ಕೋಲಾರ (www.vknew.com):- ನಾವು ಸ್ಥಳೀಯ ಸಮುದಾಯದ ಭಾಗವಾಗಿ ಅವರ ಆರೋಗ್ಯ , ಅಭಿವೃದ್ಧಿಗಾಗಿ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಕೊಳ್ಳುವುದಾಗಿ ನರಸಾಪುರ ಕೈಗಾರಿಕಾ ಪ್ರದೇಶದ ವಿಸ್ಪಾನ್ ಕಂಪನಿ ವ್ಯವಸ್ಥಾಪಕ ಎಂ.ನಾಗರಾಜ್ ತಿಳಿಸಿದರು.
ಸಾಮಾಜಿಕ ಕಳಕಳಿಯು ಕಾರ್ಯಕ್ರಮದ ಭಾಗದಲ್ಲಿ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿನ ಕಂಪನಿಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೊಲೀಸರಿಗೆ 1000 ಫೇಸ್ ಶೀಲ್ಡ್ ಮತ್ತು 10,000 ಮಾಸ್ಕಗಳನ್ನು ಎಸ್ಪಿ ರೆಡ್ಡಿ ಅವರಿಗೆ ಹಸ್ತಂತರಿಸಿ ಆವರು ಮಾತನಾಡುತ್ತಿದ್ದರು. ವಿಸ್ಕಾನ್ ವಿಕೆರ್ ಸಾಮಾಜಿಕ ಕಳಕಳಿ ಕಾರ್ಯಕ್ರಮ ಪ್ರಾರಂಭಿ ಸುವುದಾಗಿ ಘೋಷಿಸಿದ ಎಂಡಿ ನಾಗರಾಜ್ , ಈ ಮಹತ್ತರ ಕಾರ್ಯಕ್ರಮದ ಮೊದಲ ಹಂತದ ಭಾಗವಾಗಿ ಕೋಲಾರ ಜಿಲ್ಲಾ ಮೊಲೀಸರಿಗೆ ವಿಶೇಷವಾಗಿ ಸಿದ್ಧಪಡಿಸಿದ ಫೇಸ್ಶೀಲ್ಸ್ ಮತ್ತು ಮಾಸ್ಕಗಳನ್ನು ಒದಗಿಸುತ್ತಿರುವುದಾಗಿ ತಿಳಿಸಿದರು.
ವಿಸ್ಕಾನ್ ವಿಕೇರ್ ಸಿಎಸ್ಆರ್ ಕಾರ್ಯಕ್ರಮದಡಿ ನೌಕರರ ಕುಟುಂಬಗಳಿಗೆ ಸಾವಿರಾರು ಸಂಖ್ಯೆಯಲ್ಲಿ ಆರೋಗ್ಯ ಕಿಟ್ಗಳು , ನೂರಾರು ಆಹಾರ ಪಡಿತರ ಕಿಟ್ಗಳು ಮತ್ತು ಬಡವರಿಗೆ ಆರೋಗ್ಯ ಕಿಟ್ಗಳು ಮತ್ತು ಕೈಗಾರಿಕಾ ಪ್ರದೇಶದ ಮತ್ತು ಸುತ್ತಮುತ್ತಲಿನ ಭಾಗಗಳಲ್ಲಿ ವಾಸವಾಗಿರುವವರನ್ನು ಒಳಗೊಂಡು ಸಾಮಾಜಿಕ ಕಳಕಳಿ ತೋರಿಸುವ ಕಾರ್ಯನಿರ್ವಹಿಸುತ್ತಿದೆ ಎಂದರು. ಆಸ್ಪತ್ರೆಯಲ್ಲಿ ಆಮ್ಲಜನಕ ಉತ್ಪಾದಕ ಘಟಕ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆಮ್ಲಜನಕ ಸಾಂದ್ರಕಗಳ ವಿತರಣೆಕೂಡ ಮಾಡಲಾಗುತ್ತಿದೆ.
