ಕೋಲಾರ(www.vkews.com):-ರೈತರ ಆದಾಯ ವೃದ್ಧಿಗೆ ದ್ವಿತಳಿ ರೇಷ್ಮೆಹುಳು ಸಾಕಾಣಿಕೆಯಲ್ಲಿ ಸುಧಾರಿತತಾಂತ್ರಿಕತೆಗಳು” ಆನ್ ಲೈನ್ ತರಬೇತಿ ಕಾರ್ಯಕ್ರಮವನ್ನು ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ಕೋಲಾರ ಮತ್ತುರೇಷ್ಮೆ ಇಲಾಖೆ, ಕೋಲಾರ ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ: 27.05.2021ರಂದು ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಲಾಗಿತ್ತು.
ಶ್ರೀ. ಎಂ. ಮಂಜುನಾಥ, ರೇಷ್ಮೆ ಸಹಾಯಕ ನಿರ್ದೇಶಕರು, ಕೋಲಾರ ರವರು ತಮ್ಮ ಪ್ರಸ್ತಾವಿಕ ಬಾಷಣದಲ್ಲಿ ಕಳೆದ ಬಾರಿಗೆ ಹೊಲಿಸಿದರೆ ಈ ಬಾರಿಯ ಲಾಕ್ಡೌನ್ ಸಮಯದಲ್ಲಿ ರೇಷ್ಮೆಗೂಡು ಮಾರುಕಟ್ಟೆಗಳು ಕಾರ್ಯನಿರ್ವಹಿಸುತ್ತಿದ್ದು, ರೈತ ಬಾಂಧವರು ಯಾವುದೇ ಕಾರಣಕ್ಕೂ ಹಿಪ್ಪುನೇರಳೆ ತೋಟವನ್ನುಕಿತ್ತು ಹಾಕದೇ ರೇಷ್ಮೆ ಕೃಷಿಯನ್ನು ಮುಂದುವರೆಸಿಕೊಂಡು ಹೋಗಲುಬೇಕು, ಪ್ರಸ್ತುತ ಎಲ್ಲಾ ಬೆಳೆಗಳಿಗೂ ಸೂಕ್ತ ಬೆಲೆಯಿಲ್ಲದಂತಾಗಿದ್ದು ರೇಷ್ಮೆ ಕೃಷಿಯಿಂದ ಮಾತ್ರ ಸುಸ್ಥಿರ ಜೀವನ ನಡೆಸಬಹುದಾಗಿದೆ ಹಾಗೂ ಹಿಪ್ಪುನೇರಳೆ ಸೊಪ್ಪನ್ನು ಪರ್ಯಾಯ ಜೀವನೋಪಯ ಮಾರ್ಗವಾಗಿಕುರಿ, ಮೇಕೆ ಸಾಕಾಣಿಕೆಯನ್ನು ಮಾಡಿಕೊಳ್ಳಬಹುದು ಎಂದು ರೈತಬಾಂಧವರಿಗೆ ಸಲಹೆಯನ್ನು ನೀಡಿದರು. ಸದರಿಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ನೊಬೆಲೆ ಮೊರಿಸನ್, ವಿಜ್ಞಾನಿಗಳು ‘ಡಿ’ (ನಿವೃತ್ತ), ಕೇಂದ್ರರೇಷ್ಮೆ ಮಂಡಳಿ, ಬೆಂಗಳೂರು ಭಾಗವಹಿಸಿ ಗುಣಮಟ್ಟದ ಗೂಡು ಉತ್ಪಾದನೆಗೆ ಅತ್ಯವಶ್ಯ ಅಂಶಗಳು ಹಾಗೂ ಅಧುನಿಕದ್ವಿತಳಿ ರೇಷ್ಮೆ ಕೃಷಿಯ ತಾಂತ್ರಿಕತೆಗಳ ಬಗ್ಗೆ ತಿಳಿಸುತ್ತ ಮಣ್ಣಿನ ಫಲವತ್ತತೆ ನಿರ್ವಹಣೆಗಾಗಿ ಪ್ರತಿಯೊಬ್ಬ ರೇಷ್ಮೆ ಬೆಳೆಗಾರರು 2 ವರ್ಷಕ್ಕೊಮ್ಮೆ ಕಡ್ಡಾಯವಾಗಿ ಮಣ್ಣು ಪರೀಕ್ಷೆಯನ್ನು ಮಾಡಿಸಿ ಶಿಫಾರಿತ ಪ್ರಮಾಣದ ರಸಗೊಬ್ಬರ ಮತ್ತು ಸಾವಯವ ಗೊಬ್ಬರ ಬಳಸ ಬೇಕೆಂದು ತಿಳಿಸಿದರು.
