ನಲವತ್ತು ದಿವಸದಿಂದ ಬಂದಾಗಿದ್ದ ಮದ್ಯ ಮಾರಾಟ : ಪಾನ ನಿಷೇಧ ಒಂದು ವಿಶ್ಲೇಷಣೆ

(www.vknews.com) : ಈಗ ನಲವತ್ತು ದಿವಸದಿಂದ ಬಂದಾಗಿದ್ದ ಮದ್ಯ ಮಾರಾಟ ಈಗ ಪನರಾರಂಭವಾಗಿದೆ.
ಈಗ ಕೆಲವರು ರಾಜಕೀಯ, ಕೆಲವರು ಸಾಮಾಜಿಕ ಕಳಕಳಿಯಿಂದ ಮತ್ತೆ ಕೆಲವರು ಸುಮ್ಮನೆ ಪ್ರಚಾರದ ಕಾರಣ ಪಾನ ನಿಷೇಧ ಮಾಡಿರಿ ಎಂದು ಸರಕಾರಕ್ಕೆ ಕೇಳುತ್ತಿದ್ದಾರೆ.

ಈ ದೇಶದಲ್ಲಿ ಸ್ವಾತಂತ್ರ ಬಂದ ಕೆಲವು ವರ್ಷಗಳ ಕಾಲ ಪಾನ ಪ್ರತಿಬಂಧ ಜಾರಿಯಲ್ಲಿತ್ತು. ನಂತರ ಪಾನಪ್ರತಿಬಂಧವನ್ನು ತೆಗೆದು ಹಾಕಿ ಸಾರಾಯಿ ಮಾರಾಟವನ್ನು ಸರಕಾರ ಪ್ರಾರಂಭಿಸಿತು.ಈಗ ಗುಜರಾತ್ ಮತ್ತು ಇನ್ನ ಮೂರು ರಾಜ್ಯಗಳಲ್ಲಿ ಮಾತ್ರ ಪಾನ ನಿಷೇಧ ಜಾರಿಯಲ್ಲಿದೆ. ಆಂಧ್ರ ಪ್ರದೇಶದಲ್ಲಿ ಚಂದ್ರ ಬಾಬು ನಾಯ್ಡು ಸರಕಾರ ಪಾನ ಪ್ರತಿಬಂಧ 1994ರಲ್ಲಿ ಜಾರಿ ಮಾಡಿ 1997 ರಲ್ಲಿ ಪಾನ ಪ್ರತಿಬಂಧ ತೆಗೆದು ಹಾಕಿತು.

ಸಂವಿಧಾನದ ರಾಜ್ಯನೀತಿಯ ನಿರ್ದೇಶಕ ತತ್ವಗಳ ಪ್ರಕಾರ ಪಾನ ಪ್ರತಿಬಂಧವನ್ನ ರಾಜ್ಯ ಸರಕಾರಗಳು ಜಾರಿ ಮಾಡಬೇಕು (ಸಂವಿಧಾನದ ಅನುಚ್ಚೆದ 47) ಆದರೆ ಈವರೆಗೂ ಆಳಿದ ಯಾವದೇ ಪಕ್ಷಗಳ ಸರಕಾರಗಳೂ ಈ ಪಾನ ಪ್ರತಿಬಂಧ ಮಾಡುವ ನೀತಿಯನ್ನು ಗಂಭೀರವಾಗಿ ಗಣಿಸಿಲ್ಲ.

ಮದ್ಯ ಮಾರಾಟ ಒಂದು ಸರಕಾರದ ಆದಾಯ ಮೂಲ ಎಂದು ಪರಿಗಣಿಸದ ಕಾಲದಲ್ಲಿ ಪಾನ ಪ್ರತಿಬಂಧ ಜಾರಿ ಸುಲಭವಾಗಿತ್ತು ಆದರೆ ಅದನ್ನು ಮಾಡಲಿಲ್ಲ. ಈ ಬಗ್ಗೆ ಸಾಮಾಜಿಕ ಕಳಕಳಿಯಿಂದ ಯಾವದೇ ಸಂಘಟನೆ ಗಂಭೀರ ಕಾನೂನು ಅಥವಾ ಸಾಮಾಜಿಕ ಹೋರಾಟ ಮಾಡಿಲ್ಲ.ಇಂದು ಚುನಾಯಿತ ಪ್ರಜಾಸರಕಾರ ಮಧ್ಯ ಮಾರಾಟವೂ ಒಂದು ದೊಡ್ಡ ಆದಾಯದ ಮೂಲ ಎಂದು ಪರಿಗಣಿಸಿದೆ.ಕುಡುಕರ ಕೂಗು ಸರಕಾರಕ್ಕೆ ಬೇಗ ತಲುಪುವ ಹಂತ ಮುಟ್ಟಿದೆ

