ಜೆದ್ದಾ(www.vknews.in): ಸತತ ಮೂರು ತಿಂಗಳು ಕೊರೊನಾ ವೈರಸ್ ನೊಂದಿಗೆ ಹೋರಾಡಿದ ಸೌದಿ ಅರೇಬಿಯಾವು ಇದೀಗ ಸಹಜ ಸ್ಥಿತಿಯತ್ತ ಮರಳ ತೊಡಗಿದೆ. ದೈನಂದಿನ ಕೊವಿಡ್ ಪ್ರಕರಣ ಹಾಗೂ ಮರಣ ಸಂಖ್ಯೆಯಲ್ಲಿ ಇಳಿಕೆ ಹಾಗೂ ರೋಗಮುಕ್ತಿ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬರುವುದರೊಂದಿಗೆ ರೋಗಮುಕ್ತಿ ಸರಾಸರಿಯು ಶೇಖಡಾ 75 ಕ್ಕೆ ಏರಿಕೆಯಾಗಿದೆ. ಮಾತ್ರವಲ್ಲದೇ ತೀವೃ ಚಿಂತಾಜನಕ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 2346 ಮಂದಿಯ ಪೈಕಿ 47 ಮಂದಿ ಗುಣಮುಖರಾಗಿದ್ದಾರೆ. ಇಂದು ಸೌದಿಯಲ್ಲಿ ಹೊಸದಾಗಿ 2671 ಕೊವಿಡ್ ಪ್ರಕರಣಗಳು ಹಾಗೂ 5488 ರೋಗಮುಕ್ತಿ ದಾಖಲಾಗಿದೆ. ಕಳೆದ ಇಪ್ಪತ್ತನಾಲ್ಕು ತಾಸುಗಳಲ್ಲಿ 42 ಮೃತ್ಯು ದಾಖಲಾಗುವುದರೊಂದಿಗೆ ಒಟ್ಟು ಬಲಿಗಳ ಸಂಖ್ಯೆ 2325ಕ್ಕೆ ಏರಿಕೆಯಾಗಿದೆೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.