ದುಬೈ (ವಿಶ್ವ ಕನ್ನಡಿಗ ನ್ಯೂಸ್) : ದುಬೈನ ದೇರಾ ಪ್ರದೇಶದ ನಿವಾಸಿಗಳು ಬಾಲ್ಕನಿಯಲ್ಲಿ ಸಿಲುಕಿದ್ದ ಗರ್ಭಿಣಿ ಬೆಕ್ಕಿನ ಜೀವವನ್ನು ಉಳಿಸಿದ ಹೃದಯಸ್ಪರ್ಶಿ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ದೇರಾದಲ್ಲಿರುವ ಅಪಾರ್ಟ್ ಮೆಂಟ್ ಬ್ಲಾಕ್ ನ ಎರಡನೇ ಮಹಡಿಯಲ್ಲಿರುವ ಬಾಲ್ಕನಿಯ ಅಂಚಿನಲ್ಲಿ ಗರ್ಭಿಣಿ ಬೆಕ್ಕೊಂದು ಸಿಲುಕಿಕೊಂಡಿತ್ತು. ಬಾಲ್ಕನಿಯ ಗಾಜಿನ ಬೇಲಿಯ ಮೇಲೆ ಹಿಡಿತವಿಲ್ಲದ ಕಾರಣ ಬೆಕ್ಕು ನೆಲಕ್ಕೆ ಮರಳಲು ಸಾಧ್ಯವಾಗಲಿಲ್ಲ.
ತೊಂದರೆಗೀಡಾದ ಬೆಕ್ಕನ್ನು ಗಮನಿಸಿದ ನೆರೆಹೊರೆಯ ಜನರು ಸುತ್ತಲೂ ಜಮಾಯಿಸಿದರು. ಓರ್ವ ವ್ಯಕ್ತಿ ಬೇಗನೆ ಒಂದು ಬೆಡ್ ಶೀಟ್ ತಂದು, ಇತರರ ಸಹಾಯದೊಂದಿಗೆ ಬೆಕ್ಕಿನ ಚಲನೆಗನುಸಾರವಾಗಿ ಬೆಡ್ ಶೀಟ್ ಅನ್ನು ಸರಿಸುತ್ತಾ ಕಾದು ಕುಳಿತರು.
ಜನರು ರಕ್ಷಣಾ ಕಾರ್ಯಾಚರಣೆಗೆ ಜಮಾಯಿಸಿದ್ದಾರೆ ಎಂದು ಅರಿತ ಬೆಕ್ಕು ಅಲ್ಲಿಂದ ಹಾರಿತು ಕೆಳಗೆ ಬೆಡ್ ಶೀಟ್ ಹಿಡಿದು ಕಾಯುತ್ತಿದ್ದವರು ಅದನ್ನು ಹಿಡಿದರು. ಬಳಿಕ ಬೆಕ್ಕನ್ನು ನಿವಾಸಿಗಳು ಪರೀಕ್ಷಿಸಿ, ನೀರನ್ನು ನೀಡಿದರು. ರಕ್ಷಣೆ ಮಾಡಿದವರ ಪ್ರಯತ್ನಕ್ಕೆ ಎಲ್ಲೆಡೆಯಿಂದ ಪ್ರಶಂಶೆಗಳು ವ್ಯಕ್ತವಾಗುತ್ತಿದೆ.
Proud and happy to see such acts of kindness in our beautiful city. Whoever identifies these unsung heroes, please help us thank them. pic.twitter.com/SvSBmM7Oxe — HH Sheikh Mohammed (@HHShkMohd) August 24, 2021
Proud and happy to see such acts of kindness in our beautiful city. Whoever identifies these unsung heroes, please help us thank them. pic.twitter.com/SvSBmM7Oxe
— HH Sheikh Mohammed (@HHShkMohd) August 24, 2021
ವೈರಲ್ ವಿಡಿಯೋವನ್ನು ಗಮನಿಸಿದ ದುಬೈ ದೊರೆ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರು, ಬೆಕ್ಕಿನ ರಕ್ಷಕರನ್ನು ಶ್ಲಾಘಿಸಿದರು ಮತ್ತು “ನಮ್ಮ ಸುಂದರ ನಗರದಲ್ಲಿ ಇಂತಹ ದಯೆಯ ಕಾರ್ಯಗಳನ್ನು ನೋಡಿ ಹೆಮ್ಮೆ ಮತ್ತು ಸಂತೋಷವಾಗಿದೆ. ಯಾರು ಈ ವೀರರನ್ನು ಗುರುತಿಸುತ್ತಾರೆ, ದಯವಿಟ್ಟು ಅವರಿಗೆ ಧನ್ಯವಾದ ಹೇಳಲು ಸಹಾಯ ಮಾಡಿ” ಎಂದು ಟ್ವೀಟ್ ಮಾಡಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.