ಈ ಶೈಕ್ಷಣಿಕ ವರ್ಷ ಶಾಲೆ ತೆರೆಯದಿರಲು ಸರಕಾರ ಮಾಡಿರುವ ನಿರ್ಣಯ ಖಂಡನಾರ್ಹ:ಎಸ್ಡಿಎಂಸಿ ಸಮನ್ವಯ ವೇದಿಕೆ

(www.vknews.in)

೧ ರಿಂದ ೮ ನೇ ತರಗತಿಯವರೆಗೆ ಈ ವರ್ಷ ಶಾಲೆಗಳನ್ನು ತೆರೆಯದಿರಲು ಸರಕಾರ ತೆಗೆದ ನಿರ್ಧಾರ ಸಂವಿಧಾನದ ಮೂಲಭೂತ ಹಕ್ಕಿನ ಉಲ್ಲಂಘನೆ ಹಾಗು ಮಕ್ಕಳ ವಿರೋಧಿ ನಿರ್ಧಾರ

ಸರ್ಕಾರದ ಈ ನಿರ್ಧಾರ ತುಂಬಾ ದುರದೃಷ್ಟಕರ. ಸ್ಪಷ್ಟವಾಗಿ ಇದು ಬಡ ಮತ್ತು ಹಿಂದುಳಿದ ಸಮುದಾಯಗಳು ಮತ್ತು ಅವರ ಮಕ್ಕಳ ಹಿತಾಸಕ್ತಿ ಹಾಗು ಬೆಳವಣಿಗೆಗೆ ವಿರುದ್ಧದ ನಿರ್ಧಾರವಾಗಿದೆ.

ಇದನ್ನು ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯು ಖಂಡಿಸುತ್ತದೆ.

ಸಚಿವರ ನೇತೃತ್ವದಲ್ಲಿ ಸರಕಾರಿ ಶಾಲೆಗಳ ಪೋಷಕರು ಮತ್ತು ಎಸ್ಡಿಎಂಸಿ ಯವರಿಂದ ರಾಜ್ಯವ್ಯಾಪಿ ಅಭಿಪ್ರಾಯವನ್ನು ಕೇಳಿದ್ದು, ಎಲ್ಲಾ ಪೋಷಕರು ಒಕ್ಕೊರಲಿನಿಂದ ಶಾಲೆಯನ್ನು ತೆರೆಯುವ ಬಗ್ಗೆ ಸಹಮತ ವ್ಯಕ್ತ ಪಡಿಸಿದ್ದರು.ಅದಲ್ಲದೆ ಹಲವು ಶಿಕ್ಷಣ ತಜ್ಞರು, ಶಿಕ್ಷಣಕ್ಕೆ ಸಂಭಂದಪಟ್ಟ ಸಂಘ ಸಂಸ್ತೆ ಗಳು ಕೂಡ ಶಾಲೆ ತೆರೆದು ಪ್ರಾರಂಭ ಮಾಡುವ ಅಗತ್ಯತೆ ಬಗ್ಗೆ ಮನವರಿಕೆ ಮಾಡಿದ್ದು ಕೂಡ ,ಮಾನ್ಯ ಮುಖ್ಯ ಮಂತ್ರಿಯವರು ಸಂಬಂಧಪಟ್ಟ ಶಿಕ್ಷಣ ಸಚಿವರನ್ನು ಮೂಲೆಗುಂಪು ಮಾಡುವ ರೀತಿಯಲ್ಲಿ ಎಲ್ಲಾ ನಿರ್ಧಾರಗಳನ್ನು ಅವರೇ ಏಕೆ ತೆಗೆದುಕೊಳ್ಳುತ್ತಿದ್ದಾರೆ.

ಪೋಷಕರ ಮತ್ತು ಮಕ್ಕಳ ಹಾಗೂ ಸರಕಾರಿ ಶಾಲೆಯ ನಿಜವಾದ ವಾರಿಸುದಾರರಾದ ಎಸ್ಡಿಎಂಸಿ ಯವರ ಅಭಿಪ್ರಾಯಗಳಿಗೆ ಯಾವುದೇ ಬೆಲೆ ಇಲ್ಲವೇ, ಶಾಲೆ ತರೆಯದಿರುವ ಬಗ್ಗೆ ಮೊದಲೇ ನಿಶ್ಚಯ ಮಾಡಿದ್ದರೆ ಪೋಷಕರ ಅಭಿಪ್ರಾಯ ಎನ್ನುವ ನಾಟಕದ ಅಗತ್ಯವೇನಿತ್ತು. ಈ ಶೈಕ್ಷಣಿಕ ವರ್ಷ ಶಾಲೆ ತೆರೆಯದಿರಲು ಮಾಡಿದ ನಿರ್ಣಯದ ಹಿಂದಿರುವ ಒತ್ತಡ ಯಾವುದು ಎಂಬುದು ದೊಡ್ಡ ರಹಸ್ಯವಾಗಿದೆ.

