ಮಂಗಳೂರು (www.vknews.com) : ಮಂಗಳೂರಿನಲ್ಲಿ ಖದೀಜ ಜಾಸ್ಮಿನ್ ಎಂಬ ಗರ್ಭಿಣಿ ಮಹಿಳೆಯೊಬ್ಬರನ್ನು ಕೊರೋನ ನೆಪದಲ್ಲಿ ಒಂಬತ್ತು ಆಸ್ಪತ್ರೆಗಳಿಗೆ ಮತ್ತು ವೈದ್ಯರು ಬೇಜವಾಬ್ದಾರಿಯಿಂದ ವರ್ತಿಸಿ ಪ್ರಾಣ ಬೆದರಿಕೆಯೊಡ್ಡಿದ ಘಟನೆಯು ಮೆಡಿಕಲ್ ಮಾಫಿಯಾ ದ ಒಂದು ಭಾಗವಾಗಿದ್ದು ಇಂತಹ ಅಮಾನವೀಯ ನಡವಳಿಕೆಯ ಖಾಸಗಿ ಆಸ್ಪತ್ರೆಗಳ ಮೇಲೆ ಮತ್ತು ಮಾನವೀಯತೆಯಿಲ್ಲದ ವೈದ್ಯರ ಮೇಲೆ ಕೇಂದ್ರ ಮತ್ತು ಕರ್ನಾಟಕ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಲ್ ಇಂಡಿಯಾ ಮುಸ್ಲಿಂ ಡೆವಲಪ್ಮೆಂಟ್ ಫಾರಂ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಹೆಚ್.ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ ಕೇಂದ್ರ ಮತ್ತು ಕರ್ನಾಟಕ ಸರಕಾರವನ್ನು ಆಗ್ರಹಿಸಿದ್ದಾರೆ.
ಖದೀಜ ಜಾಸ್ಮಿನ್ ಅವರಿಗಾದ ಅನ್ಯಾಯವನ್ನು ಪ್ರಧಾನ ಮಂತ್ರಿ ಮತ್ತು ಮುಖ್ಯಮಂತ್ರಿ ಗಳು ಗಣನೆಗೆ ತೆಗೆದುಕೊಂಡು ಅವರಿಗೆ ನ್ಯಾಯ ಕೊಡಿಸಬೇಕು. ತಪ್ಪಿತಸ್ಥ ಖಾಸಗಿ ಆಸ್ಪತ್ರೆಗಳ ವಿರುದ್ಧ ಮತ್ತು ವೈದ್ಯರ ವಿರುದ್ಧ ಕೂಡಲೇ ಕ್ರಮ ಜರುಗಿಸಬೇಕು. ಆಸ್ಪತ್ರೆಗಳು ಮತ್ತು ವೈದ್ಯರು ಇರುವುದೇ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಅತ್ಯುತ್ತಮ ಚಿಕಿತ್ಸೆ ನೀಡಲಿಕ್ಕಾಗಿದೆ.
ಆದರೆ ವಿವಿಧ ರೋಗಗಳ ನೆಪ ಹೇಳಿ ಜನರಿಂದ ಹಣ ವಸೂಲು ಮಾಡಲು ಮಾತ್ರ ಇರುವಂತಿರುವ ಕೆಲವು ಕೊರೋನ ಬಂದ ಬಳಿಕ ಎಲ್ಲಾ ಕಡೆ ಮೆಡಿಕಲ್ ಮಾಫಿಯಾ ಆರಂಭವಾಗಿದ್ದು ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಸರಕಾರ ಜನರಿಗೆ ಉತ್ತಮ ಚಿಕಿತ್ಸೆ ಖಾತರಿಪಡಿಸಬೇಕು. ಆಸ್ಪತ್ರೆಗಳ ವಿರುದ್ಧ ನಾಡಿನ ಜನತೆ ಒಂದಾಗಬೇಕು.
ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರಗಳನ್ನು ಸರಕಾರ ತನ್ನ ಅಧಿನಕ್ಕೊಳಪಡಿಸುವುದೇ ಇಂದಿನ ಮೆಡಿಕಲ್ ಮಾಫಿಯಾ ಗಿರುವ ಏಕೈಕ ಪರಿಹಾರ. ಮಾನವೀಯತೆಯ ವಿರುದ್ಧವಿರುವ ಯಾರೇ ಆದರೂ ಅವರನ್ನು ಕಾನೂನಿನ ಕೊಂಡಿಯೊಳಗೆ ಸಿಲುಕಿಸಿ ಜನತೆಗೆ ಧೈರ್ಯ ತುಂಬಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರಕಾರಗಳು ತುರ್ತಾಗಿ ಮುಂದಾಗಬೇಕೆಂದು ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.