ಕೆ.ಜಿ.ಎಫ್ (ವಿಶ್ವಕನ್ನಡಿಗ ನ್ಯೂಸ್):– ನಗರದ ಉರಿಗಾಂನ ಡಾ|| ಬಿ.ಆರ್.ಅಂಬೇಡ್ಕರ್ ರಸ್ತೆಯಲ್ಲಿರುವ ಶ್ರೀ ವಾಣಿ ನಿಲಯಂ ಗ್ರಂಥಾಲಯಕ್ಕೆ ಅಗತ್ಯ ಸೌಲಭ್ಯಗಳನ್ನು ಒದಗಿಸುವಂತೆ ಉಚಿತ ವಾಚನಾಲಯ ಸಂಘದ ಪ್ರಧಾನ ಕಾರ್ಯದರ್ಶಿ ಡಾ | ಆರ್.ಪ್ರಭುರಾಂ ಅವರು ಒತ್ತಾಯಿಸಿದ್ದಾರೆ .
ಕೆಜಿಎಫ್ ವಾಣಿ ನಿಲಯಂ ಗ್ರಂಥಾಲಯದ ಹಾಗೂ ಉಚಿತ ವಾಚನಾಲಯ ಸಂಘದ ಪ್ರಧಾನ ಕಾರ್ಯದರ್ಶಿ ಡಾ | ಆರ್.ಪಭುರಾಂ ಅವರು ರಾಜ್ಯ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕರಾದ ಡಾ| ಸತೀಶ್ಕುಮಾರ್ ಅವರನ್ನು ಈ ಸಂಬಂಧ ಭೇಟಿಯಾಗಿ ಮನವಿ ಪತ್ರವನ್ನು ಸಲ್ಲಿಸಿದ್ದಾರೆ .
ಕೆಜಿಎಫ್ನ ಸುಪ್ರಸಿದ್ದ ವಾಣಿ ನಿಲಯಂ ಉಚಿತ ವಾಚನಾಲಯ ಮತ್ತು ಗ್ರಂಥಾಲಯವು 1942 ರಲ್ಲಿ ಪ್ರಾರಂಭವಾಗಿ ಸುಮಾರು 79 ವರ್ಷಗಳ ಕಾಲ ಉತ್ತಮವಾದ ರೀತಿಯಲ್ಲಿ ಸೇವೆಯನ್ನು ನೀಡುತ್ತಿದ್ದು , ಈ ಗ್ರಂಥಾಲಯಕ್ಕೆ ಸರ್ಕಾರದಿಂದ , ಇತರೆ ಸಂಘ ಸಂಸ್ಥೆಗಳಿಂದ ಯಾವುದೇ ಅನುದಾನ ಸೌಲಭ್ಯಗಳನ್ನು ಪಡೆಯದೇ ಕಾರ್ಯಕಾರಿ ಸಮಿತಿಯ ಮೂಲಕ ನಡೆದುಕೊಂಡು ಬಂದಿರುತ್ತದೆ .
ಗ್ರಂಥಾಲಯದ ಕಟ್ಟಡವು ತುಂಬಾ ಹಳೆಯ ಹಾಗೂ ಶಿಥಿಲ ಕಟ್ಟಡವಾಗಿರುವುದರಿಂದ ಕೆಜಿಎಫ್ ಕ್ಷೇತ್ರದ ಶಾಸಕರಾದ ಡಾ | ಎಂ. ರೂಪಕಲಾ ಶಶಿಧರ್ ಅವರು ದುರಸ್ಥಿಗೆ ಮೂರು ಲಕ್ಷ ರೂಪಾಯಿ ಅನುದಾನವನ್ನು ಕೆ.ಎಲ್.ಎಲ್.ಎ.ಡಿ.ಎಸ್ . ನಿಂದ ನೀಡಿರುತ್ತಾರೆ . ಅದರಂತೆ , ಕಾಮಗಾರಿಯು ನಡೆಯುತ್ತಿದೆ . ಗ್ರಂಥಾಲಯದ ಕಟ್ಟಡವನ್ನು ನವೀಕರಿಸಿದ ನಂತರ ಪ್ರತ್ಯೇಕವಾಗಿ ಸಾರ್ವಜನಿಕರ ಉಪಯೋಗಕ್ಕಾಗಿ ಉಚಿತ ವಾಚನಾಲಯ ಮತ್ತು ಗ್ರಂಥಾಲಯಕ್ಕೆ ಬಳಸಲಾಗುವುದು.
ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ ದೊರೆಯುವಂತಹ ಎಲ್ಲಾ ರೀತಿಯ ಸೌಲಭ್ಯಗಳನ್ನು ಸಾರ್ವಜನಿಕ ಹಿತಾಸಕ್ತಿಯಿಂದ ಒದಗಿಸಬೇಕೆಂದು ಕೆಜಿಎಫ್ ವಾಣಿ ನಿಲಯಂ ಗ್ರಂಥಾಲಯದ ಹಾಗೂ ಉಚಿತ ವಾಚನಾಲಯ ಸಂಘದ ಪ್ರಧಾನ ಕಾರ್ಯದರ್ಶಿ ಡಾ | ಆರ್.ಪ್ರಭುರಾಂ ಅವರು ರಾಜ್ಯ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕರಾದ ಡಾ || ಸತೀಶ್ಕುಮಾರ್ ಅವರನ್ನು ಒತ್ತಾಯಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.