ಗಲಭೆ ಸಂತ್ರಸ್ತರಿಗೆ ನ್ಯಾಯ ದೊರಕುವಲ್ಲಿ ತಡೆಯಾಗುತ್ತಿರುವ ದಿಲ್ಲಿ ಪೊಲೀಸರು: ಪಾಪ್ಯುಲರ್ ಫ್ರಂಟ್

ಬೆಂಗಳೂರು(ವಿಶ್ವಕನ್ನಡಿಗ ನ್ಯೂಸ್): ನಿಸ್ಪಕ್ಷಪಾತತೆಯ ಕುರಿತು ದಿಲ್ಲಿ ಪೊಲೀಸರ ಉದ್ದುದ್ದ ಪ್ರತಿಪಾದನೆಗಳನ್ನು ಪ್ರಶ್ನಿಸಿರುವ ಪಾಪ್ಯುಲರ್ ಫ್ರಂಟ್ ಚೆಯರ್ ಮೆನ್ ಒ.ಎಂ.ಎ.ಸಲಾಮ್, ಪೊಲೀಸರ‌ ಕೆಲವು ಕ್ರಮಗಳನ್ನು ದಿಲ್ಲಿ ಹೈಕೋರ್ಟ್ ಕುಚೋದ್ಯ ವೆಂದು ಕರೆದಿರುವುದು ಗಂಭೀರ ಪರಿಸ್ಥಿತಿಯನ್ನು ಬೆಟ್ಟುಮಾಡುತ್ತದೆ. ಗಲಭೆಗೆ ಸಂಬಂಧಿಸಿದ ಬಂಧನದ ವೇಳೆ ಸಂಪೂರ್ಣ ಎಚ್ಚರ ವಹಿಸಬೇಕು ಮತ್ತು ಇದು ‘ಹಿಂದುಗಳ ಆಕ್ರೋಶ’ಕ್ಕೆ ಕಾರಣವಾಗಬಾರದು ಎಂದು ದಿಲ್ಲಿ ಪೊಲೀಸ್ ನ ವಿಶೇಷ ಆಯುಕ್ತರೋರ್ವರು ತನ್ನ ಅಧೀನದಲ್ಲಿರುವ ಪೊಲೀಸರಿಗೆ ನೀಡಿದ್ದ ವಿವಾದಾಸ್ಪದ ಆದೇಶವನ್ನು ದಿಲ್ಲಿ ಹೈಕೋರ್ಟ್ ಪ್ರಶ್ನಿಸಿದೆ. ಕೋರ್ಟ್ ಈ ಆದೇಶವನ್ನು ‘ಕುಚೋದ್ಯ’ ಎಂದು ಕರೆದಿದೆ.

ಗಲಭೆಗೆ ಸಂಬಂಧಿಸಿದ ಪ್ರಕರಣಗಳ ತನಿಖೆ ಮತ್ತು ಕಾರ್ಯಾಚರಣೆಯಲ್ಲಿ ದಿಲ್ಲಿ ಪೊಲೀಸರ ತಾರತಮ್ಯ ಮತ್ತು ಪಕ್ಷಪಾತದ ಧೋರಣೆಯು ಗಲಭೆ ಸಂತ್ರಸ್ತರಿಗೆ ನ್ಯಾಯ ದೊರಕುವಲ್ಲಿ ದೊಡ್ಡ ತಡೆಯಾಗಿದೆ ಎಂಬುದು ಸಾಬೀತಾಗುತ್ತಿದೆ. ದಿಲ್ಲಿ ಪೊಲೀಸರು ಮುಸ್ಲಿಮ್ ಸಮುದಾಯದ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂಬ ಬಗ್ಗೆ ಸಾಕ್ಷ್ಯಾಧಾರಗಳು ಒಂದರ ಹಿಂದೆ ಒಂದರಂತೆ ಹೊರ ಬರುತ್ತಿವೆ. ಗಲಭೆ ತಡೆಯುವುದರಲ್ಲಿ ದಿಲ್ಲಿ ಪೊಲೀಸರ ವೈಫಲ್ಯದ ಕುರಿತು ಬಹಳಷ್ಟು ಟೀಕೆಗಳು ಬಂದಿದ್ದವು ಎಂಬುದನ್ನು ನೆನಪಿನಲ್ಲಿಡಬೇಕಾಗಿದೆ. ದಿಲ್ಲಿ ಅಲ್ಪಸಂಖ್ಯಾತರ ಆಯೋಗದ ಸಹಿತ ಸತ್ಯಶೋಧನಾ ತಂಡಗಳ ವರದಿಗಳಲ್ಲಿ, ಹಿಂಸಾಚಾರವು ಕಣ್ಣ ಮುಂದೆಯೇ ನಡೆಯುತ್ತಿದ್ದರೂ ಪೊಲೀಸರ‌ ಕ್ರಮಗಳು, ಸಂತ್ರಸ್ತರಿಗೆ ನೆರವು ಮತ್ತು ಗಲಭೆಯನ್ನು ತಡೆಯುವುದರಿಂದ ಪೊಲೀಸರು ಸ್ವತಃ ತಮ್ಮನ್ನು ಯಾವ ರೀತಿಯಲ್ಲಿ ತಟಸ್ಥವಾಗಿಟ್ಟಿದ್ದರು ಎಂಬ ವಿಚಾರ ತಿಳಿದು ಬರುತ್ತದೆ. ಹಲವು ಪ್ರತ್ಯಕ್ಷದರ್ಶಿಗಳ ಪ್ರಕಾರ, ಪೊಲೀಸರು ಹಿಂದು ಗುಂಪನ್ನು ಮುಸ್ಲಿಮರ ಮೇಲೆ ದಾಳಿ ನಡೆಸಲು ಉತ್ತೇಜಿಸಿದರು ಮತ್ತು ಕೆಲವೊಮ್ಮೆ ಅವರೂ ಹಿಂಸಾಚಾರ ಮತ್ತು ಹಾನಿಯಲ್ಲಿ ಸಂಪೂರ್ಣವಾಗಿ ಭಾಗಿಯಾಗಿದ್ದರು.

