ಕೆಜಿಎಫ್ (www vknews.com) :– ಕೊರೋನಾ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೋಲಾರ ಜಿಲ್ಲೆಯಾದ್ಯಂತ ಮೇ 21 ರಿಂದ 31 ರ ವರೆಗೆ ಜಿಲ್ಲಾ ಉಸ್ತುವಾರಿ ಸಚಿವರು , ಜಿಲ್ಲಾಧಿಕಾರಿಗಳು ವಿಧಿಸಿರುವ ಸಂಪೂರ್ಣ ಲಾಕ್ಡೌನ್ಗೆ ಕೆಜಿಎಫ್ ಪೊಲೀಸ್ ಜಿಲ್ಲೆಯಲ್ಲಿ ಸೂಕ್ತ ಬಂದೋಬಸ್ತು ಕ್ರಮಗಳನ್ನು ಕೈಗೊಂಡಿದ್ದು ಸಾರ್ವಜನಿಕರ ಅನಗತ್ಯ ಓಡಾಟವನ್ನು ಸಂಪೂರ್ಣ ನಿಷೇಧಿಸಿದ್ದು ತಪ್ಪಿದ್ದಲ್ಲಿ ಕಠಿಣ ಕ್ರಮ ಜರುಗಿಸಲಾಗುವುದೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಲಕ್ಕಿಯಾ ಕರುಣಾಕರನ್ ಅವರು ತಿಳಿಸಿದ್ದಾರೆ.
ಮುಂದುವರೆದಂತೆ ಮೇ 27 ರ ಬೆಳಿಗ್ಗೆ 10 ರಿಂದ ಮೇ 31 ರ ಬೆಳಿಗ್ಗೆ 6 ಗಂಟೆಯ ತನಕ ಸಂಪೂರ್ಣ ಲಾಕ್ಡೌನ್ ಘೋಷಿಸಿದ್ದು ಕೆಜಿಎಫ್ ಪೊಲೀಸ್ ಜಿಲ್ಲೆಯು ತಮಿಳುನಾಡು ಆಂಧ್ರಪ್ರದೇಶ ರಾಜ್ಯಗಳ ಗಡಿ ಭಾಗದಲ್ಲಿದ್ದು ಅಂತರರಾಜ್ಯ ವಾಹನಗಳು ಯಾವುದೊ ಒಳಬರದಂತೆ ಹೊರಹೋಗದಂತೆ ತಪಾಸಣೆ ನಡೆಸಲು ಹೆಚ್ಚಿನ ಅಧಿಕಾರಿ ಸಿಬ್ಬಂದಿಗಳನ್ನು ನೇಮಿಸಿ ಚೆಕ್ ಪೋಸ್ಟ್ಗಳ ಸ್ಥಾಪಿಸಿದ್ದು ರ್ಕಣ್ಣಾವಲಿಗಾಗಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು ಕೆಜಿಎಫ್ ಸರಹದ್ದಿನ ರಾಜ್ಪೇಟ್ರೋಡ್ , ವೆಂಕಟಾಪುರ , ಕೆಂಪಾಪುರ , ಜಕ್ಕರ ಸಕುಪ್ಪ , ತೊಪ್ಪನಹಳ್ಳಿ , ದೊಡ್ಡಪೋನ್ಸಾಂಡಹಳ್ಳಿ , ಮರಾಠಹೊಸಹಳ್ಳಿ ಸೇರಿದಂತೆ ಇತರೆ ಕಡೆಗಳಲ್ಲಿ ಚೆಕ್ಪೋಸ್ಟ್ ನಿರ್ಮಿಸಿದ್ದು , 24 ಗಂಟೆಗಳ ಕಾಲ ನಿರಂತರವಾಗಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಪರಿಣಾಮಕಾರಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಡಿವೈಎಸ್ಪಿ ಬಿ.ಕೆ.ಉಮೇಶ್ ಅವರ ನೇತೃತ್ವದಲ್ಲಿ ಹಲವಾರು ತಂಡಗಳನ್ನು ರಚಿಸಲಾಗಿದ್ದು , ಕೆಜಿಎಫ್ ಪೊಲೀಸ್ ಜಿಲ್ಲೆಯ ಗಡಿಭಾಗಗಳಾದ ತಮಿಳುನಾಡು , ಆಂಧ್ರಪ್ರದೇಶ ರಾಜ್ಯಗಳ ಗಡಿಗಳಲ್ಲಿ ನಿರ್ಮಿಸಿರುವ ಚೆಕ್ಪೋಸ್ಟ್ಗಳನ್ನು ನಿರಂತರವಾಗಿ ಇವರ ಜೊತೆಗೆ ಹೆಚ್ಚುವರಿಯಾಗಿ ಸ್ಥಳೀಯ ನಿರೀಕ್ಷಕರು , ಆಪಿವ ಕೆಜಿಎಫ್ ಮತ್ತು ನಿಸ್ತಂತು ವಿಭಾಗದ ನಿರೀಕ್ಷಕರು ರವರು ಗಡಿಯಲ್ಲಿ ಪರಿಶೀಲನೆ ನಡೆಸುತ್ತಿರುತ್ತಾರೆ.
