ಪುತ್ತೂರು(ವಿಶ್ವಕನ್ನಡಿಗ ನ್ಯೂಸ್): ಪ್ರತಿಷ್ಠಿತ ಮೌಂಟನ್ ವ್ಯೂ ಸಮೂಹ ಶಿಕ್ಷಣ ಸಂಸ್ಥೆಯ ಅಧೀನದ ಇದೀಗ ನಾಲ್ಕನೆಯ ವರ್ಷಕ್ಕೆ ಪಾದಾರ್ಪಣೆ ಮಾಡಿರುವ ಅಸ್ವಾಲಿಹಾ ಮಹಿಳಾ ಶರೀಅತ್ & ಪಿ.ಯು.ಕಾಲೇಜ್ ನಲ್ಲಿ 2020-21 ನೇ ಸಾಲಿನ ದಾಖಲಾತಿಗೆ ಚಾಲನೆ ನೀಡಲಾಯಿತು.
ಸಂಸ್ಥೆಯ ಅಧ್ಯಕ್ಷ ಕೆ.ಪಿ.ಅಹ್ಮದ್ ಹಾಜಿ ಆಕರ್ಷನ್ ಅವರು ಹೊಸದಾಗಿ ದಾಖಲಾತಿ ಪಡೆಯುವ ವಿದ್ಯಾರ್ಥಿನಿಯ ಪರವಾಗಿ ಅವರ ಪೋಷಕರಾದ ಇಬ್ರಾಹಿಂ ಮುಸ್ಲಿಯಾರ್ ಸಾಲ್ಮರ ಅವರಿಗೆ ಪ್ರವೇಶ ಪತ್ರಿಕೆಯನ್ನು ನೀಡುವ ಮೂಲಕ ಹೊಸ ದಾಖಲಾತಿಗೆ ಚಾಲನೆ ನೀಡಿದರು.
ಸಮಾರಂಭದಲ್ಲಿ ಕೆ.ಪಿ.ಅಹ್ಮದ್ ಹಾಜಿ ಮಾತನಾಡಿ , ಕಳೆದ 28 ವರ್ಷಗಳಲ್ಲಿ ಸುಶಿಕ್ಷಿತ ಸಮಾಜ ಕಟ್ಟುವ ಒಳಿತಿನ ಉದ್ದೇಶದೊಂದಿಗೆ ಮೌಂಟನ್ ವ್ಯೂ ಸಮೂಹ ಶಿಕ್ಷಣ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡುತ್ತಾ ಬಂದಿದೆ, ಇದೀಗ ನಾಲ್ಕನೆಯ ವರ್ಷಕ್ಕೆ ಪ್ರವೇಶ ಮಾಡಿರುವ ಅಸ್ವಾಲಿಹಾ ಮಹಿಳಾ ಶರೀಅತ್ & ಪಿ.ಯು.ಕಾಲೇಜ್ ಕೂಡ ಉತ್ತಮ ರೀತಿಯಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಶೈಕ್ಷಣಿಕವಾಗಿ ಮಹಿಳೆಯರ ಮುನ್ನಡೆಯು ಕಾಲದ ಬೇಡಿಕೆಯಾಗಿದ್ದು, ವಿದ್ಯಾರ್ಥಿನಿಯರು ಲೌಕಿಕ ಶಿಕ್ಷಣದ ಜೊತೆಗೆ ಹೆಚ್ಚಿನ ಧಾರ್ಮಿಕ ಶಿಕ್ಷಣವನ್ನೂ ಪಡೆದಾಗ ಧರ್ಮದ ಚೌಕಟ್ಟಿನಡಿ ಮಾದರಿ ಕುಟುಂಬ ಕಟ್ಟಲು ಅವರಿಂದ ಸಾಧ್ಯವಾಗುವುದು ಎಂದರು.
ಸಮಾರಂಭದಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಾಜಿ ಪಡೀಲ್, ಸಂಚಾಲಕ ಮುಹಮ್ಮದ್ ಸಾಬ್ ಹಾಜಿ ,ಕಾರ್ಯದರ್ಶಿ ಹಾಜಿ ಅಬ್ದುರ್ರಹ್ಮಾನ್ ಅಝಾದ್ , ಮೊದಲಾದವರು ಮಾತನಾಡಿ, ಅಸ್ವಾಲಿಹಾ ಕಾಲೇಜ್ ನಲ್ಲಿ ಇಸ್ಲಾಮೀ ಶರೀಅತ್ ಅಧ್ಯಯನ ದೊಂದಿಗೆ ಆಧ್ಯಾತ್ಮಿಕ ಮಜ್ಲಿಸ್, ಶರೀಅತ್ ಪ್ರಾಕ್ಟಿಕಲ್ ಟ್ರೈನಿಂಗ್, ಬರಹ,ಭಾಷಣ ಕಲೆಗಳ ವಿಶೇಷ ತರಬೇತಿ, ಇಸ್ಲಾಮೀ ಚೌಕಟ್ಟಿನಡಿ ಪ್ರತಿಭಾ ಪೋಷಣೆ ,ಕುಟುಂಬ ನಿರ್ವಾಹಣೆ ತರಬೇತಿ, ಕಂಪ್ಯೂಟರ್ ಶಿಕ್ಷಣ , ವ್ಯಕ್ತಿತ್ವ ವಿಕಸನ ಕ್ಲಾಸ್, ಟೈಲರಿಂಗ್ ಕ್ಲಾಸ್, ಸ್ಮಾರ್ಟ್ ಕ್ಲಾಸ್, ಹೀಗೆ ಮೌಲ್ಯಾಧಾರಿತ ,ಗುಣ ಮಟ್ಟದ ಶಿಸ್ತು ಬದ್ಧ ಉನ್ನತ ಧಾರ್ಮಿಕ- ಲೌಕಿಕ ಶಿಕ್ಷಣವನ್ನು ನೀಡಲಾಗುತ್ತಿದ್ದು, ಶಬ್ದ ಮಾಲಿನ್ಯ ಮುಕ್ತವಾದ ಕಲಿಕಾ ವಾತವರಣದಲ್ಲಿ ಶಾಂತ,ಸುಂದರ ಹಾಗೂ ಸುಭದ್ರ ಪರಿಸರದಲ್ಲಿ ಕಾಲೇಜ್ ಕಾರ್ಯನಿರ್ವಹಿಸುತ್ತಿದೆ,ಸಂಸ್ಥೆಯಲ್ಲಿ ಗುಣಮಟ್ಟದ ಶಿಕ್ಷಣ, ಶಿಸ್ತು ಹಾಗೂ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಲ್ಲಾ ಕಡೆಗೂ ಕಾಲೇಜ್ ಬಸ್ಸಿನ ವ್ಯವಸ್ಥೆ ಇದೆ ಎಂದು ಹೇಳಿದರು.
ಕೆ.ಎಂ.ಎ. ಕೊಡುಂಗಾಯಿ ಫಾಝಿಲ್ ಹನೀಫಿ ಸ್ವಾಗತಿಸಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.