ಪೆರಿಗೇರಿ(ವಿಶ್ವಕನ್ನಡಿಗ ನ್ಯೂಸ್): ಶಂಸುಲ್ ಉಲಮಾ ಚಾರಿಟಬಲ್ ಟ್ರಸ್ಟ್ ಪೆರಿಗೇರಿ ಇದರ ವತಿಯಿಂದ ಆಗಸ್ಟ್ 28 ರಂದು ಕೇಂದ್ರ ಸರಕಾರದ ಯೋಜನೆಯಾಗಿರುವ ಆಯುಷ್ಮಾನ್ ಕಾರ್ಡ್ ಉಚಿತ ನೋಂದಣಿ ಮತ್ತು ವಿತರಣಾ ಕಾರ್ಯಕ್ರಮವು ಪೆರಿಗೇರಿಯ ಹೊಸನಗರ ಮಸೀದಿಯ ವಠಾರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಸಾದಿಕ್ ಮೌಲವಿ ಕಟ್ಟತ್ತಾರ್ ಉದ್ಘಾಟನೆ ನೆರವೇರಿಸಿ ದುಆಶೀರ್ವಚನ ನಡೆಸಿದರು. ಆ ಬಳಿಕ ಊರಿನ ಸುಮಾರು 60 ಕ್ಕೂ ಹೆಚ್ಚು ಮಂದಿಗೆ ಆಯುಷ್ಮಾನ್ ಕಾರ್ಡ್ ಸೌಲಭ್ಯ ಒದಗಿಸುವ ಮೂಲಕ ಊರ ಜನತೆ ಇದರ ಸದುಪಯೋಗವನ್ನು ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಶಂಸುಲ್ ಉಲಮಾ ಚಾರಿಟಬಲ್ ಟ್ರಸ್ಟ್ ಇದರ ಕಾರ್ಯಕರ್ತರಾದ ಸಂಶುದ್ದೀನ್ ಪೆರಿಗೇರಿ, ಮುಸ್ತಫಾ ಪೆರಿಗೇರಿ, ಸಮದ್ ಹೊಸನಗರ, ಆಶಿಕ್ ಪೆರಿಗೇರಿ, ಇಸುಬು ಹೊಸನಗರ, ಉಮ್ಮರ್ ಕೆಕೆ, ಹೈದರ್ ರೆಂಜ ಮತ್ತಿತ್ತರು ಸಹಕರಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.