ಮಂಗಳೂರು (ವಿಶ್ವಕನ್ನಡಿಗ ನ್ಯೂಸ್): ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ಇದರ ಸಮಾಜ ಸೇವಾ ಘಟಕದ ವತಿಯಿಂದ, ಬಂಟ್ವಾಳ ತಾಲೂಕಿನ ಬಾಂಬಿಲ ಸಮೀಪದ ಮದ್ದ ಎಂಬಲ್ಲಿ, ನಾಲ್ಕು ಅನಾಥ ಹೆಣ್ಮಕ್ಕಳ, ಆಸರೆಯಾಗಿರುವ ಬಡ ವಿಧವೆಯೊಬ್ಬರಿಗೆ, ಹಲವು ದಾನಿಗಳ ಸಹಾಯದಿಂದ ತಕ್ಕ ಮಟ್ಟಿನ ಸುಸಜ್ಜಿತ ಮನೆಯೊಂದನ್ನು ನಿರ್ಮಿಸಿ, ಸರಳ ಸಂಭ್ರಮದೊಂದಿಗೆ ಇತ್ತೀಚೆಗೆ ಹಸ್ತಾಂತರಿಸಲಾಯಿತು.
ಕಾರ್ಯಕ್ರಮವನ್ನು ಜಮಾಅತೆ ಇಸ್ಲಾಮೀ ಹಿಂದ್ ಬಂಟ್ವಾಳ ವರ್ತುಲದ ಹಿರಿಯ ಸದಸ್ಯರೂ ನಿವೃತ್ತ ಅಧ್ಯಾಪಕರೂ ಆದ ಅಬ್ದುಸ್ಸಲಾಮ್ ಮಾಸ್ಟರ್ ಉದ್ಘಾಟಿಸಿ, ಸಮಾಜ ಸೇವೆಯ ಅಗತ್ಯ ಮತ್ತು ಅನಿವಾರ್ಯತೆಯ ಕುರಿತು ಮಾತಾಡಿದರು. ಅನುಪಮ ಮಹಿಳಾ ಮಾಸಿಕದ ವ್ಯವಸ್ಥಾಪಕರಾದ ಮುಹಮ್ಮದ್ ಮುಹ್ಸಿನ್ ಸಂದರ್ಭೋಚಿತ ಉಪದೇಶ ನೀಡಿ, ಆರ್ಥಿಕ ಸಹಾಯ ನೀಡಿ ಸಹಕರಿಸಿದವರಿಗೂ ಫಲಾನುಭವಿ ಕುಟುಂಬಕ್ಕೂ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಉದ್ಯಮಿ ಮುಹಮ್ಮದ್ ಇಸ್ಹಾಕ್, ಫರಂಗಿಪೇಟೆ ಹಾಗೂ ಬಾಂಬಿಲ ಜುಮಾ ಮಸೀದಿ ಕಮಿಟಿಯ ಸದಸ್ಯರಾದ ಮುಹಮ್ಮದ್ ಶರೀಫ್, ಜಮಾಅತೆ ಇಸ್ಲಾಮೀ ಹಿಂದ್ ಬಂಟ್ವಾಳ ಅಧ್ಯಕ್ಷರಾದ ಇಲ್ಯಾಸ್ ಅಹ್ಮದ್, ಅಬುಸ್ವಾಲೀಹ್ ಕೆಳಗಿನ ಪೇಟೆ, ಶಂಶೀರ್ ಮೆಲ್ಕಾರ್ ಇನ್ನಿತರರು ಉಪಸ್ಥಿತರಿದ್ದರು.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.