ಮೇ 27 ರ ಬೆಳಿಗ್ಗೆ 10 ರಿಂದ ಮೇ 31 ರ ಬೆಳಿಗ್ಗೆ 6 ಗಂಟೆಯ ತನಕ ಛಾಕ್ಡೌನ್ ನಿಮಿತ್ಯ ಅನಾವಶ್ಯಕ ಎನಸಾಮಾನ್ಯ . ಇಾಗೂ ಪ್ಲಾಹನಗಳ ಓಡಾಟಕ್ಕೆ ಸಂಮೋರ್ಣ ಕಡಿವಾಣ ಹಾಕಲಾಗಿದ್ದು , ವಿಪಾಸ್ತಾರ ವಾಹನಗಳಲ್ಲಿ ಓಡಾಡುವವರ ವಿರುದ್ಧ ಗಡಿಭಾಗಗಳಾದ ತಮಿಳುನಾಡು , ಆಂಧ್ರಪ್ರದೇಶ ರಾಜ್ಯಗಳ ಗಡಿಗಳಲ್ಲಿ ನಿರ್ಮಿಸಿರುವ ಚೆಕ್ಪೋಸ್ಟ್ಗಳನ್ನು ನಿರಂತರವಾಗಿ ಇವರ ಜೊತೆಗೆ ಹೆಚ್ಚುವರಿಯಾಗಿ ಸ್ಥಳೀಯ ನಿರೀಕ್ಷಕರು , ಆರ್ಪಿಐ ಕೆ.ಜಿ.ಎಫ್ ಮತ್ತು ನಿಸ್ತಂತು ವಿಭಾಗದ ನಿರೀಕ್ಷಕರು ರವರು ಗಡಿಯಲ್ಲಿ ಪರಿಶೀಲನೆ ನಡೆಸುತ್ತಿರುತ್ತಾರೆ .
ಮೇ 21 ರ ಬೆಳಿಗ್ಗೆ 10 ರಿಂದ ಮೇ 31 ರ ಬೆಳಿಗ್ಗೆ 6 ಗಂಟೆಯ ತನಕ ಲಾಕ್ಡೌನ್ ನಿಮಿತ್ತ ಅನಾವಶ್ಯಕ ಜನ ಸಾಮಾನ್ಯರ ಹಾಗೂ ವಾಹನಗಳ ಓಡಾಟಕ್ಕೆ ಸಂಪೂರ್ಣ ಕಡಿವಾಣ ಹಾಕಲಾಗಿದ್ದು , ವಿನಾಕಾರಣ ವಾಹನಗಳಲ್ಲಿ ಓಡಾಡುವವರ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುತ್ತಿದೆ. ಸರ್ಕಾರದ ಮಾರ್ಗಸೂಚಿಗಳನ್ನಯ ಔಷಧಿ , ಹಾಲು , ತಳ್ಳುವ ಗಾಡಿಯಲ್ಲಿ ತರಕಾರಿ ಮಾರಾಟಕ್ಕೆ ನಿಗಧಿತ ವೇಳೆಯಲ್ಲಿ ಮಾತ್ರ ಅವಕಾಶವಿರುತ್ತದೆ. ಕೋವಿಕ್ಸ್ ಮತ್ತು ಕೋಮಿಶೀಲ್ ಲಸಿಕೆ ಹಾಕಿಸಿಕೊಳ್ಳಲು ಆರೋಗ್ಯ ಕೇಂದ್ರಗಳಿಗೆ ಬರುವಂತಹ ಸಾರ್ವಜನಿಕರಿಗೆ ಮಾತ್ರ ವಿನಾಯಿತಿ ನೀಡಿದ್ದು , ಅಗತ್ಯ ದಾಖಲೆ ತೋರಿಸಿ ಲಸಿಕೆ ಹಾಕಿಸಿಕೊಂಡು ಹೋಗಬಹುದೆಂದು ಎಸ್ಪಿ ಇಲಕ್ಕಿಯಾ ಕರುಣಾಕರನ್ಸ್ ತಿಳಿಸಿದರು . ಸಾರ್ವಜನಿಕರು ಸರ್ಕಾರದ ಆದೇಶಕ್ಕೆ ಬದ್ದರಾಗಿ ಕಡ್ಡಾಯವಾಗಿ ಮನೆಯಲ್ಲಿಯೇ ಇದ್ದು ಸುರಕ್ಷಿತರಾಗಿರಲು ಜಿಲ್ಲಾ ಎಸ್ಪಿ ಇಲಕ್ಕಿಯು ಕರುಣಾಕರನ್ ಅವರು ಕರೆ ನೀಡಿದ್ದಾರೆ .
ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.