ದುಬೈ (ವಿಶ್ವ ಕನ್ನಡಿಗ ನ್ಯೂಸ್) : ಭಾನುವಾರ ದುಬೈನಲ್ಲಿ ನಡೆದ ಮುಂಬೈ ಇಂಡಿಯನ್ಸ್ ಹಾಗು ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಪಂದ್ಯದ ವೇಳೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಎಲ್ಲಾ ರೀತಿಯ ಟಿ 20 ಕ್ರಿಕೆಟ್ ನಲ್ಲಿ (ಅಂತರಾಷ್ಟ್ರೀಯ, ದೇಶೀಯ ಮತ್ತು ಫ್ರಾಂಚೈಸಿ) 10,000 ರನ್ ಗಳ ಮೈಲುಗಲ್ಲನ್ನು ತಲುಪಿದ್ದಾರೆ.
32 ವರ್ಷದ ಅವರು 299 ಇನ್ನಿಂಗ್ಸ್ ಆಡಿದ್ದಾರೆ ಮತ್ತು 41.61 ರ ಸರಾಸರಿಯಲ್ಲಿ ಐದು ಶತಕ ಮತ್ತು 74 ಅರ್ಧಶತಕಗಳ ಸಹಾಯದಿಂದ 10,000 ರನ್ ಗಳ ಮೈಲುಗಲ್ಲನ್ನು ತಲುಪಿದ್ದಾರೆ. ಅವರ ಅತ್ಯಧಿಕ ವೈಯಕ್ತಿಕ ಸ್ಕೋರ್ 113. ಅವರ ವೃತ್ತಿಜೀವನದ ಸ್ಟ್ರೈಕ್-ರೇಟ್ 134 ಪ್ಲಸ್ ಆಗಿದೆ.
ವರದಿ : ಹುಸೈನ್ ಕುಂಬ್ರ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.