ಕೋಲಾರ ( ವಿಶ್ವ ಕನ್ನಡಿಗ ನ್ಯೂಸ್ ) :- ಗಡಿ ಭಾಗದಲ್ಲಿ ಕನ್ನಡ ಸಂಸ್ಕೃತಿಯನ್ನು ಬೆಳೆಸಲು ಅಲ್ಲಿನ ಕನ್ನಡಿಗರನ್ನು ಶೈಕ್ಷಣಿಕವಾಗಿ ಮತ್ತು ಸಂಸ್ಕೃತಿಕವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ . ಸಿ . ಸೋಮಶೇಖರ್ ರವರು ತಿಳಿಸಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾತನಾಡಿದರು . 2010 ರಲ್ಲಿ ಗಡಿ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಮಾಡಲಾಯಿತು ಇದರ ಮುಖ್ಯ ಆಶಯ ಗಡಿ ಭಾಗದ ಕನ್ನಡಿಗರ ಆಸ್ಮಿತೆ ಮತ್ತು ಸಂಸ್ಕೃತಿಯನ್ನು ಕಾಪಾಡುವುದು ಎಂದು ಅವರು ಹೇಳಿದರು . ಗಡಿ ಪ್ರದೇಶಗಳಲ್ಲಿ ಜನರು ಬಹುಭಾಷಿತ ಬಹು ಸಂಸ್ಕೃತಿಯನ್ನು ಒಳಗೊಂಡಿರುತ್ತಾರೆ . ಅವರಿಗೆ ಸಾಂಸ್ಕೃತಿಕ , ಶೈಕ್ಷಣಿಕ ಮತ್ತು ಸಾಮಾಜಿಕ ಭದ್ರತೆಯನ್ನು ಒದಗಿಸಬೇಕು .
ಗಡಿ ಭಾಗದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ , ಶಾಲೆ , ಆಸ್ಪತ್ರೆ , ರಸ್ತೆ ಹಾಗೂ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಿ ಸರ್ಕಾರ ಅವರ ಜೊತೆ ಇದೆ ಎಂಬ ಧೈರ್ಯ ತುಂಬವ ಕಾರ್ಯ ನಡೆಯಬೇಕು ಎಂದು ಅವರು ಹೇಳಿದರು . ಈ ಸಾಲಿನ ಅನುದಾನದಲ್ಲಿ ರಾಜ್ಯದ ಗಡಿ ಭಾಗದ 63 ತಾಲ್ಲೂಕುಗಳಲ್ಲಿ ಕನ್ನಡ ಸಂಸ್ಕೃತಿ ಉತ್ಸವ ಆಚರಿಸಲಾಗುವುದು.
ಈ ಭಾರಿ ಶೈಕ್ಷಣಿಕವಾಗಿ ಹೆಚ್ಚಿನ ಒತ್ತು ಕೊಟ್ಟು ಗಡಿ ಭಾಗದಲ್ಲಿ ಶಾಲಾ ಕಟ್ಟಡ , ಶೌಚಾಲಯ ಮತ್ತು ಗ್ರಂಥಾಲಯಗಳ ನಿರ್ಮಿಸಲಾಗುವುದು . ಜಿಲ್ಲೆಯ ಐದು ತಾಲ್ಲೂಕುಗಳಾದ ಮುಳಬಾಗಿಲು , ಬಂಗಾರಪೇಟೆ , ಕೆಜಿಎಫ್ , ಮಾಲೂರು ಮತ್ತು ಶ್ರೀನಿವಾಸಪುರದಲ್ಲಿ ನಿರ್ಮಿಸಲಾಗುವುದು ಎಂದು ಅವರು ಹೇಳಿದರು . ಗಡಿ ಭಾಗದ ಕನ್ನಡಿಗರ ಸಂಸ್ಕೃತಿಯನ್ನು ಬೆಳೆಸಲು ಕನ್ನಡ ಹೋರಾಟಗಾರರ ಮತ್ತು ದಾರ್ಶನಿಕರ ಸ್ಮಾರಕಗಳು , ಸಾಕ್ಷಾ ಚಿತ್ರಗಳನ್ನು ಹಾಗೂ ಗಡಿಭಾಗದ ಹೆದ್ದಾರಿಯಲ್ಲಿ ಸ್ವಾಗತ ಧ್ವಜಸ್ತಂಭ ಗಳನ್ನು ನಿರ್ಮಿಸಲಾಗುವುದು.
ಗಡಿಭಾಗದ ಪ್ರೌಢ ಪ್ರಬಂಧಗಳನ್ನು ಬರೆದಿರುವವರ ಪುಸ್ತಕಗಳನ್ನು ಪ್ರಕಟಿಸಲು ಸಹಾಯ ಮಾಡಲಾಗುವುದು . ಉತ್ತಮ ಸಾಧನೆ ಮಾಡಿದವರನ್ನು ಗುರುತಿಸಿ ಅವರಿಗೆ ಕೈಯಾರಕಿಯ್ಯಾಣ್ಣರೈ ಮತ್ತು ಜಯದೇವಿತಾಯಿ ಲಿಗಾಡೆ ಅವರ ಹೆಸರಿನಲ್ಲಿ ರಾಷ್ಟ್ರೀಯ ಪ್ರಶಸ್ತಿ ನೀಡಲಾಗುವುದು ಅವರು ಹೇಳಿದರು .
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಡಾ || ಆರ್.ಸೆಲ್ವಮಣಿ , ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಎನ್.ಎಂ.ನಾಗರಾಜ್ , ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕರಾದ ರವಿಕುಮಾರ್ , ತಹಶೀಲ್ದಾರರಾದ ಶೋಭಿತಾ , ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.