ವಿಕೇರ್ ಕಾರ್ಯಕ್ರಮದ ಮೂಲಕ ಮುಂದೆ ಇತರ ಸಾಮಾಜಿಕ ಮೆರೆಯುವ ಉಪಕ್ರಮಗಳನ್ನು ಸಹ ಯೋಜಿಸಲು ತೀರ್ಮಾನಿ ಸಲಾಗಿದೆ ಎಂದು ತಿಳಿಸಿದರು. ವಿಸ್ಟಾನ್ನಲ್ಲಿ ಕಾರ್ಯನಿರ್ವ ಹಿಸುತ್ತಿರುವ ನಾವೆಲ್ಲರೂ ನಮ್ಮ ಎಲ್ಲಿ ಮುಂಚೂಣಿ ಕೆಲಸಗಾರರಿಗೆ ವಿಶೇಷವಾಗಿ ಪೊಲೀಸರಿಗೆ ನಮ್ಮ ಪ್ರಾಮಾಣಿಕವಾದ ವಂದನೆಗಳನ್ನು ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿ ಸಲು ಬಯಸುತ್ತೇವೆ . ಆರೋಗ್ಯ ಕಾರ್ಯಕರ್ತರಾಗಿ ಕಾರ್ಯನಿರ್ವಹಿಸುವವರನ್ನೂ ನೆನೆಯುತ್ತೇವೆ ಎಂದರು.
ಕಂಪನಿ ಪ್ರಧಾನ ವ್ಯವಸ್ಥಾಪಕ ಸೆಂಥಿಲ್ ಕುಮಾರ್ ಮಾತನಾಡಿ , ಭಾರತೀಯ ಸಮುದಾಯಕ್ಕೆ ನಮ್ಮ ಬದ್ಧತೆಯ ಭಾಗವಾಗಿ , ತುರ್ತು ಆರೋಗ್ಯ ಉಪಕರಣಗಳು , ಆರೋಗ್ಯ ಕಿಟ್ಗಳು , ಸುರಕ್ಷತಾ ಸಾಮಗ್ರಿಗಳು ಮತ್ತು ಆಹಾರ ಪಡಿತರ ವಿತರಿಸುವ ಮೂಲಕ ಬೆಂಬಲ ಮತ್ತು ಪರಿಹಾರವನ್ನು ಒದಗಿಸುತ್ತಿದ್ದೇವೆ ಎಂದರು . ಅಗತ್ಯಕ್ಕೆ ಅನುಗುಣವಾಗಿ ಸರ್ಕಾರಿ ಸಂಸ್ಥೆಗಳು , ಮುಂಚೂಣಿ ಕಾರ್ಮಿಕರು , ಬಡವರು ಮತ್ತು ಮಧ್ಯಮ ವರ್ಗದವರು ಮತ್ತು ನಾವು ಕಾರ್ಯನಿರ್ವಹಿಸುವ ಸಮುದಾಯಗಳು ಸೇವಾ ಕಾರ್ಯದ ಪ್ರಮುಖ ಆಯ್ಕೆ ಯಾಗಲಿವೆ .
ಸಮುದಾಯದಲ್ಲಿ ಆರೋಗ್ಯ ಮೂಲಸೌಕರ್ಯ ಮತ್ತು ಸಂಪನ್ಮೂಲ ಲಭ್ಯತೆಯನ್ನು ಸುಧಾರಿಸಲು ಕಂಪನಿಯು ಬದ್ಧವಾಗಿದೆ ಎಂದು ಭರವಸೆ ನೀಡಿದರು .