ಹಿಪ್ಪುನೇರಳೆ ತೋಟದಲ್ಲಿ ಟ್ರಂಚಿಂಗ್ ಮತ್ತು ಮಲ್ಚಿಂಗ್ ತಾಂತ್ರಿಕತೆಯನ್ನು ಅಳವಡಿಸಿಕೊಂಡು ಮಣ್ಣಿನಲ್ಲಿ ನಿರಂತರವಾಗಿ ಸಾವಯವ ಇಂಗಾಲವನ್ನು ಅಭಿವೃದ್ಧಿ ಪಡಿಸುವುದು, ಹಿಪ್ಪುನೇರಳೆ ಗಿಡಗಳಿಗೆ ಸೂಕ್ತ ಸ್ಥಳಾವಕಾಶ, ನಾಟಿ ವಿಧಾನ, ಕಾಂಡದ ನಿರ್ವಹಣೆ, ಪ್ರದಾನ ಮತ್ತು ಲಘು ಪೋಷಕಾಂಶಗಳ ನಿರ್ವಹಣೆ ಬಳಕೆ ಬಗ್ಗೆ ಸವಿವರವಾಗಿ ತಿಳಿಸಿದರು. ನಂತರ ಹುಳು ಸಾಕು ಮನೆ ಸೋಂಕು ನಿವಾರಣೆಯಲ್ಲಿ ದ್ರಾವಣತಯಾರಿಕೆ ವಿಧಾನ, ಪ್ರಸ್ತುತ ಸನ್ನಿವೇಶದಲ್ಲಿ ದ್ವಿತಳಿ ರೇಷ್ಮೆ ಹುಳು ಸಾಕಾಣಿಕೆಯಲ್ಲಿ ಕಂಡುಬರುವ ಹಾಲು ರೋಗ, ಸಪ್ಪೆರೋಗ ದವೈಜ್ಞಾನಿಕನಿರ್ವಹಣೆ ಬಗ್ಗೆ ತಿಳಿಸಿದರು. ಸೋಂಕು ನಿವಾರಕ ದ್ರಾವಣವನ್ನು ಸರಿಯಾದ ಪ್ರಮಾಣದಲ್ಲಿ ಹೇಗೆ ಅಂದಾಜು ಮಾಡುವುದು, ಸೋಂಕು ನಿವಾರಕದತಯಾರಿ ಹೇಗೆ, ಪವರ್ ಸ್ಪ್ರೇಯರ್ ಬಳಸಿ ಸೋಕು ನಿವಾರಣೆ ಕೈಗೋಳ್ಳುವುದು, ಹುಳು ಮೇಯಿಸುವಾಗ ಅಂತರವೆಷ್ಟು ಇರಬೇಕು, ಪ್ರೌಢ ಹುಳು ಸಾಕಾಣಿಕೆಗೆ ಸಂಬಂದಿಸಿದಂತೆ ಸೂಕ್ತ ಸ್ಥಳಾವಕಾಶ, ಜ್ವರದಲ್ಲಿ ಹುಳುಗಳ ನಿರ್ವಹಣೆ, ಹಣ್ಣು ಹುಳು ನಿರ್ವಹಣೆ ಮತ್ತು ಪ್ರತ್ಯೇಕ ಹುಳು ಸಾಕು ಮನೆಯ ಅನುಕೂಲತೆ ಬಗ್ಗೆ ತಿಳಿಸುವುದರ ಮೂಲಕ ರೈತರ ಆದಾಯವನ್ನು ವೃದ್ದಿಗೊಳಿಸ ಬೇಕೆಂದು ತಿಳಿಸಿದರು. ಉಪನ್ಯಾಸದ ನಂತರ ಸಂವಾದ ಕಾರ್ಯಕ್ರಮದಲ್ಲಿ ದ್ವಿತಳಿ ರೇಷ್ಮೆ ಬೆಳೆಗಾರರು, ಚಾಕಿ ಸಾಕಾಣಿಕಾ ಕೇಂದ್ರದ ಮಾಲಿಕರು ಹಾಗೂ ರಾಜ್ಯದ ಇತರೇ ಜಿಲ್ಲೆಗಳಿಂದ ರೈತರು ಭಾಗವಹಿಸಿ ದ್ವಿತಳಿ ರೇಷ್ಮೆಹುಳು ಸಾಕಾಣಿಕೆಯಲ್ಲಿ ಕೈಗೊಳ್ಳಬೇಕಾದ ನಿರ್ವಹಣಾ ಕ್ರಮಗಳ ಬಗ್ಗೆ ಚರ್ಚಿಸಿದರು ಹಾಗೂ ಸೂಕ್ತ ಸಲಹೆಗಳನ್ನು ಪಡೆದುಕೊಂಡರು. ಕೃಷಿ ವಿಜ್ಞಾನಕೇಂದ್ರ, ಕೋಲಾರದಲ್ಲಿ ನಡೆದ “ರೈತರ ಆದಾಯ ವೃದ್ಧಿಗೆ ದ್ವಿತಳಿ ರೇಷ್ಮೆಹುಳು ಸಾಕಾಣಿಕೆಯಲ್ಲಿ ಸುಧಾರಿತ ತಾಂತ್ರಿಕತೆಗಳು” ಆನ್ಲೈನ್ ಕಾರ್ಯಾಗಾರವನ್ನು ರೇಷ್ಮೆ ಕೃಷಿ ವಿಜ್ಞಾನಿಗಳಾದ ಡಾ. ಶಶಿಧರ್ ಕೆ.ಆರ್ಯಶಸ್ವಿಯಾಗಿ ನಡೆಸಿಕೊಟ್ಟರು. ಸದರಿ ಕಾರ್ಯಕ್ರಮದಲ್ಲಿ ಸುಮಾರು 80 ರೇಷ್ಮೆ ಬೆಳೆಗಾರರು ಆನ್ಲೈನ್ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮದ ಸದುಉಪಯೋಗವನ್ನು ಪಡೆದುಕೊಡರು..
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.