ಪಾಪ್ಯುಲರ್ ಫ್ರಂಟ್ ರಾಷ್ಟ್ರೀಯ ಕಾರ್ಯಾಕಾರಿ ಸಮಿತಿ ಸದಸ್ಯ ಅಡ್ವೊಕೇಟ್ ಎ.ಮುಹಮ್ಮದ್ ಯೂಸುಫ್ ಅವರು ಸಲ್ಲಿಸಿದ್ದ ಆರ್.ಟಿ.ಐಗೆ ದಿಲ್ಲಿ ಪೊಲೀಸರ ಉತ್ತರವು ಮತ್ತೊಂದು ಉದಾಹರಣೆಯಾಗಿದೆ. ಇದು ನ್ಯಾಯದ ಕುರಿತು ದಿಲ್ಲಿ ಪೊಲೀಸರ ಬದ್ಧತೆಯ ಮೇಲೆ ಸಂಶಯವನ್ನು ದಟ್ಟವಾಗಿಸುತ್ತಿದೆ. ದಿಲ್ಲಿ ಪೊಲೀಸರು ಎಫ್.ಐ.ಆರ್ ಮತ್ತು ಬಂಧನ ಅರ್ಜಿಗಳು, ಎಫ್.ಐ.ಆರ್ ನಲ್ಲಿ ಆರೋಪಿಗಳ ಗುರುತುಗಳು, ಅವರ ಜಾಮೀನು ವಿವರಣೆಗಳು, ದಾಖಲಾದ ಚಾರ್ಜ್ ಶೀಟ್ ಗಳ ಸಂಖ್ಯೆ ಮತ್ತು ವಿವರಣೆ ಮೊದಲಾದ ಹಲವು ಮಹತ್ವದ ಮಾಹಿತಿಗಳನ್ನು ಬಚ್ಚಿಟ್ಟಿದ್ದಾರೆ. 34 ಪ್ರಶ್ನೆಗಳನ್ನು ಒಳಗೊಂಡಿದ್ದ ಆರ್.ಟಿ.ಐ ಅರ್ಜಿಗೆ ದಿಲ್ಲಿ ಪೊಲೀಸರು ಕೇವಲ 6 ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಇದು ಕೇವಲ ದಾಖಲಾದ ಪ್ರಕರಣಗಳ ಸಂಖ್ಯೆ ಮತ್ತು ಬಂಧನದ‌ ಸಂಖ್ಯೆಗೆ ಸಂಬಂಧಿಸಿದ್ದಾಗಿವೆ. ಜುಲೈ 22ರ‌ ವರೆಗೆ ಪೊಲೀಸರು 1142 ಮಂದಿಯನ್ನು ಬಂಧಿಸಿದ್ದಾರೆ. ಆದರೆ ಪೊಲೀಸರು ಅದರಲ್ಲಿ ಎಷ್ಟು ಮುಸ್ಲಿಮರು ಮತ್ತು ಹಿಂದುಗಳಿದ್ದಾರೆ, ಅವರು ಯಾವ ಗುಂಪುಗಳೊಂದಿಗೆ ಸಂಬಂಧ ಹೊಂದಿದ್ದಾರೆ ಮತ್ತು ಅವರ ಮೇಲೆ ಯಾವೆಲ್ಲಾ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂಬುದನ್ನು ತಿಳಿಸಿಲ್ಲ. ಇಂತಹ ಮಾಹಿತಿಗಳಿಂದ ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾಗುವ ಸಾಧ್ಯತೆ ಇರುವುದರಿಂದ ಆರೋಪಿಗಳ ಗುರುತು ಮತ್ತು ಪ್ರಕರಣಗಳ ಸ್ಥಿತಿಗೆ ಸಂಬಂಧಿಸಿ ಮಾಹಿತಿಗಳನ್ನು ಮುಚ್ಚಿಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ನೆಪ ಸ್ವೀಕಾರಾರ್ಹವಲ್ಲ ಮತ್ತು ಇಂತಹ ಪ್ರಕರಣಗಳಲ್ಲಿನ ಎಫ್.ಐ.ಆರ್ ನಲ್ಲಿ ದಾಖಲಾಗಿರುವ ಮಾಹಿತಿಯನ್ನು ಮುಚ್ಚಿಡುವುದು ಸುಪ್ರೀಂ ಕೋರ್ಟ್ ನ ಮಾರ್ಗದರ್ಶನಗಳಿಗೆ ವಿರುದ್ಧವಾಗಿದೆ. ಕಾನೂನಿನ ಆಡಳಿತವಿರುವ ಒಂದು ಪ್ರಜಾಪ್ರಭುತ್ವ ದೇಶದಲ್ಲಿ ನ್ಯಾಯ ದೊರಕಿದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿಯುವ ಹಕ್ಕು ಜನರಿಗಿದೆ.

