ಶ್ರೀನಿವಾಸಪುರ (ವಿಶ್ವಕನ್ನಡಿಗ ನ್ಯೂಸ್): ಕೋಲಾರ , ಚಿಕ್ಕಬಳ್ಳಾಪುರ ಬಿ.ಎಂ.ಸಿ.ಗಳ ಪೈಕಿ ಗುಣಮಟ್ಟದ ಹಾಲು ಉತ್ಪಾದನ ಶೇಖರಣೆಯಲ್ಲಿ ನಮ್ಮತಾಲ್ಲೂಕು ಪ್ರಥಮ ಸ್ಥಾನವನ್ನು ಪಡೆದಿದ್ದು , ಇದಕ್ಕೆ ಪ್ರೋತ್ಸಾಹಿಸಿದ ಪ್ರತಿಯೊಬ್ಬರಿಗೂ ಅಭಿನಂದನೆಗಳನ್ನು ಕೆ.ಎಂ.ಎಫ್ . ನಿರ್ದೇಶಕ ಹನುಮೇಶ್ ತಿಳಿಸಿದರು .
ತಾಲ್ಲೂಕಿನ ಶ್ಯಾಗತ್ತೂರುಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಹನುಮೇಶ್ , ಈ ಭಾಗದಲ್ಲಿ ಈಗಾಗಲೆ 9 ಬಿ.ಎಮ್.ಸಿ.ಗಳಿದ್ದು ಈಗ 25 ಬಿ.ಎಂ.ಸಿ.ಗಳಿಗೆ ಏರಿಕೆಯಾಗಿದೆ , ಅಲ್ಲದೆಗುಣ ಮಟ್ಟ ಹಾಲು ಶೇಕರಣೆಯಲ್ಲಿ 2 ಜಿಲ್ಲೆಗಳಲ್ಲಿ ನಮ್ಮತಾಲ್ಲೂಕು ಪ್ರಥಮ ಸ್ಥಾನದಲ್ಲಿರುವುದು ಹೆಮ್ಮೆಯ ವಿಷಯ , ಇದಕ್ಕೆ ಕಾರಣೀಭೂತರಾದ ಹಾಲು ಉತ್ಪಾದಕರು , ಸಹಕಾರಿಗಳು ಸರ್ವರಿಗೂ ಕೃತಜ್ಞತೆಗಳನ್ನು ಸಲ್ಲಿಸಿ ಹಾಗೆಯೆ ಸರ್ಕಾರದಿಂದ ಬರುವಎಲ್ಲಾ ಸೌಲಭ್ಯಗಳನ್ನು ಕೆ.ಎಂ.ಎಫ್ . ಮೂಲಕ ನಿಗಧಿತಅವಧಿಯಲ್ಲಿತಲುಪಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಇದನ್ನು ಬಳಕ್ಕೆ ಮಾಡಿಕೊಂಡು ಅಭಿವೃದ್ಧಿಯಾಗಬೇಕೆಂದು ತಿಳಿಸಿದರು.
ಡೈರಿಅಧ್ಯಕ್ಷಎಸ್.ವಿ . ಸುಧಾಕರ್ ಮಾತನಾಡಿ , ನಾನು ಅಧ್ಯಕ್ಷನಾದ ಮೇಲೆ ಸರ್ಕಾರದಿಂದ ಬರುವ ಪ್ರೋತ್ಸಾಹಧನ 5 ರೂಗಳ ಜೊತೆಗೆ ಈ ಸಂಘದಿಂದ ಬೋನಸ್ ಮೊತ್ತವನ್ನು ಸಹ ಉತ್ಪಾದಕರಿಗೆ ನೀಡುತ್ತಿದ್ದೇವೆ . ನಮ್ಮ ಸಂಘದಲ್ಲಿ ಅತಿ ಹೆಚ್ಚು ಹಾಲನ್ನು ಹಾಕಿದ 3 ಮಂದಿಯನ್ನು ಗುರ್ತಿಸಿ ಅಭಿನಂದಿಸಿ ಪ್ರೋತ್ಸಾಹಿಸುವ ಕೆಲಸ ಮಾಡಿದ್ದೇವೆ .
ಇನ್ನೂ ಹೆಚ್ಚಿನರೀತಿಯಲ್ಲಿ ಉತ್ಪಾದಕರುಗುಣಮಟ್ಟದ ಹಾಲನ್ನು ಹಾಕಲು ಮುಂದಾಗಿಡೈರಿಯಿಂದ ಬರುವ ಸೌಲಭ್ಯವನ್ನು ಪಡೆದುಆರ್ಥಿಕ ಸ್ವಾವಲಂಬಿಗಳಾಗಬೇಕೆಂದು ತಿಳಿಸಿದರು . ಡೈರಿಯಲ್ಲಿ ಸುಮಾರು 10 ವರ್ಷಗಳ ಕಾಲ ಸೇವೆ ಸಲ್ಲಿಸಿ ವಯೋ ನಿವೃತ್ತಿ ಪಡೆದ ಕಾರ್ಯದರ್ಶಿ ಕೃಷ್ಣಗೌಡ , ಗಾಮ ಪಂಚಾಯಿತಿ ಸದಸ್ಯರಾದಎಸ್.ವಿ . , ವಿವೇಕಾನಂದ , ಲಕ್ಷ್ಮಿ ದೇವಯ್ಯ ಇವರನ್ನು ಗೌರವಿಸಲಾಯಿತು .
ಈ ಸಂದರ್ಭದಲ್ಲಿ ಉಪಾಧ್ಯಕಎಸ್.ವಿ . ವೆಂಕಟೇಶ್ಗೌಡ , ಮಂಜುನಾಥ್ , ಮಾಜಿಅಧ್ಯಕ್ಷ ಬಚ್ಚಿರೆಡ್ಡಿ , ಎಸ್.ಆರ್ . ಕೃಷ್ಣಪ್ಪ , ಸಂಘದ ನಿರ್ದೇಶಕರುಗಳು ಹಾಲು ಉತ್ಪಾದಕರು ಹಾಜರಿದ್ದರು .
ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.