ವಾಷಿಂಗ್ಟನ್(ವಿಶ್ವಕನ್ನಡಿಗ ನ್ಯೂಸ್): ಚೀನಾದ ವುಹಾನ್ ನಗರದಲ್ಲಿ ಪ್ರಾರಂಭವಾದ ಕೋವಿಡ್-19 ಕೊರೊನಾವೈರಸನ್ನು ನಿಯಂತ್ರಣದಲ್ಲಿಡದೆ ಚೀನಾವು “ಪರಿಸ್ಥಿತಿಯನ್ನು ತಪ್ಪಾಗಿ ನಿರ್ವಹಿಸಿದೆ” ಎಂದು ಶ್ವೇತಭವನ ಶುಕ್ರವಾರ ಹೇಳಿದೆ.
ನವೆಂಬರ್ ಮಧ್ಯದಲ್ಲಿ ಚೀನಾದ ವುಹಾನ್ ನಗರದಲ್ಲಿ ಮೊದಲ ಬಾರಿಗೆ ವರದಿಯಾದ ಮಾರಣಾಂತಿಕ ಕರೋನವೈರಸ್ ಇದುವರೆಗೆ 64,000 ಅಮೆರಿಕನ್ನರು ಸೇರಿದಂತೆ ಜಾಗತಿಕವಾಗಿ 2,35,000 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ ಮತ್ತು ವಿಶ್ವದಾದ್ಯಂತ 3.3 ಮಿಲಿಯನ್ ಜನರಿಗೆ ಸೋಂಕು ತಗುಲಿದೆ.
ಜರ್ಮನಿ, ಬ್ರಿಟನ್ ಸೇರಿದಂತೆ ಆಸ್ಟ್ರೇಲಿಯಾ ದೇಶಗಳು ಕೊರೊನಾ ವೈರಸ್ ಜಗತ್ತಿನಾದ್ಯಂತ ಹರಡಲು ಚೀನಾ ಕಾರಣ ಎಂದು ದೂಷಿಸುತ್ತಿದೆ. ಗುರುವಾರ ಅದ್ಯಕ್ಷ ಡೊನಾಲ್ಡ್ ಟ್ರಂಪ್ ವೈರಸ್ ಹರಡುವಿಕೆಯನ್ನು ತಪ್ಪಾಗಿ ನಿರ್ವಹಿಸಿದಕ್ಕಾಗಿ ಚೀನಾವನ್ನು ಶಿಕ್ಷಿಸಲು ಸುಂಕವನ್ನು ಒಂದು ಸಾಧನವಾಗಿ ಬಳಸುವ ಬಗ್ಗೆ ಸುಳಿವು ನೀಡಿದ್ದರು. ಟ್ರಂಪ್ ಅವರ ಸೂಚನೆಯ ಮರುದಿನವೇ ಮಾರಕಟ್ಟೆಗಳು ಕುಸಿತ ಕಂಡಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.