ಸರಕಾರಿ ಶಾಲೆಗಳ ಮಕ್ಕಳಿಗೆ ಅತೀ ಸುರಕ್ಷಿತ ವಿಧಾನದಿಂದ ಕಲಿಸುತ್ತಿದ್ದ ವಿಧ್ಯಾಗಮ ಎನ್ನುವ ಒಂದು ಒಳ್ಳೆಯ ಕಾರ್ಯಕ್ರಮವು ಮಾನ್ಯ ಶಿಕ್ಷಣ ಸಚಿವರ ನೇತೃತ್ವದಲ್ಲಿ ನಡೆಯುತ್ತಿರುವ ಸಂದರ್ಭದಲ್ಲಿ ಯಾವುದೇ ವೈಜ್ಞಾನಿಕ ಮತ್ತು ದಾಖಲೆಗಳು ಇಲ್ಲದೆ ಮಾಧ್ಯಮ ಮತ್ತು ಕೆಲವು ಲಾಬಿಗಳ ದುರುದ್ದೇಶ ಪೂರಿತ ವಾದ ಸಂದೇಶದಿಂದಾಗಿ ನಿಲ್ಲಿಸಲಾಗಿದೆ.

ಮಕ್ಕಳ ಹಕ್ಕುಗಳನ್ನು ಎತ್ತಿಹಿಡಿಯುವ ಮತ್ತು ರಕ್ಷಿಸುವ ಪ್ರಾಥಮಿಕ ಬಾಧ್ಯತೆಯನ್ನು ಹೊಂದಿರುವ ರಾಜ್ಯ ಸರಕಾರವೇ “ಮಕ್ಕಳ ಹಿತಾಸಕ್ತಿಗೆ” ವಿರುದ್ಧವಾದ ನಿರ್ಧಾರ ತೆಗೆದುಕೊಳ್ಳುವ ಮೂಲಕ ಬಾಲ ಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ , ಜೀತ ಪದ್ಧತಿ ಮತ್ತು ಮಕ್ಕಳ ಸಾಗಾಣಿಕೆಗೆ ಉತ್ತೇಜನ ನೀಡುವ ನೀತಿ ಅನುಸರಿಸಲು ಹೊರಟಿರುವುದು ಖಂಡನೀಯ .

ಇದು ಸಂವಿಧಾನದಲ್ಲಿ ಬದುಕುವ ಹಾಗು ಶಿಕ್ಷಣದ ಮೂಲ ಭೂತ ಹಕ್ಕಿನ (ಪರಿಚ್ಛೇಧ ೨೧, ೨೧ ಎ ಮತ್ತು ೨೪ ಹಾಗು ರಾಜ್ಯ ನಿರ್ದೇಶಕ ತತ್ವಗಳಾದ ೩೯,೪೧,೪೫,೪೬ ಮತ್ತು ೪೭ ) ಮತ್ತು ಮಕ್ಕಳ ಹಕ್ಕುಗಳ ಒಡಂಬಡಿಕೆಯ (ಯುಎನ್‌ಸಿಆರ್‌ಸಿ) ಸ್ಪಷ್ಟ ಉಲ್ಲಂಘನೆಯಾಗಿದೆ. ರಾಜ್ಯ ತನ್ನ ಜವಾಬ್ದಾರಿಯಿಂದ ನುಣಿಚಿಕೊಳ್ಳುವ ಸ್ಪಷ್ಟ ಉದಾಹರಣೆಯಾಗಿದೆ .

ಸರಕಾರವು ಕೂಡಲೇ ತಮ್ಮ ನಿರ್ಧಾರದಿಂದ ಹಿಂದೆ ಸರಿದು ಪುನರ್ವಿಮರ್ಷೆ ಮಾಡಿ ಸರಕಾರಿ ಶಾಲೆಗಳಲ್ಲಿ ಕಲಿಯುವ ಮಕ್ಕಳಿಗೆ ಒಳ್ಳೆಯ ಗುಣಮಟ್ಟದ ಶಿಕ್ಷಣವನ್ನು ಕೊಡಲು ಈ ಹಿಂದೆ ತಾತ್ಕಾಲಿಕ ವಾಗಿ ನಿಲ್ಲಿಸಲಾಗಿದ್ದ ವಿಧ್ಯಾಗಮವನ್ನು ಪ್ರಾರಂಭ ಮಾಡುವುದರೊಂದಿಗೆ, ಆದಷ್ಟು ಬೇಗ ಶಾಲೆಗಳನ್ನು ತೆರೆಯುವ ಬಗ್ಗೆ ಆದೇಶವನ್ನು ಕೊಡಬೇಕು.

ಇಲ್ಲದಿದ್ದರೆ ಎಸ್ಡಿಎಂಸಿ ಸಮನ್ವಯ ವೇದಿಕೆಯು ಪೋಷಕರೊಂದಿಗೆ ಸೇರಿ ಹೋರಾಟ ಮಾಡಲಿದ್ದೇವೆ ಎಂದು

ಸಮನ್ವಯ ವೇದಿಕೆಯ ಮಹಾ ಪೋಷಕರಾದ ನಿರಂಜನಾರಾಧ್ಯ ವಿ ಪಿ,

ರಾಜ್ಯಾಧ್ಯಕ್ಷರಾದಮೊಯಿದಿನ್ ಕುಟ್ಟಿ,

ಕಾರ್ಯದರ್ಶಿ ಕವಿತಾ ಹಾಸನ

ವಿಭಾಗ ಉಸ್ತುವಾರಿ ಗಳಾದ ಅಶೋಕ್ ಮಾಗಡಿ, ನಾಗೇಶ್ ಕೊಡಗು,

ಡಿ. ವಿ.ಕುಪ್ಪಸ್ತ್ರ ವಿಜಯಪುರ

ಮತ್ತು ರಾಘವೇಂದ್ರ ಗುನ್ನಲ್ಲಿ ರವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿರುತ್ತಾರೆ

 

 

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...