ದುಬೈ(www.vknews.in): ಆಗಸ್ಟ್ 15ರಿಂದ ದುಬೈ, ಅಬುಧಾಬಿ, ಶಾರ್ಜಾ ಹಾಗೂ ರಾಸಲ್ ಖೈಮಾ ಸೇರಿದಂತೆ ಯುಎಇಯ ಎಲ್ಲಾ ವಿಮಾನ ನಿಲ್ದಾಣಗಳಿಗೆ ಮಾನ್ಯ ರೆಸಿಡೆನ್ಸಿ ವೀಸಾ ಹೊಂದಿರುವವರಿಗೆ ಮುಕ್ತ ಪ್ರವೇಶಕ್ಕೆ ಅವಕಾಶ ನೀಡಲಾಗುವುದೆಂದು ಯುಎಇಯ ರಾಷ್ಟ್ರೀಯ ಕೊವಿಡ್ ಹಾಗೂ ವಿಪತ್ತು ನಿರ್ವಹಣಾ ಮಂಡಳಿಯು ಸ್ಪಷ್ಟಪಡಿಸಿದೆ. ದುಬೈ ಪ್ರವೇಶಸಲು ವ್ಯಾಕ್ಸಿನ್ ಪಡೆಯಬೇಕೆಂಬ ನಿಯಮ ಕಡ್ಡಾಯವಲ್ಲದಿದ್ದರೂ, ಶಾರ್ಜಾ, ಅಬುಧಾಬಿ ಹಾಗೂ ರಾಸಲ್ ಖೈಮಾ ವಿಮಾನ ನಿಲ್ದಾಣಗಳಲ್ಲಿ ಇಳಿಯುವವರು ಯುಎಇ ಅಂಗೀಕರಿಸಿದ ಯಾವುದಾದರೂ ವ್ಯಾಕ್ಸಿನ್ ಪಡೆದಿರಬೇಕೆಂಬ ನಿಯಮವಿದೆ. ಮಾತ್ರವಲ್ಲ ದುಬೈ ಪ್ರವೇಶಿಸುವವರು ಪ್ರಯಾಣಕ್ಕೆ ಮುಂಚಿತವಾಗಿ GDRFA ಯಿಂದ ಅಪ್ರೂವಲ್ ಪಡೆಯಬೇಕಿದ್ದು, ಅಬುಧಾಬಿ, ಶಾರ್ಜಾ ಹಾಗೂ ರಾಸಲ್ ಖೈಮಾ ಪ್ರವೇಶಿಸುವವರು ICA ಯಿಂದಲೂ ಅಪ್ರೂವಲ್ ಪಡೆಯಬೇಕಿದೆ. ಆಯಾಯಾ ಸ್ಟೇಟ್ ಗಳ ವೀಸಾ ಹೊಂದಿರುವವರನ್ನು ಆಯಾಯಾ ವಿಮಾನ ನಿಲ್ದಾಣಗಳಲ್ಲಿ ಇಳಿಯಲು ಮಾತ್ರ ಅನುಮತಿಸಲಾಗುವುದು ಎಂದು ಯುಎಇ ಸರಕಾರವು ಈಗಾಗಲೇ ಹೇಳಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.