ಜಿಲ್ಲಾಧಿಕಾರಿಗಳು ಮತ್ತು ಎಸ್ಪಿ ನೇತೃತ್ವದ ಸ್ಥಳೀಯ ಆಡಳಿತವು ಪ್ರಸ್ತುತ ಸಾಂಕ್ರಾಮಿಕ ರೋಗವನ್ನು ನಿಭಾಯಿಸುವ ಮುಂಚೂಣಿ ಕಾರ್ಮಿಕರಾಗಿ ಆದ್ಭುತ ಮತ್ತು ಶ್ಲಾಘನೀಯ ಕೆಲಸವನ್ನು ಮಾಡುತ್ತಿದೆ . ಹೆಚ್ಚಿನ ಅಪಾಯದ ನಡುವೆಯೂ ಅವರು ತಮ್ಮ ಕರ್ತವ್ಯಗಳನ್ನು ನಿಸ್ವಾರ್ಥವಾಗಿ ನಿರ್ವಹಿಸುವ ಮೂಲಕ ಸೇವಾ ಶ್ರೇಷ್ಟತೆ ಮೆರೆಯುತ್ತಿದ್ದಾರೆ . ಅವರಿಗೆ ನಮ್ಮ ಬೆಂಬಲವನ್ನು ವ್ಯಕ್ತಪಡಿಸಲು ಮತ್ತು ಎಲ್ಲಾ ಸಹಾಯವನ್ನು ನೀಡಲು ನಾವು ಬಯಸಿದ್ದು ಈ ಕಾರ್ಯಕ್ರಮದ ಮೂಲಕ ಒಂದು 9900 ಸೇವೆ ಸಲ್ಲಿಸಿದ್ದೇವೆ ಎಂದರು. ವಿಸ್ಸಾನ್ ಕಂಪನಿ ಕೊಡುಗೆಯಾಗಿ ನೀಡಿದ ಫೇಸ್ ಶೀಲ್ಡ್ ಹಾಗೂ ಮಾಸ್ಕ್ ಸ್ವೀಕರಿಸಿದ ಜಿಲ್ಲಾ ರಕ್ಷಣಾಧಿಕಾರಿ ಕಾರ್ತಿಕ್ ರೆಡ್ಡಿ , ಕೊವಿಡ್ವಾರಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ಪೊಲೀಸರ ಸೇವೆಯನ್ನು ಗುರುತಿಸಿ ಫೇಸ್ ಶೀಲ್ , ಮಾಸ್ಕ್ ಒದಗಿಸಿದ ಕಂಪನಿಗೆ ಧನ್ಯವಾದ ಸಲ್ಲಿಸಿದರು . ಆನ್ಲೈನ್ ಮೂಲಕ ಮಾತನಾಡಿದ ಭಾರತದ ಸಿಎಸ್ಆರ್ ಕಾರ್ಯಕ್ರಮವನ್ನು ಘೋಷಣೆ ಮಾಡಿದ ವಿದ್ವಾನ್ ಇಂಡಿಯಾದ ಉಪಾಧ್ಯಕ್ಷ ಹ್ಯಾಂಕ್ ಹೈು ಮಾತನಾಡಿ , ‘ ನೂರಾರು ಮತ್ತು ಸಾವಿರಾರು ಜನರ ಮೇಲೆ ದುಷ್ಪರಿಣಾಮ ಬೀರಿದ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದ ವಿಚಾರದಲ್ಲಿ ಭಾರತ ದೇಶಕ್ಕೆ ನಮ್ಮ ಸಂಪೂರ್ಣ ಸಹಕಾರ ಹಾಗೂ ಒಗ್ಗಟ್ಟು ಇರಲಿದೆ . ವಿಸ್ಟಾನ್ ಇದನ್ನು ದೃಢಪಡಿಸಲು ಬಯಸುತ್ತದೆ ಎಂದರು . ಮುಂದಿನ ಒಂದು ತಿಂಗಳಲ್ಲಿ ( ಕೈಗೊಳ್ಳಲಿರುವ ವಿಸ್ಕಾನ್ ವೀಕೇರ್ ಸಾಮಾಜಿಕ ಕಳಕಳಿ ಕಾರ್ಯಕ್ರಮ ದಡಿಯಲ್ಲಿ ಹೆಚ್ಚಿನ ಉಪಕ್ರಮಗಳು ಬರಲಿವೆ ಎಂದು ತಿಳಿಸಿದರು .
ಈ ಕಾರ್ಯಕ್ರಮ ನಡೆದ ಸಂದರ್ಭ ವಿಸ್ಕಾನ್ ಇಂಡಿಯಾದ ಉಪಾಧ್ಯಕ್ಷ ಹ್ಯಾಂಕ್ ಹೈು , ವಿಸ್ಕಾನ್ ಸ್ಮಾರ್ಟ್ ಸಾಧನಗಳ ಅಧ್ಯಕ್ಷ ಮತ್ತು ಸಿಇಒ ಡೇವಿಡ್ ಬೆನ್ ಅವರು ತೈವಾನ್ ನಿಂದ ಆನ್ಲೈನ್ ಮೂಲಕ ಭಾಗವಹಿಸಿದ್ದರು .
ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.