ಸಂಪೂರ್ಣ ಮಾಹಿತಿ ಬಹಿರಂಗಪಡಿಸದೇ ನಿಷ್ಪಕ್ಷಪಾತದ ನಕಲಿ ಪ್ರಭಾವವನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆಸಲಾಗುತ್ತಿದೆ. ಮಾತ್ರವಲ್ಲದೇ, ದಿಲ್ಲಿ ಗಲಭೆಯೊಂದಿಗೆ ದೂರ ದೂರದ ವರೆಗೂ ಸಂಬಂಧವೇ ಇರದ ಮುಸ್ಲಿಮ್ ಕಾರ್ಯಕರ್ತರು, ಸಂಘಟನೆಗಳು ಮತ್ತು ಸಾಮಾನ್ಯ ಮುಸ್ಲಿಮರನ್ನೂ ಸಿಲುಕಿಸಲಾಗುತ್ತಿದೆ. ಅದೇ ವೇಳೆ ಸಿಎಎ ವಿರೋಧಿ ಪ್ರತಿಭಟನಕಾರರ ವಿರುದ್ಧ ಹಿಂಸಾಚಾರವನ್ನು ಬಹಿರಂಗವಾಗಿ ಪ್ರಚೋದಿಸುವ ಹಿಂದುತ್ವ ನಾಯಕರು ಕಾನೂನಿನ ಹಿಡಿತದಿಂದ‌ ಇಂದಿಗೂ ದೂರವಿದ್ದಾರೆ. ಜನತೆಗೆ ಕಾನೂನಿನ ಮೇಲಿನ ನಂಬಿಕೆ ದುರ್ಬಲವಾಗುತ್ತಿರುವುದು ಅಪಾಯಕಾರಿಯಾಗಿದೆ ಮತ್ತು ನ್ಯಾಯವನ್ನು ಖಾತರಿಪಡಿಸುವ ಮೂಲಕವೇ ಇದನ್ನು ತಡೆಯಬಹುದಾಗಿದೆ. ದಿಲ್ಲಿ ಗಲಭೆಗೆ ಸಂಬಂಧಿಸಿದ‌ ಎಲ್ಲಾ ಪ್ರಕರಣಗಳನ್ನು ಹೈಕೋರ್ಟ್ ನ ನಿಗಾವಣೆಯಲ್ಲೆ ನ್ಯಾಯಾಂಗ ತನಿಖೆ‌ ನಡೆಸಬೇಕೆಂದು ಒ.ಎಂ.ಎ.ಸಲಾಂ ಒತ್ತಾಯಿಸಿದ್ದಾರೆ.

 

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...