ಕೋಲಾರ ( ವಿಶ್ವ ಕನ್ನಡಿಗ ನ್ಯೂಸ್ ) :- 2021-22ನೇ ಸಾಲಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖಾ ವತಿಯಿಂದ ಕೋಲಾರ ಜಿಲ್ಲೆಯ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ , ಕೋಲಾರ ಮತ್ತು ಮುಳಬಾಗಿಲು ಹಾಗೂ ಮೌಲಾನಾ ಆಜಾದ್ ಮಾದರಿ ಶಾಲೆಗಳು , ಕೋಲಾರ , ಬಂಗಾರಪೇಟೆ , ಕೆಜಿಎಫ್ , ಶ್ರೀನಿವಾಸಪುರ ಶಾಲೆಗಳಿಗೆ ಅರ್ಹ ವಿದ್ಯಾರ್ಥಿಗಳಿಂದ 6 ಮತ್ತು 7 ನೇ ತರಗತಿ ದಾಖಲಾತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ .
ವಿದ್ಯಾರ್ಥಿಗಳು ರಾಜ್ಯದ ನಿವಾಸಿಯಾಗಿರಬೇಕು , ಕುಟುಂಬದ ವಾರ್ಷಿಕ ವರಮಾನವು ರೂ .2.50 ಲಕ್ಷಗಳಿಗೆ ಮೀರಬಾರದು , ಶಾಲೆಗಳಲ್ಲಿ ಮತೀಯ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಶೇ .75 ರಷ್ಟು ( ಮುಸ್ಲಿಂ , ಜೈನ್ , ಕ್ರಿಶ್ಚಿಯನ್ , ಸಿಖ್ , ಭೌದ್ಧ ಮತ್ತು ಪಾರ್ಸಿ ) ಹಾಗೂ ಶೇ .25 ರಷ್ಟು ಪರಿಶಿಷ್ಟ ಜಾತಿ , ಪರಿಶಿಷ್ಟ ಪಂಗಡ , ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಮೀಸಲಾತಿ ಮತ್ತು ಪ್ರತಿ ತರಗತಿಯಲ್ಲಿ ಹೆಣ್ಣು ಮಕ್ಕಳಿಗೆ ಶೇ .50 ಮೀಸಲಿರಿಸಲಾಗಿದೆ . ಪಠ್ಯಪುಸ್ತಕ , ಸಮವಸ್ತ್ರ , ವಸತಿ ಮತ್ತು ಲೇಖನ ಸಾಮಗ್ರಿಗಳನ್ನು ಉಚಿತವಾಗಿ ನೀಡಲಾಗುವುದು .
ಆಸಕ್ತಿಯುಳ್ಳ ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿ ಹಾಗೂ ನಿಗಧಿತ ಅರ್ಜಿ ನಮೂನೆಗಳನ್ನು ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ , ಕೋಲಾರ ಮತ್ತು ಮುಳಬಾಗಿಲು , ಜಿಲ್ಲಾ / ತಾಲ್ಲೂಕು ಮಾಹಿತಿ ಕೇಂದ್ರಗಳು ಹಾಗೂ ಜಿಲ್ಲಾ ಅಧಿಕಾರಿಗಳ ಕಾರ್ಯಾಲಯ , ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ , ನೆಲ ಮಹಡಿ , ಮೌಲಾನಾ ಆಜಾದ್ ಭವನ , ಶ್ರೀ ದೇವರಾಜ್ ಅರಸು ಬಡಾವಣೆ , 2 ನೇ ಬ್ಲಾಕ್ , ವಾರ್ಡ್ ನಂ .1 , ಟಮಕ , ಕೋಲಾರ ದೂರವಾಣಿ ಸಂಖ್ಯೆ 08152-295257 , ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ , ಕೋಲಾರ ದೂರವಾಣಿ ಸಂಖ್ಯೆ 9686799165, 7353782170 ಹಾಗೂ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ , ಮುಳಬಾಗಿಲು ದೂರವಾಣಿ ಸಂಖ್ಯೆ 9964078199, 9741166686 ಹಾಗೂ ಮೌಲಾನಾ ಆಜಾದ್ ಮಾದರಿ ಶಾಲೆಗಳು , ಕೋಲಾರ ಮೊಬೈಲ್ ಸಂಖ್ಯೆ 9845861293 , ಬಂಗಾರಪೇಟೆ ಮೊಬೈಲ್ ಸಂಖ್ಯೆ 9611077530 , ಕೆಜಿಎಫ್ ಮೊಬೈಲ್ ಸಂಖ್ಯೆ 9741166686 , ಶ್ರೀನಿವಾಸಪುರ ಮೊಬೈಲ್ ಸಂಖ್ಯೆ 9663757282 ರವರ ಶಾಲೆಗಳಲ್ಲಿ ಪಡೆದು ಭರ್ತಿ ಮಾಡಿ ಸಲ್ಲಿಸತಕ್ಕದ್ದು .
2021-22ನೇ ಸಾಲಿನಲ್ಲಿ 6 ನೇ ತರಗತಿಗೆ ದಾಖಲಾತಿಯನ್ನು ಪಡೆಯುವ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ಯಾವುದೇ ಪ್ರವೇಶ ಪರೀಕ್ಷೆ ಇರುವುದಿಲ್ಲ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.