ಯಾದಗಿರಿ (www.vknews.com) : ಕೊರೊನಾ ವೈರಸ್, ಈಗ ಜಿಲ್ಲೆಯ ಮದುವೆ ಮನೆಯೊಂದರ ಬಾಗಿಲಿಗೆ ತೆರಳಿದೆ. ಇಂದು ಮದುವೆಯಾಗಬೇಕಿದ್ದ ವಧುವಿನ ತಂದೆ ಹಾಗೂ ತಂಗಿಗೆ ಕೊರೊನಾ ಅಂಟಿಕೊಂಡಿದೆ.
ಯಾದಗಿರಿ ತಾಲೂಕಿನ ಅಲ್ಲಿಪೂರ ತಾಂಡಾದ ಯುವತಿ ಜೊತೆ ನಾಲ್ವಾರ ತಾಂಡಾದ ಯುವಕನ ಮದುವೆ ನಿಗದಿಯಾಗಿತ್ತು. ಮದುವೆ ಮನೆಯಲ್ಲಿ ಈಗ ಆತಂಕದ ವಾತಾವರಣ ಸೃಷ್ಟಿಸಿದೆ. ಹೀಗಾಗಿ ಮದುವೆಯನ್ನು ಮುಂದಕ್ಕೆ ಹಾಕಲಾಗಿದೆ.
ವಧು ಮತ್ತು ಕುಟುಂಬಸ್ಥರು, ಸದ್ಯ ಆಂಧ್ರಪ್ರದೇಶದ ನೆಲ್ಲೂರನಲ್ಲಿ ವಾಸವಿದ್ದಾರೆ. ಮಗಳ ಮದುವೆ ಮಾಡುವ ಹಿನ್ನೆಲೆಯಲ್ಲಿ ಈ ಕುಟುಂಬ ಕಳೆದ 10 ದಿನಗಳ ಹಿಂದೆ ಜಿಲ್ಲೆಗೆ ಆಗಮಿಸಿತ್ತು. ಅಂತರ್ ರಾಜ್ಯ ಪ್ರಯಾಣದ ಹಿನ್ನೆಲೆ ಈ ಕುಟುಂಬದ ಎಲ್ಲರಿಗೂ ಪರೀಕ್ಷೆ ಮಾಡಿ ಸ್ಯಾಂಪನ್ ಗಳನ್ನು ಲ್ಯಾಬ್ ಗೆ ಕಳುಹಿಸಲಾಗಿತ್ತು. ಇವರೆಲ್ಲರನ್ನು ಏಳು ದಿನ ಕ್ವಾರೆಂಟೈನ್ ನಲ್ಲಿಟ್ಟು ವರದಿ ಬರುವ ಮುನ್ನವೇ ಮನೆಗೆ ಕಳುಹಿಸಲಾಗಿತ್ತು. ಸದ್ಯ ಇವರ ಫಲಿತಾಂಶ ಹೊರ ಬಿದ್ದಿದ್ದು, ಇದರಲ್ಲಿ ತಂದೆ ಮತ್ತು ಮಗಳಿಗೆ ಕೊರೊನಾ ಪಾಸಿಟಿವ್ ಧೃಡಪಟ್ಟಿದೆ.
– ಮಾಲ್ಗುಡಿ ಎಕ್ಸ್ ಪ್ರೆಸ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.