ಸರಿಯಾದ ರೀತಿಯಲ್ಲಿ ಗುರಿ ತಲುಪಲು ಅವರಲ್ಲಿ ಯಾವ ಕೌಶಲ್ಯ ಗಳು ಇರಬೇಕು ಎಂಬುದನ್ನು ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಿಗೆ ವಿವರಿಸಿದರು. ಶಾಲಾ ಪ್ರಾಂಶುಪಾಲರಾದ ಇಬ್ರಾಹಿಮ್ ಕಲೀಲ್ ಹೇಂತಾರ್ ಅವರನ್ನು ಸ್ವಾಗತಿಸಿದರು.ಅದೇ ರೀತಿಯಲ್ಲಿ ಶಾಲಾ ಸಂಚಾಲಕರು ಅಬ್ದುಲ್ ರವೂಫ್ ಯು ಟಿ , ವಿದ್ಯಾರ್ಥಿಗಳು ಉತ್ತಮ ಗುರಿಯನ್ನು ಇಟ್ಟು ಅದಕ್ಕೆ ಸತತ ಪ್ರಯತ್ನ ಮಾಡಬೇಕು ಎಂದರು.
ಶಾಲಾ ವಿಜ್ಞಾನ ಶಿಕ್ಷಕರು ಸುಚಿತ್ರಾ ಮಿಸ್ ಸಂಪನ್ಮೂಲ ವ್ಯಕ್ತಿ ಯನ್ನು ಪರಿಚಯಿಸಿದರು. ಶಾಲಾ ಮುಖ್ಯ ಶಿಕ್ಷಕಿಯರಾದ ಅರುಣಾ, ತಾಹಿರ ಭಾಗವಹಿಸಿದರು ಮತ್ತು 10 ನೇ ತರಗತಿ ಇತರ ಶಿಕ್ಷಕಿಯರಾದ ಸವಿತಾ ಮತ್ತು ನೇತ್ರಾವತಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.