ಮಾಲೂರು (ವಿಶ್ವ ಕನ್ನಡಿಗ ನ್ಯೂಸ್) : ಮಾಲೂರು ಪಟ್ಟಣ್ಣದ ಎಸ್.ಎಫ್.ಎಸ್ ಫ್ರೌಡ ಶಾಲೆಯ ವಿದ್ಯಾರ್ಥಿನಿ ಕುಮಾರಿ ಪೂರ್ವಿತಾ.ಎಂ.ಎನ್ ರವರು ಖಾಸಗಿ ಶಾಲೆಯಲ್ಲಿ ತಾಲ್ಲೂಕಿಗೆ ಪ್ರಥಮ ಸ್ಥಾನವನ್ನು ಪಡೆಯುವ ಮೂಲಕ ಸಾಧನೆ ಮಾಡಿದ್ದರೆ.
ಈ ಬಗ್ಗೆ ಎಸ್.ಎಲ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಪೂರ್ವಿತಾ.ಎಂ.ಎನ್ ರವರು ಮಾತನಾಡಿ “ನನ್ನ ಈ ಸಾಧನೆಯ ಹಿಂದೆ ನನ್ನ ಪೋಷಕರು ಹಾಗೂ ಶಿಕ್ಷಕರ ಸಹಕಾರದಿಂದ ಸಾಧನೆ ಮಾಡಿದ್ದೇನೆ ನನಗೆ ಸಂತಸವಾಗಿದೆ, ಮುಂದೆ ನಾನು ವೈದ್ಯಾಧಿಕಾರಿಯಾಗಿ ಅಥವಾ ಜಿಲ್ಲಾಧಿಕಾರಿಯಾಗಿ ಸೇವೆ ಮಾಡಲು ಆಸಕ್ತಿ ಇದೆ” ಎಂದರು.
ವಿದ್ಯಾರ್ಥಿನಿಯ ಪೋಷಕರಾದ ನಾಗರಾಜ್ ರವರು ಮಾತನಾಡಿ “ನಮ್ಮ ಮಗಳ ಸಾಧನೆಯ ಬಗ್ಗೆ ನಮಗೆ ಬಹಳ ಹೆಮ್ಮೆ ಆಗುತ್ತಿದೆ. ಅವಳ ವಿದ್ಯಾಭ್ಯಾಸಕ್ಕೆ ಪೂರ್ಣ ಪ್ರಮಾಣದ ಸಹಕಾರ ನೀಡುವುದೇ ಆಗಿದೆ.
ಈ ಸಂದರ್ಭದಲ್ಲಿ ತಾಯಿ ಉಷಾ, ತಂದೆ ನಾಗರಾಜ್, ರಕ್ಷಿತ್ ಗೌಡ, ತೇಜಸ್ಸ್ ಗೌಡ, ನಾಗವೇಣಿ, ಸುಚಿತ್ರಾ, ಧನುಷ್, ಪುರುಷೋತ್ತಮ್, ಗುಣವಂತ, ಗಣೇಶ್, ರಾಜಣ್ಣ, ಶಶಿ, ಲಕ್ಷ್ಮಮ್ಮ, ಸುಮ.ವೈ.ಎಸ್, ಕೃಷ್ಣಮೂರ್ತಿ, ಚಂದ್ರಪ್ಪ, ಕೆಂಪಮ್ಮ ಇತರರು ಹಾಜರಿದ್ದರು.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.