ಎಸ್.ಎಸ್.ಎಲ್.ಸಿ : ವಿಕೆ ನ್ಯೂಸ್ ಅಂಕಣಗಾರ ಅಂತಃಕರಣ 616 ಅಂಕ ಪಡೆದು ಉನ್ನತ ದರ್ಜೆಯಲ್ಲಿ ಉತ್ತೀರ್ಣ

ಶಿವಮೊಗ್ಗ (ವಿಶ್ವ ಕನ್ನಡಿಗ ನ್ಯೂಸ್) : ನಾಲ್ಕನೇ ತರಗತಿಯಿಂದ ನಮ್ಮ ಪತ್ರಿಕೆಯಲ್ಲಿ ಅಂಕಣಕಾರನಾಗಿ ಪ್ರತಿವಾರ “ಮಿಂಚು” ಅಂಕಣ ಬರೆಯುತ್ತಿರುವ ಅಂತಃಕರಣ ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625 ಅಂಕಗಳಿಗೆ 616 ಅಂಕ ಪಡೆದು ಉನ್ನತ ದರ್ಜೆಯಲ್ಲಿ ಉತ್ತೀರ್ಣನಾಗಿದ್ದಾನೆ.

ಕನ್ನಡ ಭಾಷೆ ಯಲ್ಲಿ 125 ಕ್ಕೆ 125 , ಗಣಿತ 100 ಕ್ಕೆ 100, ಇಂಗ್ಲೀಷ್ 99 ವಿಜ್ಞಾನ 99, ಹಿಂದಿ 98 ಮತ್ತು ಸಮಾಜ ವಿಜ್ಞಾನ 95. ಅಂತಃಕರಣ ಇದುವರೆಗೆ 500 ಅಂಕಣಪ್ರಬಂಧ ರಚಿಸಿದ್ದು , ಕತೆ, ಕವಿತೆ, ನಾಟಕ, ಕಾದಂಬರಿ ಸೇರಿದಂತೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ , ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಕಿ 33 ಕೃತಿಗಳನ್ನು ಪ್ರಕಟಿಸಿದ್ದಾನೆ. ಈ ಕೃತಿಗಳಿಗೆ 16 ರಾಜ್ಯ ಪ್ರಶಸ್ತಿಗಳು ಲಭಿಸಿವೆ.

ಶ್ರೀ ಸರ್ಜಾ ಶಂಕರ್ ಹಾಗು ಶ್ರೀಮತಿ ಪ್ರತಿಮಾ ಕೆ. ದಂಪತಿಗಳ ಮಗನಾಗಿರುವ ಅಂತಃಕರಣ ನಗರದ ಲೋಯಲಾ ಪ್ರೌಢಶಾಲಾ ವಿದ್ಯಾರ್ಥಿಯಾಗಿದ್ದಾನೆ.

ಉನ್ನತ ದರ್ಜೆಯಲ್ಲಿ ಉತ್ತೀರ್ಣನಾಗಿರುವ ಅಂತಃಕರಣ ನಿಗೆ ವಿಶ್ವ ಕನ್ನಡಿಗ ನ್ಯೂಸ್ ಸಂಪಾದಕೀಯ ಮಂಡಳಿ ಅಭಿನಂಧನೆ ಸಲ್ಲಿಸುತ್ತದೆ.

 

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...