ಶ್ರೀನಿವಾಸಪುರ ( ವಿಶ್ವ ಕನ್ನಡಿಗ ನ್ಯೂಸ್ ) :- ರಾಸುಗಳಲ್ಲಿ ವಿವಿಧ ರೀತಿಯ ವಂಶಾಭಿವೃದ್ಧಿ ಮಾಡಿಸುವಲ್ಲಿ , ಕೃತಕ ಗರ್ಭಧಾರಣಾ ಕಾರ್ಯಕರ್ತರ ಪಾತ್ರ ಹಿರಿದು . ಕರುಗಳ ಜನನ ಹಾಗೂ ಹಾಲು ಶೇಖರಣೆ ಹೆಚ್ಚಿಸುವಲ್ಲಿ ಅವರು ಮುಖ್ಯ ಪಾತ್ರ ವಹಿಸಿದ್ದಾರೆ ಎಂದು ಕೋಚಿಮುಲ್ ನಿರ್ದೇಶಕ ಎನ್.ಹನುಮೇಶ್ ಹೇಳಿದರು.
ಪಟ್ಟಣದ ಕ್ಯಾಂಪ್ ಕಚೇರಿ ಸಭಾಂಗಣದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಕೃತಕ ಗರ್ಭಧಾರಣಾ ಕಾರ್ಯಕರ್ತರಿಗೆ ಎಗಿ ಕಿಟ್ ಹಾಗೂ ಕೋವಿಡ್ ಸೀಲ್ಸ್ ಗ್ಲಾಸ್ಟ್ ಮಾಸ್ಟ್ಗಳನ್ನು ವಿತರಿಸಿ ಮಾತನಾಡಿ , ಕಾರ್ಯಕರ್ತರು ರಾಸುಗಳಲ್ಲಿ ಕೃತಕ ಗರ್ಭಧಾರಣೆ ಮಾಡಿಸುವುದಷ್ಟೇ ಅಲ್ಲದೆ , ಶಿಬಿರ ಕಚೇರಿಯಿಂದ ರಾಸುಗಳಿಗೆ ಅಗತ್ಯವಾದ ಔಷಧಗಳನ್ನು ಪಡೆದು ಪ್ರಥಮ ಚಿಕಿತ್ಸೆ ಮಾಡಬೇಕು. ಹಾಲಿನ ಗುಣಮಟ್ಟ ಹೆಚ್ಚಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಹಾಲು ಉತ್ಪಾದಕರಿಗೆ ತಿಳಿಸಬೇಕು ಎಂದು ಹೇಳಿದರು.
ಕೊರೋನಾ ಸಂಕಷ್ಟದ ನಡುವೆ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಿಬ್ಬಂದಿ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು . ಕೋಚಿಮುಲ್ ವತಿಯಿಂದ ವಿತರಿಸಲಾಗಿರುವ ಗ್ಲಾಸ್ ಮಾಸ್ಕ್ ಧರಿಸುವುದನ್ನು ಮರೆಯಬಾರದು. ಕೊರೋನಾ ಸೋಂಕು ಹರಡದಂತೆ ಎಚ್ಚರ ವಹಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪ ಕಚೇರಿ ಉಪ ವ್ಯವಸ್ಥಾಪಕ ಕೆ.ಎಸ್.ನರಸಿಂಹಯ್ಯ , ವಿಸ್ತರಣಾಧಿಕಾರಿಗಳಾದ ಎಂ.ಜಿ.ಶ್ರೀನಿವಾಸ್ , ಎನ್.ಶಂಕರ್ , ಎಸ್.ವಿನಾಯಕ , ಪಿ.ಕೆ.ನರಸಿಂಹರಾಜು , ಕೆ.ಪಿ.ಶ್ವೇತಾ ಇದ್ದರು
ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.