ನನ್ನ ಏಳಿಗೆಯನ್ನು ಸಹಿಸದೆ ಕೆಲವರು ನನ್ನ ವಸ್ತ್ರಗಳನ್ನು ಕಳಚಿ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ – ಸ್ವಾಮೀಜಿ
ಹುಬ್ಬಳ್ಳಿ (www.vknews.com) : ಮದ್ಯದ ಮತ್ತಲ್ಲಿ ತೇಲಾಡಿ ಬೆತ್ತಲಾಗಿರುವ ಸ್ವಾಮೀಜಿ ಅಶ್ಲೀಲ ದೃಶ್ಯವನ್ನು ಕಂಡು ಹುಬ್ಬಳ್ಳಿ ಜನರು ಬೆಚ್ಚಿಬಿದ್ದಿದ್ದಾರೆ. ಶಬರಿ ನಗರದ ಅಯ್ಯಪ್ಪ ಸ್ವಾಮೀಜಿ ಮಠದ ಪೀಠಾದೀಶನ ಬೆತ್ತಲೆ ಪುರಾಣದ ವಿಡಿಯೋ ವೈರಲ್ ಆಗುತ್ತಿದ್ದು, ಮೋಹನ್ ಗುರು ಸ್ವಾಮೀಜಿ ಅವತಾರ ಕಂಡು ಭಕ್ತಾಧಿಗಳು ಮತ್ತು ಸಾರ್ವಜನಿಕರು ಆಕ್ರೋಶ ಹೊರ ಹಾಕುವುದರೊಂದಿಗೆ ಸ್ವಾಮೀಜಿಯನ್ನು ಮಠದಿಂದ ಹೊರ ಕಳುಹಿಸಬೇಕೆಂಬ ಒತ್ತಾಯಿಸಿದ್ದಾರೆ
ಮೋಹನ್ ಸ್ವಾಮಿ ರಾತ್ರಿ ಕಂಠಪೂರ್ತಿ ಕುಡಿದು ಬೆತ್ತಲಾಗಿ ಕುಸಗಲ್ ರಸ್ತೆಯ ಸಿದ್ಧಾರೂಢ ಆಶ್ರಮದಲ್ಲಿ ಮಲಗಿದ್ದಾನೆ. ಬೆಳಗ್ಗೆ ಮಠಕ್ಕೆ ಭಕ್ತರು ಬಂದಾಗ ಸ್ವಾಮಿಯ ರಹಸ್ಯ ಬೆಳಕಿಗೆ ಬಂದಿದೆ.
ಸದ್ಯ ವಿಡಿಯೋ ಕುರಿತು ಸ್ಪಷ್ಟನೆ ನೀಡಿರುವ ಅಯ್ಯಪ್ಪ ಸ್ವಾಮೀಜಿ ಮಠದ ಪೀಠಾದೀಶ ಮೋಹನ ಗುರುಸ್ವಾಮಿ, ಕುಸುಗಲ್ ರಸ್ತೆಯಲ್ಲಿರುವ ಸಿದ್ದಾರೂಡ ಮಠದಲ್ಲಿ ವಿಶ್ರಾಂತಿಗಾಗಿ ತಂಗಿದ್ದ ವೇಳೆ ನನ್ನ ವಸ್ತ್ರಗಳನ್ನು ಕಳಚಿ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ನನ್ನ ಏಳಿಗೆಯನ್ನು ಸಹಿಸದೆ ಕೆಲವರು ನನ್ನ ವಸ್ತ್ರಗಳನ್ನು ತೆಗೆದು ನಗ್ನ ದೃಶ್ಯವನ್ನು ಸೆರೆ ಹಿಡಿದಿದ್ದಾರೆ ಈ ಕುರಿತು ನಾನು ಸೈಬರ್ ಪೊಲೀಸ್ ಠಾಣೆಗೆ ದೂರು ಸಲ್ಲಿಸುತ್ತೇನೆ ಎಂದು ಸ್ವಾಮೀಜಿ ಹೇಳಿದ್ದಾರೆ.
ವರದಿ : ನಯನ್ ಮಹೇಶ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.