(www.vknews.com) : ತೆಕ್ಕಿಲ್ ಗ್ರಾಮೀಣಾಭಿರುದ್ಧಿ ಪ್ರತಿಷ್ಠಾನ (ರಿ )ಅರಂತೋಡು ಇದರ ವತಿಯಿಂದ ಪ್ರತಿ ವರ್ಷ ರಂಜಾನ್ ತಿಂಗಳಲ್ಲಿ ನಡೆಸುವ 15ನೇ ವರ್ಷದ ಸೌಹಾರ್ದ ಇಫ್ತಾರ್ ಕೂಟವನ್ನು ಅರಂತೋಡಿನ ತೆಕ್ಕಿಲ್ ಸಮುದಾಯ ಭವನದಲ್ಲಿ ದಿನಾಂಕ 21-05-2020 ಗುರುವಾರ ಸಂಜೆ 4:30ಕ್ಕೆ ಏರ್ಪಡಿಸಲಾಗಿದೆ.
ಈ ವರ್ಷ ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ ಯಾವುದೇ ಸಾರ್ವಜನಿಕ ಸಭೆಯನ್ನು ನಡೆಸದೆ, ವಿಶ್ವಾಧ್ಯಂತ ಹಬ್ಬಿದ ಕೋವಿಡ್ 19 ಮಹಾಮಾರಿಯ ನಿರ್ಮೂಲನೆಗೆ ವಿಶೇಷ ಪ್ರಾರ್ಥನೆ ಯನ್ನುನಡೆಸಿ ಇಫ್ತಾರ್ ಕಿಟ್ ಅನ್ನು ಅರ್ಹ ಫಲಾನುಭವಿಗಳ ಮನೆಗಳಿಗೆ ತಲುಪಿಸಲಾಗುವುದು.
ವಿಶೇಷ ಪ್ರಾರ್ಥನೆ ಯನ್ನು ಅರಂತೋಡು ಬದ್ರಿಯಾ ಜುಮಾ ಮಸೀದಿಯ ಖತೀಬ್ ರಾದ ಅಲ್ ಹಾಜ್ ಇಸಾಕ್ ಬಾಖವಿ ನೆರವೇರಿಸಲಿದ್ದು ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷರಾದ ಟಿ. ಎಂ. ಶಾಹಿದ್ ತೆಕ್ಕಿಲ್, ಕೋಶಾಧಿಕಾರಿ ಟಿ. ಎಂ. ಜಾವೇದ್ ತೆಕ್ಕಿಲ್ ಮೊದಲಾದವರು ಉಪಸ್ಥಿತರಿರುವರು ಎಂದು ಸಂಸ್ಥೆಯ ಕಾರ್ಯದರ್ಶಿ ಅಶ್ರಫ್ ಗುಂಡಿ ತಿಳಿಸಿರುತ್ತಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.