ಸುಳ್ಯ(ವಿಶ್ವಕನ್ನಡಿಗ ನ್ಯೂಸ್): ಲಾಕ್ ಡೌನ್ ನಡುವೆ ಹಲವಾರು ಕಾರ್ಯಾಚರಣೆಗಳ ಮೂಲಕ SYS & SSF ತುರ್ತು ಸೇವಾ ತಂಡವು ಸಂಚರಿಸುತ್ತಿದ್ದು ಇದೀಗ ಸುಳ್ಯದ ಸರಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಗಾಗಿ ಬಂದಿದ್ದ ರೋಗಿಯನ್ನು ಮನೆಗೆ ತಲುಪಿಸಿ ಕಾರ್ಯಾಚರಣೆಯನ್ನು ವಿಸ್ತರಿಸಿದ್ದಾರೆ.
ಎಪ್ರಿಲ್ 29 ರಂದು ಕಾವು ಎಂಬಲ್ಲಿನ ರಘುನಾಥ ರೈ ಎಂಬ ಡಯಾಲಿಸೀಸ್ ರೋಗಿಯನ್ನು ಸುಳ್ಯ ಸರ್ಕಾರಿ ಆಸ್ಪತ್ರೆಯಿಂದ ಅವರ ಮನೆಗೆ ಉಚಿತವಾಗಿ ಬಿಡಲು ಪುತ್ತೂರು ಶಾಸಕರ ವಾರ್ ರೂಮ್ ಮೂಲಕ ಸಹಾಯ ಮಾಡುವ ಪುತ್ತೂರು ಸರಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ರಫೀಕ್ ದರ್ಬೆಯವರು ಕೇಳಿಕೊಂಡಾಗ ಸುಳ್ಯದ ಮುಖ್ಯ ವೈದ್ಯಾಧಿಕಾರಿ ಡಾ|ಬಾನುಮತಿಯವರು SYS & SSF ತುರ್ತು ಸೇವಾ ತಂಡದ ಸದಸ್ಯರಾದ ಸಿದ್ದೀಕ್ ಗೂನಡ್ಕರವರೊಂದಿಗೆ ದೂರವಾಣಿ ಮುಖಾಂತರ ಕೇಳಿಕೊಂಡರು. ತಕ್ಷಣ ಕಾರ್ಯ ಪ್ರವೃತ್ತರಾದ ತುರ್ತು ಸೇವಾ ತಂಡವು ರೋಗಿಯನ್ನು ಮನೆಗೆ ತಲುಪಿಸುವಲ್ಲಿ ಯಶಸ್ವಿಯಾಯಿತು.
ತನ್ನ ಸ್ವಂತ ವಾಹನದಲ್ಲಿ ಡಯಾಲಿಸಿಸ್ ರೋಗಿಯನ್ನು ಕಾವು ನಲ್ಲಿರುವ ಮನೆಗೆ ತಲುಪಿಸಿ ಬರಲು ತಯಾರಾದ ಸುಳ್ಯ SYS & SSF ತುರ್ತು ಸೇವಾ ತಂಡದ ಸಕ್ರಿಯ ಕಾರ್ಯಕರ್ತರಾದ ರಫೀಕ್.ಬಿ.ಎಂ & ರಶೀದ್ ಕೆರೆಮೂಲೆಯವರ ಸೇವೆಯು ಪ್ರಶಂಸೆಗೆ ಪಾತ್ರವಾಗಿದೆ. ತುರ್ತು ಸೇವಾ ತಂಡದ ಮೂಲಕ ಹಲವು ಕಾರ್ಯಾಚರಣೆಗಳಲ್ಲಿ ಭಾಗಿಯಾಗಲು ಸಾಧ್ಯವಾದ ಬಗ್ಗೆ ಈ ಕಾರ್ಯಕರ್ತರು ಸಹ ಸಂತುಷ್ಟರಾಗಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.