ಮಂಗಳೂರು (www.vknews.in) : ಮಂಗಳೂರು ಜಿಲ್ಲಾಧಿಕಾರಿ ಕಛೇರಿ ಯಲ್ಲಿ ಆಟೊ ಚಾಲಕರು ಮಾಲಕರ ಮಾತುಕತೆ ಸಭೆಯಲ್ಲಿ ಗ್ರಾಮಾಂತರ ಆಟೊ ರಿಕ್ಷಾಗಳಿಗೆ ಜಿಲ್ಲಾದ್ಯಂತ ಸಂಚಾರಿಸಲು ಅವಕಾಶ ಕೂಡಿ ಗ್ರಾಮಾಂತರ ಆಟೊ ಚಾಲಕರ ಪರ ಧ್ವನಿ ಎತ್ತಿದ ಆಟೋ ರಾಜಕನ್ಮಾರ್ ಯೂನಿಯನ್ (ರಿ) ದ.ಕ ಜಿಲ್ಲಾಧ್ಯಕ್ಷರಾದ ಸಿದ್ದೀಕ್ ಮುಡಿಪು ಎಲೆಕ್ಟ್ರಿಕಲ್ ಆಟೊ ಗಳಿಗೆ ಜಿಲ್ಲೆಯಲ್ಲಿ ಮುಕ್ತ ಸಂಚಾರಕ್ಕೆ ಅವಕಾಶ ನೀಡಿದ ಬಗ್ಗೆ ಕಳೆದ ಕೆಲವು ದಿನಗಳಿಂದ ಮಂಗಳೂರು ವಲಯ -1 ಆಟೊ ಚಾಲಕರು ರಿಕ್ಷಾ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಈ ಬಗ್ಗೆ ಜಿಲ್ಲಾಧಿಕಾರಿ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ,ಮಂಗಳೂರು ಪೋಲಿಸ್ ಕಮಿಷನರ್,RTO ಮತ್ತು ಅಧಿಕಾರಿಗಳು ಭಾಗವಹಿಸಿದ್ದರು. ಆಟೊ ಚಾಲಕರ ಮಾಲಕರ ಸಭೆಯಲ್ಲಿ ಆಟೊ ರಾಜಕನ್ಮಾರ್ ಯೂನಿಯನ್ (ರಿ) ದ.ಕ ಜಿಲ್ಲಾಧ್ಯಕ್ಷರಾದ ಸಿದ್ದೀಕ್ ಮುಡಿಪು ಭಾಗವಹಿಸಿ ಮಾತನಾಡಿದರು.
ಆಟೊ ರಿಕ್ಷಾಗಳಿಗೆ ವಲಯ 1 ಮತ್ತು ವಲಯ 2 ಅಂಥ ಈ ನಿಯಮ ರದ್ದು ಮಾಡಿ ಆಟೊ ರಿಕ್ಷಾಗಳಿಗೆ ಏಕರೂಪದ ಕಾನೂನು ಜಾರಿಗೆ ತರಬೇಕು ,ಗ್ರಾಮಾಂತರ ಆಟೊಗಳು ಜಿಲ್ಲೆಯಲ್ಲಿ ಮುಕ್ತ ಸಂಚಾರಕ್ಕೆ ಅನುಮತಿ ನೀಡಬೇಕು,ಗ್ರಾಮಾಂತರ ಆಟೊ ಗಳು ಜಿಲ್ಲಾದ್ಯಂತ ಪಾರ್ಕ್ ಮಾಡಿ ದುಡಿಯಲು ಅವಕಾಶ ಕೇಳುತ್ತಿಲ್ಲ ,ಆದರೆ ಜಿಲ್ಲಾದ್ಯಂತ ಸಂಚರಿಸಲು ಅವಕಾಶ ಕೊಡಿ,ಮೆಡಿಕಲ್, ಆಸ್ಪತ್ರೆ, ರೈಲು ನಿಲ್ದಾಣ, ಬಸ್ ನಿಲ್ದಾಣ, ವಿಮಾನ ನಿಲ್ದಾಣ ಜೊತೆ ಸರಕಾರಿ ಕಛೇರಿಗೆ ಮಂಗಳೂರು ನಗರಕ್ಕೆ ಆಗಮಿಸಿ ನಿರ್ಗಮಿಸಲು ಅವಕಾಶ ನೀಡಿ ಅಂಥ ಜಿಲ್ಲಾಧಿಕಾರಿ ಅವರ ಗಮನ ಸೆಳೆದರು.
ಎಲೆಕ್ಟ್ರಿಕಲ್ ಆಟೊಗಳಿಗೆ ನೀಡಿದ ಆಪರ್ ನಮಗೂ ನೀಡಬೇಕು ಜೊತೆಗೆ ಮಂಗಳೂರು ನಗರಕ್ಕೆ ತುರ್ತು ಅವಶ್ಯಕತೆ ಬಂದು ಹೋಗುವ ಆಟೊ ಗಳನ್ನು ತಡೆದು ದಂಡ ಹಾಕುವ ಟ್ರಾಪಿಕ್ ಪೋಲಿಸ್ ಹಾಗೂ RTO ಅಧಿಕಾರಿಗಳು ನಿಯಮದಲ್ಲಿ ರಿಯಾಯಿತಿ ನೀಡುವಂತೆ ,ಈ ಬಗ್ಗೆ ಗ್ರಾಮಾಂತರ ಅಟೊ ರಿಕ್ಷಾ ಜಿಲ್ಲೆಯಲ್ಲಿ ಸಂಚಾರಕ್ಕೆ ಮುಕ್ತ ಅವಕಾಶ ನೀಡದಿದ್ದರೆ ಜಿಲ್ಲೆಯ ಎಲ್ಲಾ ಗ್ರಾಮಾಂತರ ಆಟೊ ರಿಕ್ಷಾಗಳು ಮಂಗಳೂರು ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಅಂಥ ಜಿಲ್ಲಾಧಿಕಾರಿ ಅವರ ಗಮನ ಸೆಳೆದ ಸಿದ್ದೀಕ್ ಮುಡಿಪು.
ಜಿಲ್ಲಾಧಿಕಾರಿ ಕಛೇರಿಯಲ್ಲಿ ನಡೆದ ಆಟೊ ಚಾಲಕರ ಮಾಲಕರ ಸಭೆಯಲ್ಲಿ ಆಟೊ ರಾಜಕನ್ಮಾರ್ ಯುನಿಯನ್ ಗೌರವಅಧ್ಯಕ್ಷರಾದ ಉಸ್ಮಾನ್ ಮೊoಟೆ ಪದವು ,ಪ್ರಧಾನ ಕಾರ್ಯದರ್ಶಿ ಜಲೀಲ್ ಮುಡಿಪು ಜೊತೆಕಾರ್ಯದರ್ಶಿ ಶಫೀಕ್ ಕುಕ್ಕುಟ್ ಹಾಗೂ ಅಡ್ಮಿನ್ ಶರೀಫ್ ಮಂಚಿ, ಆಮ್ರಾಝ್ ಕಲ್ಕಟ್ , ಕರಾವಳಿಯ ಆಟೋ ಮುಡಿಪು ಪ್ರಧಾನ ಕಾರ್ಯದರ್ಶಿ ಕಿರಣ್, ಸದಸ್ಯರಾದ ಶಮೀರ್ , ಸಂಕೇತ್, ಬಾಸಿತ್ ಕರಾವಳಿ ಹಾಗೂ ಆಟೋ ರಾಜಕನ್ಮಾರ್ ತಂಡದ ಪದಾಧಿಕಾರಿಗಳು ಭಾಗವಹಿಸಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.