ಸಾರಾಯಿಯಿಂದ ಸಂಸಾರ ಹಾಳಾಗುತ್ತದೆ ಎನ್ನುತ್ತಿದ್ದರು ಮೊದಲು.ಈಗ ಸಾರಾಯಿ ಇಲ್ಲದೇ ಕುಡುಕರು ಸಾಯುತ್ತಾರೆ. ಆಂಧ್ರದಲ್ಲಿ ಸಾರಾಯಿ ನಿಷೇಧ ಮಾಡಿದಾಗ ಅಲ್ಲಿಯ ಕರ್ನಾಟಕ ಗಡಿಭಾಗ ಗಂಡಸರು ಕರ್ನಾಟಕದಲ್ಲಿ ಸಾರಾಯಿ ಕುಡಿಯಲು ಬರುತ್ತಿದ್ದರು ಇದನ್ನು ನೋಡಿ ಅಲ್ಲಿಯ ಹೆಂಗಸರು ತಮ್ಮ ಗಂಡಂದಿರು ರಾತ್ರಿ ಮನೆಗೆ ಬಾರದೆ ಕರ್ನಾಟದಲ್ಲಿ ಕುಡಿದು ಬೀಳುತ್ತಾರೆ ಆದ ಕಾರಣ ಪಾನಪ್ರತಿಬಂದ ತೆರವು ಮಾಡಲು ಕೇಳಿದರು

ಈಗ ರಾಜಕಾರಣಿಗಳಿಗೆ ಕುಡುಕರ ಮತಗಳೂ ಬಹುಮುಖ್ಯ. ಚುನಾವಣೆಯಲ್ಲಿ ಹೆಂಡ ಹಣ ಹೇಗೆ ಕೆಲಸ ಮಾಡುತ್ತವೆ ಎನ್ನುವದು ಸರ್ವವೇದ್ಯ.ಇದು ಸಾಮಾಜಿಕ ಸ್ವಾಸ್ಥ ಹಾಳುಮಾಡುವ ಹವ್ಯಾಸ ಇದರಿಂದ ಸರಕಾರ ಹಣ ಮಾಡಿಕೊಳ್ಳುವುದು ರಾಜಧರ್ಮ ಆಗದು.
ಕುಡುಕರ ಮತಗಳೂ ಮತ್ತು ರಾಜ್ಯದ ಬೊಕ್ಕಸಕ್ಕೆ ಆದಾಯವೂ ಮುಖ್ಯ ಎನ್ನುವ ರಾಜಕೀಯ.ಕುಡುಕರ ಕಾಟ ದಿಂದ ತೊಂದರೆಗೊಳಗಾಗುವ ಸಮಾಜ ಗೋಳು ಇವುಗಳ ಬಗ್ಗೆ ಗಂಭೀರ ಚಿಂತನೆ ಅಗತ್ಯ

ಇಂತಹ ಗಂಭೀರವಾದ ವಿಷಯವನ್ನು ಎಲ್ಲ ರಾಜಕೀಯ ಪಕ್ಷಗಳು ರಾಜಧರ್ಮ ಪಾಲಿಸುವ ದಿಕ್ಕಿನಲ್ಲಿ ಸಮಾಲೋಚಿಸಿ ಒಂದು ಪರಿಹಾರ ಕಂಡುಕೊಳ್ಳಬೇಕು. – ಸಂಗಪ್ಪ ಮಿಟ್ಟಲಕೋಡ್ ನಿವೃತ್ತ ಜಿಲ್ಲಾ ನ್ಯಾಯಾಧೀಶರು ಪ್ರಸ್ತುತ ಧಾರವಾಡ ಹೈಕೋರ್ಟ್ ನ ಹಿರಿಯ ವಕೀಲರು

 

ವಿಶ್ವ ಕನ್ನಡಿಗ ನ್ಯೂಸ್

    Leave Your Comment

    Your email address will not be published.*

    ಚಾಟ್ ಮಾಡಿ
    1
    VK News Official Chat
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...