ಶ್ರೀನಿವಾಸಪುರ(www.vknews.com) :-ಜೀವನವೆಂದ ಮೇಲೆ ಸುಖ , ಕಷ್ಟ , ಸ್ವಾಸ್ಥ , ರೋ ಗರುಜಿನಗಳು ಇದ್ದೇ ಇರುತ್ತವೆ. ರೋಗಗಳು ಬಾಧಿಸಲು ಆರಂಭಿ ಸಿದಾಗ ಔಷಧವನ್ನು ಪರಮಶ ತ್ರುವಿನಂತೆ ಕಾಣುವ ಅದೆಷ್ಟೋ ಜನರಿರುತ್ತಾರೆ. ಇದಲ್ಲದೆ ಗ್ರಾಮೀಣ ಭಾಗದಲ್ಲಿ ಕೆಲವರು ಆಸ್ಪತ್ರೆಯನ್ನು ಸಹ ಪರವಶತ್ರುವಿನಂತೆ ಕಾಣುವಂತವರು ಇದ್ದಾರೆ.
ಗ್ರಾಮೀಣ ಭಾಗದ ನಾಗರೀಕರಲ್ಲಿ ಆಸ್ಪತ್ರೆ ಎಂದರೆ ಇಂಜಕ್ಷನ್ ಕೊಡುವಂತಹ , ಆಪರೇಷನ್ ಮಾಡುವಂತಹ ಸ್ಥಳ ಎಂಬ ಭಯ ದ ವಾತವರಣ ಹಾಗು ಆಸ್ಪತ್ರೆಗೆ ಹೋದರೆ ಇಲ್ಲಸಲ್ಲದ ಪರೀಕ್ಷೆ ಗಳನ್ನು ಮಾಡಿ ಮಾನಸಿಕವಾಗಿ ಹಿಂಸೆಯಾಗುತ್ತದೆ ಹಾಗು ಜೇಬು ಖಾಲಿಯಾಗುತ್ತದೆ ಎನ್ನುವಂತಹ ಜನರು ಗ್ರಾಮೀಣ ಭಾಗದಲ್ಲಿದ್ದು , ಇನ್ನು ಕೆಲವರು ಆಕಸ್ಮಿಕವಾಗಿ ಖಾಯಿಲೆ ಬಂದರೆ ಹಳ್ಳಿಗಳಲ್ಲಿನ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರಿಲ್ಲದೆ , ನಗರ ಪ್ರದೇಶಕ್ಕೆ ಹೋಗಲು ಸಾಧ್ಯವಾಗದೆ ಖಾಯಿಲೆಯಿಂದ ಬಳಲುವ ಜನರಿದ್ದಾರೆ.
ಇಂತಹ ಸಮಯದಲ್ಲಿ ರಾಯಲ್ಪಾಡು ಹೋಬಳಿಯ ಅಡ್ಡಗಲ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪ್ರತಿದಿನ ನೂರಾರು ಜನ ಬಂದು ಚಿಕಿತ್ಸೆಯನ್ನು ಪಡೆಯುರೋಗಿಗೆ ಚಿಕಿತ್ಸೆಯ ತ್ತಿದ್ದಾರೆ. ಜೊತೆಗೆ ಮಾನಸ್ಸಿಗೆ ನೆಮ್ಮದಿ ನೀಡು ವಂತಹ ಅತ್ಯುತ್ತಮ ಪರಿಸರವು ಆವರಣದಲ್ಲಿ ಸೃಷ್ಟಿಯಾಗಿದೆ . ಉತ್ತ ಮ ವಾತವರಣವು ಸೃಷ್ಟಿಯಾಗಲು ಸ್ಥಳೀಯ ಆರೋಗ್ಯ ಕೇಂದ್ರ ಸಿಬ್ಬಂದಿಯು ಮನಸವಾಚ ಕಾರ್ಯನಿರ್ವಹಿಸುತ್ತಿದೆ . ಇನ್ನು ವೈದ್ಯರು “ ವೈದ್ಯೋ ನಾರಾಯಣಹರಿಃ ” ಎಂಬಂತೆ ವೈದ್ಯರು ಆರೋಗ್ಯ ಕೇಂದ್ರಕ್ಕೆ ಬರುವ ಅನಾರೋಗ್ಯವಂತರಿಗೆ ಅಕರೆಯಿಂದ ಉತ್ತಮ ಚಿಕಿತ್ಸೆಯನ್ನು ನೀಡುತ್ತಾ , ರೋಗಿಯ ಸಮಸ್ಯೆಯನ್ನು ಆಲಿಸಿ , ಪರಿಶೀಲಿಸಿ ಸಮಸ್ಯೆಗೆ ತಕ್ಕಂತೆ ಕಡಿಮೆ ವೆಚ್ಚದ ಪರಿಹಾರದ ಚಿಕಿತ್ಸೆಯನ್ನು ನೀಡಎತ್ತಾ , ಈ ಭಾಗದ ನಾಗರೀ ಕರೆಲ್ಲರ ಮನೆಮಾತಾಗಿದ್ದಾರೆ .
ಸಾಮಾನ್ಯವಾಗಿ ಗ್ರಾಮೀಣ ಭಾಗದ ಆರೋಗ್ಯ ಕೇಂದ್ರಗಳಲ್ಲಿ ವೈದ್ಯಕೊರತೆ ಎದ್ದು ಕಾಣುತ್ತದೆ ಆದರೆ ಅಡ್ಡಗಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಾತ್ರ ವೈದ್ಯರು ಸಾದಾ ಸಾರ್ವಜನಿಕರ ಸೇವೆಯಲ್ಲಿ ನಿರತರಾಗಿರುತ್ತಾರೆ ಎಂಬ ಮಾತು ಈ ಭಾಗದ ನಾಗರೀಕರಲ್ಲಿ ಕೇಳಿಬರುತ್ತದೆ . ನೋಟ್ : ಕರೋನಾ ರೋ ಗದ ಬಗ್ಗೆ ಭಯ ಬೇಡ ಎಚ್ಚರದಿಂದ ಗೆ ಇದ್ದರೆ ಸಾಕು . ರೋಗದ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ಸಮೀಪದ ಆರೋಗ್ಯ ಕೇಂದ್ರಕ್ಕೆ ಬೇಟಿ ನೀಡುವಂತೆ ಸಲಹೆ ನೀಡಿದರು . ಡಾ || ಕೆ.ಆರ್.ಕವಿತ ವೈದ್ಯಾ ಧಿಕಾರಿ , ಅಡ್ಡಗಲ್ ಪ್ರಾಥಮಿಕ ಆರೋಗ್ಯ ಕೇಂದ್ರ . ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.