ಜೆದ್ಗಾ(www.vknews.in): ಈ ಬಾರಿಯ ಹಜ್ ಕುರಿತಾಗಿದ್ದ ಕೂತೂಹಲಕ್ಕೆ ತೆರೆಬಿದ್ದಿದ್ದು, ಈಗಾಗಲೇ ಸೌದಿ ಅರೇಬಿಯಾದಲ್ಲಿ ನೆಲೆಸಿರುವ ಸೀಮಿತ ಸಂಖ್ಯೆಯ ನಾಗರಿಕರು ಮತ್ತು ವಿದೇಶಿಗಳಿಗೆ ಈ ವರ್ಷದ ಹಜ್ ಮಾಡಲು ಅವಕಾಶ ನೀಡಲು ಸೌದಿ ಅರೇಬಿಯಾದ ಅಧಿಕಾರಿಗಳು ನಿರ್ಧರಿಸಿದ್ದಾರೆ. ಹಜ್ ಮತ್ತು ಉಮ್ರಾ ಸಚಿವಾಲಯದ ಅಧಿಕಾರಿಗಳು ಸೋಮವಾರ ಈ ಕುರಿತು ಸ್ಪಷ್ಟನೆ ನೀಡಿದ್ದು, ಜನದಟ್ಟಣೆ ಇರುವ ಸ್ಥಳಗಳಲ್ಲಿ ಕರೋನವೈರಸ್ ಸೋಂಕು ಹರಡುವ ಅಪಾಯವಿರುವ ಕಾರಣ ಈ ವರ್ಷ ಹಜ್ ಕೇವಲ ಸೌದಿಯಲ್ಲಿರುವ ನಾಗರೀಕರು ಹಾಗೂ ವಿದೇಶಿಗಳಿಗೆ ಸೀಮಿತ ಗೊಳಿಸಲು ನಿರ್ಧರಿಸಲಾಗಿದೆ. ಆ ಮೂಲಕ ಈಗಾಗಲೇ ಸೌದಿ ಅರೇಬಿಯಾದಲ್ಲಿ ನೆಲೆಸಿರುವ ವಿವಿಧ ರಾಷ್ಟ್ರೀಯತೆಗಳ ಯಾತ್ರಾರ್ಥಿಗಳು ಈ ಬಾರಿಯ ಹಜ್ ನಿರ್ವಹಿಸಲು ಸಾಧ್ಯವಾಗುತ್ತದೆ. ಸೌದಿ ಅರೇಬಿಯಾದಿಂದ ಹೊರಗಿರುವವರಿಗೆ ಈ ಬಾರಿಯ ಹಜ್ ಗೆ ಅವಕಾಶವಿರುವುದಿಲ್ಲ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.