SSF ಎಲಿಮಲೆ ಶಾಖಾ ವಾರ್ಷಿಕ ಮಹಾಸಭೆ ಹಾಗೂ ಸನ್ಮಾನ ಕಾರ್ಯಕ್ರಮ

ಎಲಿಮಲೆ(ವಿಶ್ವಕನ್ನಡಿಗ ನ್ಯೂಸ್): ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್(ರಿ) ಎಲಿಮಲೆ ಇದರ ವಾರ್ಷಿಕ ಮಹಾಸಭೆ ಹಾಗೂ ಕೆಸಿಎಫ್ ನಾಯಕರುಗಳಿಗೆ ಸನ್ಮಾನ ಕಾರ್ಯಕ್ರಮವು ಸುನ್ನೀ ಸೆಂಟರ್ ಎಲಿಮಲೆಯಲ್ಲಿ ನಡೆಯಿತು.

ಶಾಖಾಧ್ಯಕ್ಷರಾದ ಝಕರಿಯಾ ಸಅದಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಸಾಬಿತ್ ಪಾಣಾಜೆಯವರು ಉಧ್ಘಾಟಿಸಿದರು. ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಪಿ.ಎ ಯವರು ವರದಿ ವಾಚಿಸಿದರು. SSF ಸುಳ್ಯ ಸೆಕ್ಟರ್ ಅಧ್ಯಕ್ಷರಾದ ಸ್ವಬಾಹ್ ಹಿಮಮಿ-ಸಖಾಫಿ ಉಸ್ತಾದರು ಸಂಘಟನಾ ತರಗತಿಯನ್ನು ನಡೆಸಿದರು.

ನಂತರ KCF ನಾಯಕರುಗಳಾದ ಇಲ್ಯಾಸ್ ಅತ್ತಿಮಾರಡ್ಕ, ಭಾತಿಷ ಕಲ್ಲುಪ್ಪಣೆ, ಕೆಎಸ್ಎಮ್ ಎಲಿಮಲೆ, ಸ್ವಾದಿಕ್ ಮೆತ್ತಡ್ಕ, ಮುಸ್ತಫ ಮೆತ್ತಡ್ಕ, ಆಸಿಫ್ ಕೆಎ ಇವರುಗಳನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.

ಅತಿಥಿಗಳಾಗಿ ಶಾಖಾ ಉಸ್ತುವಾರಿ ಬಶೀರ್ ಕಲ್ಲುಮುಟ್ಳು, ಹಾರಿಸ್ ಗೂನಡ್ಕ, ನೌಶಾದ್ ಕೆರಮೂಲೆ ಹಾಗೂ SYS ನಾಯಕರುಗಳು ಉಪಸ್ಥಿತರಿದ್ದರು.

ನಂತರ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಅಬ್ದುಲ್ ನಾಸಿರ್ ವೈಎಚ್, ಕಾರ್ಯದರ್ಶಿಯಾಗಿ ಸಾಬಿತ್ ಪಾಣಾಜೆ, ಕೋಶಾಧಿಕಾರಿಯಾಗಿ ಅಶ್ರಫ್ ಕಲ್ಲುಪ್ಪಣೆ, ಉಪಾಧ್ಯಕ್ಷರುಗಳಾಗಿ ಸಿನಾನ್ ವೈಎಂ, ಆಸಿಫ್ ಕೆ ಎ, ಕಾರ್ಯದರ್ಶಿಗಳಾಗಿ ಫಾರಿಸ್ ಪಾಣಾಜೆ, ಸಿನಾನ್ ಬಿಹೆಚ್, ಕೆಎಸ್ಎಮ್ ಎಲಿಮಲೆ, ಸಲಾಹುದ್ದೀನ್, ಸಮೀರ್ ಜಿ, ಮುನ್ಝಿರ್, ಹಾಗೂ ಸದಸ್ಯರುಗಳಾಗಿ ಝಕರಿಯ ಸಅದಿ, ನಿಯಾಝ್ ವೈಹೆಚ್, ಸಿದ್ದೀಕ್ ಕಲ್ಲುಪ್ಪಣೆ, ಸಿದ್ದೀಕ್ ಪಿಎ, ಮಿರ್ಷಾದ್ ವೈಹೆಚ್, ಜುನೈದ್ ಸಖಾಫಿ, ಉಮರ್ ಮುಸ್ಲಿಯಾರ್, ರವೂಫ್ ಕಲ್ಲುಪ್ಪಣೆ, ಸರ್ಫುದ್ದೀನ್, ಉಮರುಲ್ ಫಾರೂಕ್ ಇವರುಗಳನ್ನು ಆಯ್ಕೆ ಮಾಡಲಾಯಿತು.

ಸಿದ್ದೀಕ್ ಪಿಎ ಸ್ವಾಗತಿಸಿ ಸಾಬಿತ್ ಪಾಣಾಜೆ ವಂಧಿಸಿದರು.

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...